ಕಡೂರು ದೇಶಭಿಮಾನದಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಿವೃತ್ತ ಯೋಧರು ಸಂಘದ ಮೂಲಕ ಚಟುವಟಿಕೆಯಿಂದಿರಲು ಮಾಜಿ ಯೋಧರ ಭವನ ನಿರ್ಮಾಣಕ್ಕೆ ಚಾಲನೆ ನೀಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ನಿವೃತ್ತ ಸೈನಿಕರ ಸಂಘದ ಭವನ ನಿರ್ಮಾಣಕ್ಕೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ, ಕಡೂರು

ದೇಶಭಿಮಾನದಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಿವೃತ್ತ ಯೋಧರು ಸಂಘದ ಮೂಲಕ ಚಟುವಟಿಕೆಯಿಂದಿರಲು ಮಾಜಿ ಯೋಧರ ಭವನ ನಿರ್ಮಾಣಕ್ಕೆ ಚಾಲನೆ ನೀಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಭಾನುವಾರ ಪಟ್ಟಣದ ಗಣಪತಿ ಪೆಂಡಾಲ್ ಆವರಣದ ನಿವೃತ್ತ ನೌಕರರ ಸಂಘದ ಕಚೇರಿ ಮೇಲಂತಸ್ತಿನಲ್ಲಿ ಶಾಸಕರ ಅನುದಾನದಲ್ಲಿ ಭವನ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಮಾತನಾಡಿದರು. ಪಟ್ಟಣದಲ್ಲಿ ನಡೆಯುವ ರಾಷ್ಟ್ರೀಯ ಹಬ್ಬ ಗಳಲ್ಲಿ ತೊಡಗಿಸಿಕೊಳ್ಳುವ ನಿವೃತ್ತ ಸೈನಿಕರಿಗೆ ಸಂಘದ ಮೂಲಕ ಅನೇಕ ಕಾರ್ಯ ಚಟುವಟಿಕೆ ನಡೆಸುತ್ತಿದೆ. ನಮ್ಮ ತಾಲೂಕಿನಲ್ಲಿ ದೇಶ ರಕ್ಷಣೆಗೆ ಸೇವೆ ಸಲ್ಲಿಸಿ ಬಂದಿರುವುದು ನಮಗೆ ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಸುಸಜ್ಜಿತ ಭವನ ನಿರ್ಮಾಣದ ಬೇಡಿಕೆ ಹೆಚ್ಚಾಗಿತ್ತು ಆರಂಭಿಕವಾಗಿ ಕಟ್ಟಡ ನಿರ್ಮಾಣಕ್ಕೆಶಾಸಕರ ನಿಧಿಯಿಂದ ₹6 ಲಕ್ಷ ಅನುದಾನ ಒದಗಿಸಿಸಲಾಗಿದೆ. ಕಟ್ಟಡ ನಿರ್ಮಾಣದ ಮೂಲಕ ಯೋಧರ ಸಂಘದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಿವೃತ್ತ ಸೈನಿಕರ ಸಂಘಕ್ಕೆ ನಿವೇಶನದ ಕೊರತೆ ಪರಿಣಾಮ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ನಿವೃತ್ತ ನೌಕರರ ಭವನದ ಮೇಲಂತಸ್ತಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಶಾಸಕರು ಒತ್ತು ನೀಡಿರು ವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಕಡೂರು ತಾಲೂಕಿನ ಮಾಜಿ ಯೋಧರ ಸೇವೆ ಸ್ಮರಣೆಗೆ ಪಟ್ಟಣದ ಪ್ರಮುಖ ಸ್ಥಳದಲ್ಲಿ ಸೈನಿಕರ ಸ್ಮಾರಕ ನಿರ್ಮಾಣದ ಚಿಂತನೆ ಇದೆ. ಶಾಸಕರ ಜೊತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಶ್ರೀಕಾಂತ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶೇಖರಪ್ಪ,ನಿ. ಯೋಧರಾದ ಎಂ.ಎಂ. ವೀರೇಶ್, ಕೆ.ಟಿಮಂಜುನಾಥ್, ಸೋಮಶೇಖರ್, ಪ್ರಸನ್ನ,ಎಂ.ಬಿ.ರೇವಣ್ಣ, ಮುಖಂಡ ಸಾಣೇಹಳ್ಳಿ ಆರಾಧ್ಯ, ಲಿಂಗರಾಜು ರೇವಣ್ಣ, ಗ್ರಾ.ಪಂ. ಸದಸ್ಯ ರಾಕೇಶ್ ಹಾಗೂ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ಇದ್ದರು. 8ಕೆಕೆಡಿಯು1.

ಕಡೂರು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ನಿವೃತ್ತ ಸೈನಿಕರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ಸಲ್ಲಿಸಿದರು. ಭಂಡಾರಿ ಶ್ರೀನಿವಾಸ್, ಶ್ರೀಕಾಂತ್, ಸಾಣೇಹಳ್ಳಿ ಆರಾಧ್ಯ, ಶೇಖರಪ್ಪ ಮತ್ತಿತರಿದ್ದರು.