ಭಾರತ ಸಂವಿಧಾನ ಶ್ರೇಷ್ಠವಾದುದು: ನ್ಯಾ. ದೇವೇಂದ್ರಪ್ಪ ಬಿರಾದಾರ್

| Published : Nov 29 2024, 01:00 AM IST

ಭಾರತ ಸಂವಿಧಾನ ಶ್ರೇಷ್ಠವಾದುದು: ನ್ಯಾ. ದೇವೇಂದ್ರಪ್ಪ ಬಿರಾದಾರ್
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ವಿಶ್ವದಲ್ಲೆ ಅತ್ಯುತ್ತಮವಾದುದು ಭಾರತ ಸಂವಿಧಾನ. ಅದರ ಮೂಲ ಆಶಯಗಳಿಗೆ ದಕ್ಕೆಯಾಗದಂತೆ ನಾವೆಲ್ಲರೂ ಕಾಪಾಡಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ದೇವೇಂದ್ರಪ್ಪ ಬಿರಾದಾರ್ ಹೇಳಿದರು.

ವಿಜಯಪುರ: ವಿಶ್ವದಲ್ಲೆ ಅತ್ಯುತ್ತಮವಾದುದು ಭಾರತ ಸಂವಿಧಾನ. ಅದರ ಮೂಲ ಆಶಯಗಳಿಗೆ ದಕ್ಕೆಯಾಗದಂತೆ ನಾವೆಲ್ಲರೂ ಕಾಪಾಡಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ದೇವೇಂದ್ರಪ್ಪ ಬಿರಾದಾರ್ ಹೇಳಿದರು.

ಹೋಬಳಿಯ ನಾರಾಯಣಪುರದಲ್ಲಿ ಸಾಯಿ ಕಾನೂನು ಮಹಾವಿದ್ಯಾಲಯ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಸಂವಿಧಾನದಡಿ ಬದುಕು ಕಟ್ಟಿಕೊಂಡು, ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಿದೆ. ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರು ಕಂಠಪಾಠ ಮಾಡಬೇಕು. ಅದನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಲಿಷ್ಠ ಭಾರತವನ್ನು ಕಟ್ಟುವಂತಹ ಪ್ರಜೆಗಳಾಗಬೇಕು. ನಾವು ಹೇಗೆ ಬದುಕಬೇಕು, ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಅಂಶಗಳು ಮನದಟ್ಟಾಗುತ್ತವೆ. ವಿದ್ಯಾರ್ಥಿಗಳಿಗೆ ವಿದ್ಯೆಯಷ್ಟೆ ವಿನಯವೂ ಮುಖ್ಯ, ವಿದ್ಯೆಯನ್ನು ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು. ಅಕ್ರಮ, ಅನ್ಯಾಯವಾಗಿ ಸಂಪಾದನೆ ಮಾಡಬಾರದು ಎಂದು ಹೇಳಿದರು.

ದೇವನಹಳ್ಳಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಜಿ.ಕುಮಾರ್, ಗ್ರಾಪಂ ಅಧ್ಯಕ್ಷ ಮುರಳೀಧರ್, ಉಚ್ಚ ನ್ಯಾಯಾಲಯದ ಸಹಾಯಕ ವಿಲೇಖನಾಧಿಕಾರಿ(ಶಿಷ್ಟಾಚಾರ) ಡಿ.ಆರ್.ಬಾಲಕೃಷ್ಣ, ಸಾಯಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಆರ್.ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಎಲ್.ಕೃಷ್ಣೋಜಿರಾವ್, ಕಾರ್ಯದರ್ಶಿ ಮುನೇಗೌಡ, ಖಜಾಂಚಿ ಮಾರೇಗೌಡ, ವಕೀಲರಾದ ಡಿ.ಎಂ.ಮುನಿಯಪ್ಪ, ವೆಂಕಟೇಶ್, ರವಿಕುಮಾರ್, ರಾಮಾಂಜಿನಪ್ಪ, ಸಾಯಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ.ನಾರಾಯಣಸ್ವಾಮಿ, ಪ್ರಾಂಶುಪಾಲ ಜಿ.ವಿನೋದ್ ಕುಮಾರ್, ಪ್ರೊ.ಎನ್.ಶ್ರೀನಿವಾಸಮೂರ್ತಿ ಇತರರಿದ್ದರು.

ವಿಜೆಪಿ ೨೭

ವಿಜಯಪುರ ಹೋಬಳಿ ನಾರಾಯಣಪುರ ಸಾಯಿ ಸಮೂಹ ಸಂಸ್ಥೆ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.