ಸರ್ವಾಂಗೀಣ ಅಭಿವೃದ್ಧಿಯಿಂದ ಮಾದರಿ ತಾಲೂಕು ನಿರ್ಮಾಣ

| Published : Sep 17 2024, 12:52 AM IST

ಸಾರಾಂಶ

ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ 30 ಹಾಸಿಗೆ ಆಸ್ಪತ್ರೆಯನ್ನು 50 ಹಾಸಿಗೆ ಆಸ್ಪತ್ರೆ ಆಗಿ ಮೇಲ್ದಜೆರ್ಗೆ ಏರಿಸಿದ ವೇದಿಕೆ ಕಾರ್ಯಕ್ರಮವನ್ನು ಶಾಸಕ ಬಿ.ವೈ.ವಿಜಯೇಂದ್ರ ಅವರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪಒಂದು ತಾಲೂಕು ಸರ್ವಾಂಗೀಣ ಅಭಿವೃದ್ಧಿ ಹೊಂದಿ, ತಾಲೂಕಿನ ಜನತೆಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ದೊರೆತು ಅಭಿವೃದ್ಧಿ ಕಂಡಾಗ ಮಾತ್ರ ಅದು ಮಾದರಿ ತಾಲೂಕು ಆಗಲು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ 30 ಹಾಸಿಗೆ ಸಮುದಾಯ ಆಸ್ಪತ್ರೆಯನ್ನು 50 ಹಾಸಿಗೆಗೆ ಮೇಲ್ದರ್ಜೆಗೆರಿಸಿದ ಅಂಗವಾಗಿ ಹಮ್ಮಿಕೊಂಡ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿರಾಳಕೊಪ್ಪದಲ್ಲಿ ಪ್ರತಿ ತಿಂಗಳು 6 ಸಾವಿರ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಹಕಾರದಿಂದ ಕಳೆದ ಎಂಟ್ಹತ್ತು ವರ್ಷಗಳಲ್ಲಿ ಶಿಕಾರಿಪುರ ತಾಲೂಕು ಸಂಪೂರ್ಣ ಅಭಿವೃದ್ಧಿಯಾಗಿದ್ದು, ಬಹುಶಃ ರಾಜ್ಯದಲ್ಲಿ ಯಾವ ತಾಲೂಕು ಸಹ ಈ ರೀತಿ ಅಭಿವೃದ್ಧಿ ಕಂಡಿಲ್ಲ.

ಶಿಕಾರಿಪುರ ತಾಲೂಕಿನಲ್ಲಿ ಉತ್ತಮವಾದ 250 ಹಾಸಿಗೆ ಆಸ್ಪತ್ರೆ ಜೊತೆಗೆ 16 ಕೋಟಿ ವೆಚ್ಚದ ಮಹಿಳಾ ಮತ್ತು ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಪ್ರತಿ ದಿನ ಸಾವಿರಾರರು ಬಡ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ಕಾಂಗ್ರೆಸ್‌ ಸರ್ಕಾರ ರಚನೆಯಾದನಂತರ ಸವರ್ತೋ ಮುಖ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಸರ್ಕಾರದಿಂದ ಸಿಗುವ ಅಗತ್ಯ ಸೌಲಭ್ಯಗಳನ್ನು ತರುತ್ತೇವೆ ಎಂದು ತಿಳಿಸಿದರು.

ಶಿರಾಳಕೊಪ್ಪ ಪಟ್ಟಣದ ಆಸ್ಪತ್ರೆಯು ಉತ್ತಮ ಆಸ್ಪತ್ರೆ ಆಗಿದ್ದು, ಇಲ್ಲಿಗೆ ಸ್ಕ್ಯಾನಿಂಗ್ ಸೆಂಟರ್‌ನ ಅವಶ್ಯಕವಿದೆ. ಅದರ ವ್ಯವಸ್ಥೆಗೆ ಸಹಕಾರ ಕೊಡುವದಾಗಿ ಹೇಳಿದರು.

ಶಿಕಾರಿಪುರ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಇಲ್ಲಿನ ಆಸ್ಪತ್ರೆಯೂ ತಾಲೂಕು ಮಟ್ಟದ ಆಸ್ಪತ್ರೆಗೆ ಸರಿಸಮಾನಾಗಿ ಕಾರ್ಯ ನಿವರ್ಹಿಸುತ್ತಿದೆ. ಚಿಕಿತ್ಸೆಗಾಗಿ ಪಕ್ಕದ ಸೊರಬ, ಹಿರೇಕೆರೂರ ಸೇರಿದಂತೆ ಹಲವಾರು ಪಟ್ಟಣದ ಜನರು ಇಲ್ಲಿಗೆ ಬರುತ್ತಿದ್ದಾರೆ. ಹೊರಗಡೆ ಓಷಧಿ ಬರೆಯುವ ಪ್ರವೃತ್ತಿ ಕಡಿಮೆ ಮಾಡಿ, ದೂರು ಬಾರದಂತೆ ನೋಡಿಕೊಳ್ಳಿ ಎಂದು ಮಾರ್ಗದರ್ಶನ ಮಾಡಿದರು.

ತಾಲೂಕಿನಲ್ಲಿ ವಿಶೇಷವಾಗಿ ಗರ್ಭಿಣಿಯರಿಗೆ ಉತ್ತಮ ಸೇವೆ ಲಭಿಸಬೇಕಿದೆ. ರಾಜ್ಯ ಸರ್ಕಾರ ಆರೋಗ್ಯ ರಕ್ಷಾ ಸಮಿತಿ ರಚಿಸಬೇಕು ಎಂದು ಹೇಳಿ ನಾಲ್ಕು ತಿಂಗಳು ಕಳೆದಿದ್ದು, ಈ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಸೀರ್, ಸಮುದಾಯ ಆಸ್ಪತ್ರೆಯ ಆರೋಗ್ಯಾಧಿಕಾರಿ ಮಹಲಿಂಗ ಕೊಳ್ಳೆ, ತಾಲೂಕ ನೂಡಲ್ ಅಧಿಕಾರಿ