ಯೂತ್ಸ್ ಅಸೋಸಿಯೇಷನ್‌ ನಿಂದ ವಸತಿ ನಿಲಯ ನಿರ್ಮಾಣ

| Published : Aug 01 2025, 12:30 AM IST

ಸಾರಾಂಶ

ಚಿಕ್ಕಮಗಳೂರು: ನಗರದ ಲ್ಲಿರುವ ಅಸೋಸಿಯೇಷನ್ನಿನ ಒಂದು ಎಕರೆ ಜಾಗದಲ್ಲಿ ಭವ್ಯವಾದ ವಸತಿ ನಿಲಯ ನಿರ್ಮಿಸಲಾಗುವುದು ಎಂದು ಯೂತ್ಸ್ ಹಾಸ್ಟೆಲ್ಸ್ ಅಸೋಸಿಯೇಷನ್‌ ಅಧ್ಯಕ್ಷ ಎಚ್.ಎಂ.ನಾರಾಯಣ್ ತಿಳಿಸಿದರು.

ಚಿಕ್ಕಮಗಳೂರು: ನಗರದ ಲ್ಲಿರುವ ಅಸೋಸಿಯೇಷನ್ನಿನ ಒಂದು ಎಕರೆ ಜಾಗದಲ್ಲಿ ಭವ್ಯವಾದ ವಸತಿ ನಿಲಯ ನಿರ್ಮಿಸಲಾಗುವುದು ಎಂದು ಯೂತ್ಸ್ ಹಾಸ್ಟೆಲ್ಸ್ ಅಸೋಸಿಯೇಷನ್‌ ಅಧ್ಯಕ್ಷ ಎಚ್.ಎಂ.ನಾರಾಯಣ್ ತಿಳಿಸಿದರು.

ನಗರದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ನಡೆದ ಯೂತ್ಸ್ ಹಾಸ್ಟೆಲ್ಸ್ ಅಸೋಸಿಯೇಷನ್ನಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ ದೇಶಾದ್ಯಂತ ಇರುವ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ನಿನ ಸದಸ್ಯರು ಜಿಲ್ಲೆಗೆ ಆಗಮಿಸಿದಾಗ ಅವರಿಗೆ ಕಡಿಮೆ ದರದಲ್ಲಿ ಅದನ್ನು ಬಾಡಿಗೆಗೆ ನೀಡಲಾಗುವುದು ಎಂದರು.ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಅಂತಾರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿದ್ದು, ಅದು ಹಲವು ರೀತಿಯಲ್ಲಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಸಂಘದ ಉಪಾಧ್ಯಕ್ಷ ಡಿ. ಪಾರ್ಥನಾಥ್ ಮಾತನಾಡಿ 1998 ರಲ್ಲಿ ಆರಂಭಗೊಂಡ ಸಂಸ್ಥೆ ಯುವಜನತೆ ಮತ್ತು ಸಾರ್ವಜನಿ ಕರಿಗಾಗಿ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ ಎಂದು ಹೇಳಿದರು.ಸಂಘದ ಉಪಾಧ್ಯಕ್ಷ ಎಚ್.ಎಸ್. ಮಂಜಪ್ಪ ವಾರ್ಷಿಕ ವರದಿ ಮಂಡಿಸಿದರು. ಚೇರ್ಮನ್ ಸಿ.ಆರ್. ಶಿವಾನಂದ, ಕಾರ್ಯದರ್ಶಿ ಬಿ.ಎಚ್. ಅಲ್ತಾಫ್ ರೆಹಮಾನ್, ನಿರ್ದೇಶಕ ಪ್ರಭಾಕರ್, ಎಲ್.ವಿ. ಕೃಷ್ಣಮೂರ್ತಿ, ಬಿ. ಎಂ.ಕುಮಾರ್ ಮಾತನಾಡಿದರು.ಸಂಘದ ನಿವೇಶನಕ್ಕಾಗಿ ಶ್ರಮಿಸಿದ ಉಪಾಧ್ಯಕ್ಷ ಡಿ.ಪಾರ್ಥನಾಥ್, ಎಚ್.ಎಸ್.ಮಂಜಪ್ಪ ಚೇರ್ಮನ್ ಸಿ. ಆರ್. ಶಿವಾನಂದ ರನ್ನು ಸನ್ಮಾನಿಸಲಾಯಿತು. ನಾಗೇಶ್ ಮತ್ತು ವಿಶ್ವನಾಥ್ ರನ್ನು ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಸಂಘದ ಖಜಾಂಚಿ ಜಿ.ಎಸ್. ಚೇತನ್, ಸಂಘಟನಾ ಕಾರ್ಯದರ್ಶಿ ಎಂ.ಎಸ್. ನಟರಾಜ್, ನಿರ್ದೇಶಕರಾದ ಎಸ್.ಎನ್. ಸಚ್ಚಿದಾನಂದ, ಜಿ.ಅರವಿಂದ್, ಇ.ಎಂ. ಮಧುಸೂದನ್, ಬಿ.ವಿ.ರಾಧಾಕೃಷ್ಣ ಶೇಟ್ ಉಪಸ್ಥಿತರಿದ್ದರು.