ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯದೊಂದಿಗೆ ಬದುಕಲು ಸಂವಿಧಾನವೇ ಮೂಲ ಕಾರಣ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದಡಿಯಲ್ಲಿ ಆಡಳಿತ ನಡೆಸುಂವತಾಗಲು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಕೊಡುಗೆ 75 ವರ್ಷ ತುಂಬಿದ ಸಂಭ್ರಮದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಸಂವಿಧಾನದ ಆಶಯ ತಿಳಿದುಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ಬಂದ ನಂತರ ಯಾವ ರೀತಿಯಲ್ಲಿ ದೇಶದ ಆಳ್ವಿಕೆ ನಡೆಯಬೇಕೆಂದು ತಿಳಿಸಿಕೊಡುವುದೇ ಸಂವಿಧಾನವಾಗಿದೆ. ಬಾಬಾ ಸಾಹೇಬರ ಅದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು. ಉತ್ತಮ ಪಥ ಸಂಚಲನ ಮಾಡಿದ ಶಾಲೆ ವಿದ್ಯಾರ್ಥಿಗಳಿಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಪ್ರಶಸ್ತಿ ನೀಡಿ ಅಭಿನಂದಿಸಿದರು.
ಈ ವೇಳೆ ತಾಪಂ ಇಒ ಮಮತ, ಬಿಇಒ ಚಂದ್ರಪಾಟೀಲ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಸೆಸ್ಕ್ ಎಇಇ ಎಚ್.ಎಸ್. ಪ್ರೇಮ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಪಿ.ವೀರಭದ್ರಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಸದಸ್ಯರಾದ ಎಂ.ಎನ್.ಶಿವಸ್ವಾಮಿ, ಇಂದ್ರಮ್ಮ ದೊಡ್ಡಯ್ಯ, ನೂರುಲ್ಲಾ, ಎಂ.ಆರ್.ರಾಜಶೇಖರ್, ಪ್ರಮೀಳಾ, ಆತೀಯಾ ಬೇಗಂ, ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ಸೇರಿದಂತೆ ಇತರರು ಇದ್ದರು.ತೊರೆಕಾಡನಹಳ್ಳಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಹಲಗೂರು: ತೊರೆಕಾಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.ಎಸ್ ಡಿಎಂಸಿ ಅಧ್ಯಕ್ಷ ಮಹೇಶ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕಿ ಎನ್.ರೂಪ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಹಲವು ನಾಯಕರು ಹಾಗೂ ಅಂಬೇಡ್ಕರ್ ಅವರ ಪ್ರಯತ್ನದ ಫಲವಾಗಿ ಸಂವಿಧಾನ ರಚನೆಗೊಂಡು ದೇಶದ ಜನರು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ತೇಜ್ ಕುಮಾರ್ (ಶ್ಯಾಮ್) ಅವರಿಗೆ ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್ ಡಿಎಂ ಸಿ ಸದಸ್ಯರು ಮತ್ತು ಶಿಕ್ಷಕಿಯಾದ ಬಿ.ಕಮಲಕ್ಕ, ಅತಿಥಿ ಶಿಕ್ಷಕಿ ಎಂ.ಎಸ್. ಕಾವ್ಯ ಹಾಗೂ ಮುಖಂಡರು ಇದ್ದರು.ಆಂಜನೇಯಸ್ವಾಮಿಗೆ ತ್ರಿವರ್ಣ ಧ್ವಜದ ಅಲಂಕಾರಹಲಗೂರು:ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೇವ ಆಂಜನೇಯಸ್ವಾಮಿಗೆ 75ನೇ ಗಣರಾಜ್ಯೋತ್ಸವದ ಅಂಗವಾಗಿ ದೇವರ ಮೂರ್ತಿಗೆ ತ್ರಿವರ್ಣ ಧ್ವಜದ ರೀತಿ ಹೂವಿನಿಂದ ಅಲಂಕಾರ ಮಾಡಿರುವುದು ಗಮನ ಸೆಳೆಯಿತು.ಅರ್ಚಕರಾದ ಶ್ರೀಕಾಂತ್ ಮಾತನಾಡಿ, ಗಣರಾಜ್ಯೋತ್ಸವದ ದಿನದಂದು ಸಾಮಾನ್ಯವಾಗಿ ಎಲ್ಲರೂ ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ, ಪ್ರಸಿದ್ಧ ಪ್ರವಾಸಿಗರ ಹಾಗೂ ಜಿಲ್ಲೆಯ ಭಕ್ತರ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಜೊತೆಗೆ ತ್ರಿವರ್ಣ ಧ್ವಜದ ರೀತಿಯ ಬಣ್ಣದಲ್ಲೇ ಹೂವಿನಿಂದ ದೇವರ ಮೂರ್ತಿಗೆ ಅಲಂಕರಿಸಿದ್ದೇವೆ. ಮೂರು ದಿನಗಳ ಕಾಲ ರಜೆ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಇಂದಿನ ಅಲಂಕಾರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.