ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ಸಿನಿಮಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡುತ್ತಿದ್ದು, ಈ ಉದ್ದೇಶದಿಂದ ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋವನ್ನು ನಿರ್ಮಾಣ ಮಾಡಲು ನಿಗಮದಿಂದ ರೂಪರೇಷಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕಂಠೀರವ ಸ್ಟುಡಿಯೋ ನಿಗಮದ ಅಧ್ಯಕ್ಷ ಮೆಹಬೂಬ್ ಪಾಷಾ ತಿಳಿಸಿದರು.ನಗರದ ಪ್ರತಿಕಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಠೀರವ ಸ್ಟುಡಿಯೋವನ್ನು ರಾಜ್ಯ ಮಟ್ಟದಲ್ಲಿ ವಿಸ್ತರಣೆ ಮಾಡುವ ಉದ್ದೇಶವನ್ನು ನಿಗಮ ಹೊಂದಿದ್ದು, ಇದಕ್ಕಾಗಿ ಜಿಲ್ಲಾವಾರುಗಳಲ್ಲಿ ಬಹಳಷ್ಟು ಬೇಡಿಕೆಯೂ ಸಹ ಇತ್ತು. ಹಾಗಾಗಿ ಕಂಠೀರವ ಸ್ಟುಡಿಯೋವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ಸಿದ್ಧವಾಗಿದ್ದೇವೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಯಲ್ಲಿರುವ 25 ಎಕರೆಯ ಅನುಪಯುಕ್ತವಾಗಿರುವ ಭೂಮಿಯನ್ನು ಸ್ಟುಡಿಯೋ ನಿರ್ಮಾಣಕ್ಕೆ ಕೊಡಿ ಎಂದು ಡಿಸಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ಶಿವಮೊಗ್ಗ ಕನ್ನಡದಲ್ಲಿ ಶ್ರೀಮಂತ ಜಿಲ್ಲೆ. ಇಲ್ಲಿ ಸಿನಿಮಾ ಕಲಾವಿದರು ತುಂಬಾ ಇದ್ದಾರೆ. ಇವೆಲ್ಲರನ್ನೂ ಜಾಗತೀಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ. ಹಾಗೂ ಶಿವಮೊಗ್ಗದಲ್ಲಿ ನಡೆಯುವ ಹೊರಾಂಗಣ ಮತ್ತು ಒಳಾಂಗಣ ಚಿತ್ರೀಕರಣಕ್ಕೆ ಇದು ಬಹಳಷ್ಟು ಅನುಕೂಲವಾಗಲಿದೆ. ಇದರಿಂದ ಭಾಷೆ ಉಳಿಯುತ್ತದೆ ಹಾಗೂ ಪ್ರತಿಭೆಗಳು ಬೆಳೆಯುತ್ತಾರೆ. ಉದ್ಯೋಗವೂ ಕೂಡ ಸೃಷ್ಟಿಯಾಗಲಿದೆ ಎಂದರು.ಬೆಂಗಳೂರು ಹಾಗೂ ಮೈಸೂರಿನಿಂದ ದೂರವಿರುವ ಮಧ್ಯ ಕರ್ನಾಟಕ ಭಾಗಗಳಾದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯನಗರ ಜಿಲ್ಲೆಗಳಲ್ಲಿ ಸ್ಟುಡಿಯೋ ನಿರ್ಮಿಸುವ ಯೋಜನೆ ಮಾಡಲಾಗಿದ್ದು, ಈಗಾಗಲೇ ಸರ್ಕಾರ ತನ್ನ ಬಜೆಟ್‌ನಲ್ಲಿ 5 ಕೋಟಿ ರು. ಅನುದಾನವನ್ನು ನೀಡಿದೆ. ಇನ್ನೂ ಮೈಸೂರಿನಲ್ಲಿ 160 ಎಕರೆಯಲ್ಲಿ ರಾಮೋಜಿ ಫೀಲ್ಮಿ ಸಿಟಿ ಮಾದರಿಯಂತೆ ಫಿಲ್ಮಿಸಿಟಿಯನ್ನು ವಾರ್ತಾ ಇಲಾಖೆಯಿಂದ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಓಟಿಟಿ ಪ್ರಾರಂಭಿಸಲು ಸಿಎಂಗೆ ಮನವಿ:
ಕನ್ನಡದಲ್ಲಿ ಓಟಿಟಿ ಪ್ರಾರಂಭ ಮಾಡಲು ನಿಗಮದಿಂದ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಕನ್ನಡದ ಕಿರುತೆರೆ, ಬೆಳ್ಳಿ ಪರದೆಗೆ ಹಾಗೂ ಅವುಗಳ ಕಾರ್ಯಗಳಿಗೆ ಓಟಿಟಿ ನಿರ್ಮಾಣ ಮಾಡಲು ಸರ್ಕಾರ 2025 ರ ಅಯವ್ಯಯದಲ್ಲಿ ಅನುದಾನ ನೀಡಲು ಮುಂದಾಗಿದೆ ಎಂದು ತಿಳಿಸಿದರು.ಕನ್ನಡ ಓಟಿಟಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಅದಕ್ಕೆಂದು ಸಮಿತಿಯನ್ನು ರಚನೆ ಮಾಡಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಎರಡು ಸಭೆಗಳನ್ನು ನಡೆಸಿದ್ದು, ಓಟಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೂಪರೇಷೆಗಳನ್ನು ತಯಾರಿಸಲಾಗಿದೆ ಎಂದು ಹೇಳಿದರು.ಸರ್ಕಾರ ಕನ್ನಡ ಭಾಷೆಯನ್ನು ಬೆಳೆಸಬೇಕು ಹಾಗೂ ಉಳಿಸಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡುತ್ತಿದೆ. ಓಟಿಟಿ ಪರಿಣಾಮವಾಗಿ ಕೆಲಸ ಮಾಡಲಿದ್ದು, ಇದರಿಂದ ಜಾಗತೀಕ ಮಟ್ಟದಲ್ಲಿ ಕನ್ನಡಕ್ಕೆ ಸ್ಥಾನಮಾನ ದೊರಕುತ್ತದೆ. ನಮ್ಮ ಮಣ್ಣಿನ ಗ್ರಾಮೀಣ ಶೈಲಿಯ ಬದುಕು ಓಟಿಟಿ ಮೂಲಕ ಇಡೀ ಜಗತ್ತು ನೋಡುವಂತಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಎನ್.ರಮೇಶ್ ಹಾಜರಿದ್ದರು.;Resize=(128,128))
;Resize=(128,128))
;Resize=(128,128))