ಸಾರಾಂಶ
ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಿತ್ರದುರ್ಗದ ಗೊಲ್ಲಗಿರಿಯಲ್ಲಿ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ.
ಯಾದವ (ಗೊಲ್ಲ) ಸಮಾಜದ ಸಂಘಟನಾ ಸಭೆಯಲ್ಲಿ ಕೃಷ್ಣ ಯಾದವ ಮಹಾ ಸಂಸ್ಥಾನದ ಯಾದವಾನಂದ ಸ್ವಾಮಿಗಳು
ಕನ್ನಡಪ್ರಭ ವಾರ್ತೆ ಕನಕಗಿರಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಿತ್ರದುರ್ಗದ ಗೊಲ್ಲಗಿರಿಯಲ್ಲಿ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ ಎಂದು ಕೃಷ್ಣ ಯಾದವ ಮಹಾ ಸಂಸ್ಥಾನದ ಯಾದವಾನಂದ ಸ್ವಾಮಿಗಳು ಹೇಳಿದರು. ಪಟ್ಟಣದ 15ನೇ ವಾರ್ಡಿನ ಆಚಾರ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಯಾದವ (ಗೊಲ್ಲ) ಸಮಾಜದ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಸಮಾಜದ ಏಳ್ಗೆಗೆ ಹಲವು ಹಿರಿಯರು ಶ್ರಮಿಸುತ್ತಿದ್ದು, ಅದರಂತೆ ಮುಂಬರುವ ದಿನಮಾನಗಳಲ್ಲಿ ಸಮಾಜದ ಪಿಯುಸಿ ಮತ್ತು ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಲೆಂದು ಸಮಾಜದ ಹಿರಿಯರು, ಕೃಷ್ಣ ಯಾದವ ಮಹಾ ಸಂಸ್ಥಾನ ಮಠವು ವಸತಿ ನಿಲಯವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈ ದೀಶೆಯಲ್ಲಿ ರಾಜ್ಯವ್ಯಾಪಿ ಸಮಾಜದ ಸಂಘಟನೆ ನಡೆಯುತ್ತಿದೆ ಎಂದರು.ಇನ್ನೂ ಕನಕಗಿರಿ ತಾಲೂಕಿನ ಉಮಳಿ ಕಾಟಾಪೂರ, ಗುಡದೂರು, ಕೆ.ಮಲ್ಲಾಪುರ, ಬಂಕಾಪುರ ಹೀಗೆ ನಾನಾ ಹಳ್ಳಿಗಳಲ್ಲಿನ ಹಿರಿಯರನ್ನು ಭೇಟಿ ಮಾಡಿ ಸಮಾಜವನ್ನು ಒಗ್ಗೂಡಿಸುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.
ಕನಕಾಚಲಪತಿ ದರ್ಶನ ಪಡೆದ ಶ್ರೀ:ಇದಕ್ಕೂ ಮೊದಲು ಐತಿಹಾಸಿಕ ಪ್ರಸಿದ್ದ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.ವಿಜಯನಗರದ ಸಾಮ್ರಾಜ್ಯದ ಸಾಮಂತರ ಅರಸರ ಆಳ್ವಿಕೆಯಲ್ಲಿ ನಿರ್ಮಾಣವಾದ ಐತಿಹ್ಯ ಕಟ್ಟಡ, ಕಲೆ, ವಾಸ್ತುಶಿಲ್ಪವನ್ನು ವೀಕ್ಷಿಸಿದರು. ದೇಗುಲದಲ್ಲಿದ್ದ ಬಾಲಕೃಷ್ಣ ಮೂರ್ತಿ ಶ್ರೀಗಳ ಗಮನ ಸೆಳೆಯಿತು.
ತಾಲೂಕು ಯಾದವ ಸಮಾಜದಿಂದ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಗಳಿಗೆ ಪಾದ ಪೂಜೆ ನಡೆಯಿತು.ಪ್ರಮುಖರಾದ ದುರ್ಗಾದಾಸ ಯಾದವ, ನಿರುಪಾದಿ ದಾಸರ, ಕೃಷ್ಣಮೂರ್ತಿ ದಾಸರ, ಮಂಜುನಾಥ ಯಾದವ, ಕನಕಪ್ಪ ಗುಡದೂರು, ವಿನೋದ ಬೇಕರಿ, ಕನಕಪ್ಪ ದಾಸರ, ಶ್ರೀಧರ ದಾಸರ ಸೇರಿದಂತೆ ಯಾದವ ಸಮಾಜದವರು ಇದ್ದರು.