ಸಂವಿಧಾನ ಪ್ರತಿಯೊಬ್ಬರ ಹಕ್ಕು: ರಂಗನಾಥ್‌

| Published : Jan 28 2024, 01:19 AM IST

ಸಾರಾಂಶ

ಕುಣಿಗಲ್‌ನಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ

ಕನ್ನಡ ಪ್ರಭ ವಾರ್ತೆ ಕುಣಿಗಲ್

ಸಂವಿಧಾನ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ಮತ್ತು ಬದುಕುವ ಸ್ವಾತಂತ್ರವನ್ನು ಕಲ್ಪಿಸಿ ಕೊಟ್ಟಿದೆ ಪ್ರಜಾಪ್ರಭುತ್ವದ ಮುಖ್ಯ ಗ್ರಂಥ ಸಂವಿಧಾನ ಎಂದು ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ತಿಳಿಸಿದರು.

ಪಟ್ಟಣದ ಜಿಕೆಎಂಎಸ್ ಶಾಲ ಮೈದಾನದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಂಬೇಡ್ಕರ್‌ ರಚಿಸಿದ ಸಂವಿಧಾನ ದೀನ ದಲಿತ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಮಹಿಳೆ ವೃದ್ಧರು ಸೇರಿದಂತೆ ಎಲ್ಲರಿಗೂ ಕೂಡ ಸಾಮಾಜಿಕ ಭದ್ರತೆಯನ್ನು ಕಲ್ಪಿಸಿದೆ. ಸಂವಿಧಾನದ ಹಲವಾರು ನಿಯಮಗಳನ್ನು ನಾವು ಪಾಲಿಸುವುದರಿಂದ ಸಮಾನತೆ ಎಲ್ಲರಲ್ಲೂ ಉಂಟಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಕೆ ಬಿಎಮ್ಎಸ್ ಶಾಲಾ ವಿದ್ಯಾರ್ಥಿಗಳು ನಡೆಸಿದ ಪರಿಸರ ಕಾಳಜಿಯ ರೂಪಕ ಹಾಗೂ ರಂಗನಾಥ್ ಕ್ರಿಕೆಟ್ ಕ್ಲಬ್ ಇಂದ ನಡೆದ ಸೈಕಲ್ ಜಾಥಾ ಅಚ್ಚುಮೆಚ್ಚಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮತ್ತು ಸಂಗೀತ ಕಾರ್ಯಕ್ರಮಗಳು ನಡೆದವು.

ಇದೇ ಸಂದರ್ಭದಲ್ಲಿ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಆರ್‌. ರಂಗಸ್ವಾಮಿ ಕೃಷಿ ಇಲಾಖೆಯ ದೇವರಾಜ್ ತಾಪಂ ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು,

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಶ್ವನಾಥ್ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎ ಜೋಸೆಫ್, ಡಿವೈಎಸ್ಪಿ ಲಕ್ಷ್ಮಿಕಾಂತ್, ಸಿಪಿಐ ನವೀನ ಗೌಡ ಹಾಗೂ ಮಾಧ್ಯ ನಾಯಕ್ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಪುರಸಭಾ ಮುಖ್ಯ ಅಧಿಕಾರಿ ಪಿ. ಶಿವಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನಿ ಪಾಳ್ಯ ರಮೇಶ್ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.