ಭಾರತದ ಎಲ್ಲ ರೀತಿ ಅಭಿವೃದ್ಧಿಗೆ ಸಂವಿಧಾನ ಕಾರಣ: ಶಾಸಕ ಸಿ.ಎನ್‌.ಬಾಲಕೃಷ್ಣ

| Published : Feb 12 2024, 01:30 AM IST / Updated: Feb 12 2024, 03:59 PM IST

ಸಾರಾಂಶ

ಭಾರತ ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆಯಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ನುಗ್ಗೇಹಳ್ಳಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಪ್ರಚಾರ ರಥಕ್ಕೆ ಶುಭಕೋರಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಭಾರತ ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆಯಲು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿ ಕೇಂದ್ರದ ಬಾಲಕಿಯರ ಹಿರಿಯ ಪಾಠಶಾಲೆ ಆವರಣದಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಂವಿಧಾನ ಜಾಗೃತಿ ಜಾಥಾ ಪ್ರಚಾರ ರಥಕ್ಕೆ ಶುಭಕೋರಿ ಮಾತನಾಡಿದರು.

ಭಾರತ ದೇಶ ಅಭಿವೃದ್ಧಿಯಲ್ಲಿ ಸದ್ಯ 10ನೇ ಸ್ಥಾನದಲ್ಲಿದ್ದು ಮುಂಬರುವ ಕೆಲವೇ ವರ್ಷಗಳಲ್ಲಿ 5ನೇ ಸ್ಥಾನಕ್ಕೆ ಬರುವುದರಲ್ಲಿ ಅಚ್ಚರಿ ಇಲ್ಲ. ಇಡೀ ವಿಶ್ವವೇ ಭಾರತದ ಸಂವಿಧಾನಕ್ಕೆ ಗೌರವ ಕೊಡುತ್ತಿದೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದು ಶಾಸಕಾಂಗ, ಕಾರ್ಯಾಂಗ ಅವರ ಆಶಯಕ್ಕೆ ತಕ್ಕಂತೆ ಸಂವಿಧಾನದ ಅಶೋತ್ತರಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. 

ತಾಲೂಕಿನ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಂವಿಧಾನ ಜಾಗೃತಿ ಪ್ರಚಾರ ವಾಹನ ಎಲ್ಲೆಡೆ ಸಂಚರಿಸುತ್ತಿದೆ. 

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಡಾ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಹೋಬಳಿ ಕೇಂದ್ರದ ಪ್ರಾರಂಭದಲ್ಲಿ ಸಿಗುವ ದರ್ಶಿನಿ ಪ್ರೌಢಶಾಲೆ ಮುಂಭಾಗ ಸಂವಿಧಾನ ಜಾಗೃತಿ ಜಾಥಾ ಪ್ರಚಾರ ವಾಹನಕ್ಕೆ ಶಾಸಕ ಸಿಎನ್ ಬಾಲಕೃಷ್ಣ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು.

ಹೋಬಳಿ ಕೇಂದ್ರದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳು ಸಂವಿಧಾನ ಜಾಗೃತಿ ಕುರಿತು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಜಾಗೃತಿ ಮೂಡಿಸಿದರು. ಡಾ. ಅಂಬೇಡ್ಕರ್ ಜೀವನಾಧಾರಿತ ನಾಟಕ ಮತ್ತು ನೃತ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಜಗದೀಶ್, ಉಪಾಧ್ಯಕ್ಷ ದ್ರಾಕ್ಷಾಯಿಣಿ ಯಲ್ಲಪ್ಪ, ಕೆಪಿಎಸ್ ಪ್ರಾಂಶುಪಾಲ ಮರುಳಾರಾದ್ಯ, ದರ್ಶಿನಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಲೋಕೇಶ್, ಹೋಬಳಿ ಕಂದಾಯ ಅಧಿಕಾರಿ ಲೋಕೇಶ್, ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಧರ್ಮಯ್ಯ ಹೋಬಳಿ ಸಂಚಾಲಕ ಬಡಕನಹಳ್ಳಿ ಲಕ್ಷ್ಮಣ್.

ಆದಿ ಜಾಂಬವ ತಾಲೂಕು ಅಧ್ಯಕ್ಷ ಪುನೀತ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ ಶಂಕರ್, ಮಾಜಿ ಉಪಾಧ್ಯಕ್ಷ ಎಚ್ ಎಂ ನಟರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ನಟರಾಜ್, ಮಂಜುನಾಥ್.

ಶಬೀನತಾಜ್ ಮೊಹಮ್ಮದ್ ಜಾವೀದ್, ಜಬೀನ್ ತಾಜ್ ಸಾಧಿಕ್ ಪಾಷಾ, ರೇಷ್ಮಾ ಅಲ್ಲಾಭಕ್ಷಿ, ರಾಧಾ ಮಂಜುನಾಥ್, ರಮ್ಯಾ ಲೋಕೇಶ್, ಮೂರ್ತಿ, ಪೋಲಿಸ್ ಬೆಟ್ಟಯ್ಯ, ದೇವರಾಜ್, ಕೃಷ್ಣ, ಧರ್ಮ, ಸೋಸಲಗೆರೆ ವೆಂಕಟೇಶ್, ಜಿತೇಂದ್ರ ಕುಮಾರ್, ಶಿವರಾಂ, ದೊರೆಸ್ವಾಮಿ, ತೋಟಿ ನಾಗರಾಜ್, ಮಹಮ್ಮದ್ ಜಾವೀದ್, ಪುಟ್ಟಸ್ವಾಮಿ ಇದ್ದರು. 

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.