ಸಾರಾಂಶ
ಹರಿಹರ: ತನ್ನ ಪ್ರಕರಣವನ್ನ ಮುಚ್ಚಿ ಹಾಕಲು ಡಿ.ಹನುಮಂತಪ್ಪ ಸಮಾಜದ ಮುಖಂಡರನ್ನು ದಿಕ್ಕು ತಪ್ಪಿಸಿ ವಿನಾಕಾರಣ ಶಾಸಕ ಬಿ.ಪಿ.ಹರೀಶ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನಗರಸಭಾ ಬಿಜೆಪಿ ಸದಸ್ಯ ಆಟೋ ಹನುಮಂತಪ್ಪ ತಿಳಿಸಿದರು.
ಹರಿಹರ: ತನ್ನ ಪ್ರಕರಣವನ್ನ ಮುಚ್ಚಿ ಹಾಕಲು ಡಿ.ಹನುಮಂತಪ್ಪ ಸಮಾಜದ ಮುಖಂಡರನ್ನು ದಿಕ್ಕು ತಪ್ಪಿಸಿ ವಿನಾಕಾರಣ ಶಾಸಕ ಬಿ.ಪಿ.ಹರೀಶ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನಗರಸಭಾ ಬಿಜೆಪಿ ಸದಸ್ಯ ಆಟೋ ಹನುಮಂತಪ್ಪ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಶ್ರಯ ಕಾಲೋನಿಯಲ್ಲಿರುವ ಶ್ರೀ ಶಕ್ತಿ ಜಯದೇವಿ ಮಹಿಳಾ ಮಂಡಳಿ ನ್ಯಾಯ ಬೆಲೆ ಅಂಗಡಿ ಬಳಿ ಪಡಿತರ ರಾಗಿ ಮತ್ತು ಅಕ್ಕಿ ಚೀಲಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ವಾರ್ಡಿನ ಜನರ ದೂರಿನ ಅನ್ವಯ ವಾರ್ಡಿನ ಸದಸ್ಯನಾಗಿ ಪರಿಶೀಲಿಸಿ ದೂರು ನೀಡದ್ದೇನೆ. ಇದರಿಂದ ಸಿಟ್ಟಿಗೆದ್ದ ನ್ಯಾಯ ಬೆಲೆ ಅಂಗಡಿಯ ಡಿ.ಹನುಮಂತಪ್ಪ ಹಾಗೂ ಅವರ ಪತ್ನಿ ಶಾರದಮ್ಮ ಎಂಬುವರು ನನ್ನ ಮೇಲೆ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಅವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇನೆ ಹಾಗೂ ಪಡಿತರ ಮತ್ತು ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದರು.
ನನ್ನ ಮೇಲೆ ಹಲ್ಲೆ ಮಾಡಿರುವ ಹನುಮಂತಪ್ಪನವರು ಸಮಾಜದ ಮುಖಂಡರ ದಿಕ್ಕು ತಪ್ಪಿಸಿ ಪತ್ರಿಕಾಗೋಷ್ಠಿ ನಡೆಸಿ ವಿನಾಕಾರಣ ಶಾಸಕ ಬಿ.ಪಿ ಹರೀಶ್ ಮೇಲೆ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿರುವುದು ನನ್ನ ಸ್ವಹಿತಾಸಕ್ತಿಗಾಗಿ ಅಲ್ಲ ಸಾರ್ವಜನಿಕರ ಒಳಿತಿಗಾಗಿ. ಬಡವರ ಅಕ್ಕಿ ರಾಗಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವುದನ್ನು ತಡೆಯಲಿಕ್ಕಾಗಿ ಎಂದು ಹೇಳಿದರು.ಒಂದು ರಾಷ್ಟ್ರೀಯ ಪಕ್ಷದ ಸದಸ್ಯನ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಗ್ರಾಮಾಂತರ ಘಟಕ ಅಧ್ಯಕ್ಷರ ನೇತೃತ್ವದಲ್ಲಿ ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದೆ. ಇದನ್ನೇ ಮಹಾ ತಪ್ಪೆನ್ನುವ ರೀತಿಯಲ್ಲಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಇವರುಗಳ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುತ್ತೇನೆ ಎಂದು ಬ್ಲಾಕ್ ಮೆಲ್ ಮಾಡುತ್ತಿರುವುದನ್ನು ಖಂಡಿಸಿದರು.ಒಬ್ಬ ಜನಪತ್ರಿನಿಧಿಯಾದ ನನ್ನ ಮೇಲೆ ಹಲ್ಲೆ ಮಾಡಿರುವ ಇವರು ಈಗ ಶಾಸಕರು ಮತ್ತು ಅವರ ಬೆಂಬಲಿಗರಿಂದ ತಮ್ಮ ಮೇಲೆ ಹಲ್ಲೆ ನಡೆಸುವ ಅಪಾಯ ಇದೆ ಎಂದು ರಕ್ಷಣೆ ಕೋರಿ ಮನವಿ ಮಾಡುತ್ತೇನೆ ಎಂಬುದು ಹಾಸ್ಯಾಸ್ಪಾದ ಎಂದರು.ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪಡಿತನ ದಾನ್ಯಗಳು ತಮ್ಮದಲ್ಲ ಅಂದ ಮೇಲೆ ಇವರಿಗ್ಯಾಕೆ ಸಿಟ್ಟು ಅವರ ನಡವಳಿಕೆ ಇಂದ ಪಡಿತರ ಧಾನ್ಯ ಅವರದೆ ಎನ್ನುವ ಅನುಮಾನವಾಗುತ್ತದೆ. ಪೊಲೀಸ್ ಇಲಾಖೆಯವರು ಸೂಕ್ತ ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎಲ್ ತಿಪ್ಪೇಶಿ, ಜಗದೀಶ್, ವೀರೇಶ್ ಆದಪುರ್, ನಾಗರಾಜ್ ಸೇರಿದಂತೆ ಇತರರು ಇದ್ದರು.