ಸಾರಾಂಶ
ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿಯ ತವರು ಮನೆಯಲ್ಲಿ ನೂತನ ಶಿಲಾಮಯಿ ದೇವಾಲಯಕ್ಕೆದೇವಸ್ಥಾನ ಸಮಿತಿಯ ಅಧ್ಯಕ್ಷ ಎಲ್. ವೆಂಕಟೇಶ್, ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಆನಂದಪುರ
ಒಂದು ವರ್ಷದಲ್ಲಿ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ತವರು ಮನೆಯಲ್ಲಿ ನೂತನ ಶಿಲಾಮಯಿ ದೇವಾಲಯ ನಿರ್ಮಾಣ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎಲ್. ವೆಂಕಟೇಶ್ ತಿಳಿಸಿದರು.ಭಾನುವಾರ ಬೆಳಗ್ಗೆ ಕಡ್ಲೆ ಹoಕ್ಲು ಮಾರಿಕಾಂಬಾ ದೇವಿಯ ತವರು ಮನೆಯ ಆವರಣದಲ್ಲಿ ನೂತನ ಶಿಲಾಮಯಿ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸುಮಾರು ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಶಿಲಾಮಯಿ ದೇವಾಲಯವನ್ನು ನಿರ್ಮಾಣ ಮಾಡುತ್ತಿದ್ದು, 32 ಗ್ರಾಮಗಳ ಗ್ರಾಮ ದೇವತೆಯಾದ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿಯ ದೇವಾಲಯದ ನಿರ್ಮಾಣಕ್ಕೆ ಭಕ್ತರು ತನು, ಮನ, ಧನವನ್ನು ನೀಡುವುದರ ಮೂಲಕ ಸಹಕರಿಸಬೇಕು ಎಂದು ಹೇಳಿದರು.
2026ರಲ್ಲಿ ನಡೆಯಲಿರುವ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಮೊದಲೇ ಮಾರಿಕಾಂಬಾ ದೇವಿಯ ತವರು ಮನೆಯ ದೇವಾಲಯ ಲೋಕಾರ್ಪಣೆಗೊಳ್ಳಬೇಕೆಂಬ ಮಹಾದಾಸೇ ನಮ್ಮದಾಗಿದೆ. ಆದ್ದರಿಂದ ಎಲ್ಲ ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕರಿಸಿ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ತಿಳಿಸಿದರು.ಈ ವೇಳೆ ಮಾರಿಕಾಂಬಾ ದೇವಿಯ ಗಂಡನ ಮನೆಯವರಾದ ಭದ್ರಪ್ಪ ಗೌಡ್ರು ಯಡೇಹಳ್ಳಿ, ತವರು ಮನೆಯವರಾದ ರವೀಂದ್ರ ಗೌಡ್ರು ಮಲಂದೂರ್ ಇವರ ಕುಟುಂಬ ವರ್ಗದವರು ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.