ದೇಶದ ಪರಮೋಚ್ಚ ಶಾಸನವೇ ಸಂವಿಧಾನ

| Published : Nov 29 2024, 01:04 AM IST

ಸಾರಾಂಶ

ಭಾರತದ ಸಂವಿಧಾನ ರಚನಾ ಕಾರ್ಯವು 1946ರಲ್ಲಿ ಪ್ರಾರಂಭವಾಗಿ 1949 ರಲ್ಲಿ ಮುಗಿದರೂ ವಾಸ್ತವವಾಗಿ 2ವರ್ಷ,11ತಿಂಗಳು,18 ದಿನಗಳ ಕಾಲ ಸಂವಿಧಾನ ರಚನೆ ಮಾಡಲಾಯಿತು. ಭಾರತ ದೇಶದ ಪರಮೋಚ್ಚ ಶಾಸನವೇ ಸಂವಿಧಾನವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಇದನ್ನು ಓದಿ ಅರ್ಥೈಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

1949ರ ನವೆಂಬರ್ 26 ರಂದು ದೇಶದ ಪರಮೋಚ್ಚ ಶಾಸನವಾದ ಸಂವಿಧಾನವನ್ನು ಸಂಸತ್ತು ಅಂಗೀಕರಿಸಿದೆ ದಿನವಾಗಿದೆ. ಇದನ್ನು 2015 ಕ್ಕೂ ಮೊದಲು ಭಾರತದ ಕಾನೂನಿನ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದು ಸೂಲಿಬೆಲೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಅಮೀರ್‌ಪಾಷಾ ತಿಳಿಸಿದರು.

ನಗರದ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸಂವಿಧಾನ ಮೂಲಭೂತ ತತ್ವಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ಸಂವಿಧಾನ ಓದಿ ಅರ್ಥೈಸಿಕೊಳ್ಳಿ

ವಿಶ್ವದಲ್ಲಿ ಇಂಗ್ಲೆಂಡ್ ಸಂವಿಧಾನ ಹೊರತುಪಡಿಸಿ 214 ದೇಶಗಳು ತಮ್ಮದೇ ಆದ ಲಿಖಿತ ಸಂವಿಧಾನವನ್ನು ಹೊಂದಿವೆ. ನಮ್ಮ ಸಂವಿಧಾನ ರಚನಾ ಕಾರ್ಯವು 1946ರಲ್ಲಿ ಪ್ರಾರಂಭವಾಗಿ 1949 ರಲ್ಲಿ ಮುಗಿದರೂ ವಾಸ್ತವವಾಗಿ 2ವರ್ಷ,11ತಿಂಗಳು,18 ದಿನಗಳ ಕಾಲ ಸಂವಿಧಾನ ರಚನೆ ಮಾಡಲಾಯಿತು ಎಂದು ಭಾಬಾ ಸಾಹೇಬರೇ ಹೇಳಿದ್ದಾರೆ. ಭಾರತ ದೇಶದ ಪರಮೋಚ್ಚ ಶಾಸನವೇ ನಮ್ಮ ಸಂವಿಧಾನವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಇದನ್ನು ಓದಿ ಅರ್ಥೈಸಿಕೊಳ್ಳಬೇಕಿದೆ ಎಂದರು.ನಮ್ಮದು ಲಿಖಿತ ಮತ್ತು ಬೃಹತ್ ಸಂವಿಧಾನವಾಗಿದೆ.ಇಂಗ್ಲೇಂಡ್ ಸಂವಿಧಾನ ಹೊರತು ಪಡಿಸಿ ಉಳಿದವು ಲಿಖಿತ ರೂಪದಲ್ಲಿ ಇದೆ.ನಮ್ಮ ಸಂವಿಧಾನದಲ್ಲಿ 395 ವಿಧಿಗಳು,8ಅನುಸೂಚಿಗಳು,22 ಭಾಗಗಳನ್ನು ಒಳಗೊಂಡಿದೆ.ನಮ್ಮದು ಸಂಸದೀಯ ವ್ಯವಸ್ಥೆಯ ಸರ್ಕಾರ ಹೊಂದಿದ್ದರೆ, ಅಮೆರಿಕದ್ದು ಅಧ್ಯಕ್ಷೀಯ ಸರ್ಕಾರವಾಗಿದೆ. ಚುನಾವಣೆ ನಮ್ಮ ಸಂವಿಧಾನದ ಮಹಾಶಕ್ತಿ ಎಂದರು.

ಹೊಸಕೋಟೆ ಕಾಲೇಜಿನ ಡಾ.ಈರಣ್ಣ ಮಾತನಾಡಿದರು. ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ರಾಜ್ಯ ಶಾಸ್ತ್ರ ಪ್ರಾಧ್ಯಾಪಕಿ ಡಾ.ಸಿ.ಜಿ.ಪದ್ಮಕುಮಾರಿ. ಅತಿಥಿ ಉಪನ್ಯಾಸಕ ಹರೀಶ್, ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ರಾಮಕೃಷ್ಣಪ್ಪ, ಅಶ್ವತ್ಥ್ ನಾರಾಯಣ, ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ಹರೀಶ್ ಮತ್ತಿತರರು ಇದ್ದರು.