ಕೊಲ್ಹಾರದಲ್ಲಿ ಮಾದರಿ ರುದ್ರಭೂಮಿ ನಿರ್ಮಾಣ

| Published : Oct 19 2024, 12:22 AM IST

ಕೊಲ್ಹಾರದಲ್ಲಿ ಮಾದರಿ ರುದ್ರಭೂಮಿ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ಸ್ಮಶಾನ ಎಂದರೆ ಅಸಡ್ಡೆ ತೋರುವ ಜನರಿಗೆ ವರದಾನವಾಗಲಿ ಎನ್ನುವ ಪರಿಕಲ್ಪನೆಯಲ್ಲಿ ಪಟ್ಟಣದ ಹಿಂದೂ ರುದ್ರಭೂಮಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ನಿರ್ಮಾಣ ಮಾಡಲು ಸ್ಥಳೀಯ ಹಿರಿಯರ ಹಾಗೂ ಯುವಕರ ಪಡೆ ಸನ್ನದ್ದವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಎಸ್.ದೇಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಸ್ಮಶಾನ ಎಂದರೆ ಅಸಡ್ಡೆ ತೋರುವ ಜನರಿಗೆ ವರದಾನವಾಗಲಿ ಎನ್ನುವ ಪರಿಕಲ್ಪನೆಯಲ್ಲಿ ಪಟ್ಟಣದ ಹಿಂದೂ ರುದ್ರಭೂಮಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ನಿರ್ಮಾಣ ಮಾಡಲು ಸ್ಥಳೀಯ ಹಿರಿಯರ ಹಾಗೂ ಯುವಕರ ಪಡೆ ಸನ್ನದ್ದವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಎಸ್.ದೇಸಾಯಿ ಹೇಳಿದರು.

ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಹಿಂದೂ ರುದ್ರ ಭೂಮಿಯ ವೀಕ್ಷಣೆಗಾಗಿ ತೆರಳಿರುವ ಸಂದರ್ಭದಲ್ಲಿ ಮಾತನಾಡಿದ ಅವರು ಹುಲಕೋಟಿ ರುದ್ರಭೂಮಿ ತರಹ ಕೊಲ್ಹಾರ ಪಟ್ಟಣದ ಹಿಂದೂ ರುದ್ರಭೂಮಿಯನ್ನು ಅಭಿವೃದ್ದಿ ಪಡಿಸಲು ಕ್ಷೇತ್ರದ ಶಾಸಕ ಸಚಿವರಾದ ಶಿವಾನಂದ ಪಾಟೀಲರ ಗಮನ ಸೆಳೆಯುವುದಾಗಿ ತಿಳಿಸಿದರು.

ಪುನರ್ವಸತಿ ಇಲಾಖೆಯಿಂದ ಮಂಜೂರಾದ 10 ಎಕರೆ ವಿಶಾಲವಾದ ಹಿಂದೂ ರುದ್ರಭೂಮಿಯನ್ನು ಹಿರಿಯರ ಹಾಗೂ ಯುವಕರ ಪಡೆ ಪ್ರತಿ ರವಿವಾರ ಈಗಾಗಲೇ ಸ್ವಚ್ಛ ಮಾಡುತ್ತಿರುವುದು ಶ್ಲಾಘನೀಯ. ಅದರ ಮುಂದುವರೆದ ಭಾಗವಾಗಿ 10 ಎಕರೆ ಪ್ರದೇಶದಲ್ಲಿ ಸಕಲ ಸೌಲಭ್ಯವನ್ನು ಕಲ್ಪಿಸಲು ಯೋಜನಾ ವರದಿಯನ್ನು ತಯಾರಿಸಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳನ್ನು ಸದಸ್ಯರನ್ನು ಖುದ್ದಾಗಿ ಹುಲಕೋಟಿ ರುದ್ರಭೂಮಿ ವೀಕ್ಷಣೆ ಮಾಡಿದ್ದು, ಸರಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಿ ಅಭಿವೃದ್ದಿಪಡಿಸಲು ಸಚಿವರ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.ಈ ವೇಳೆ ಚನಮಲ್ಲಪ್ಪ ಗಿಡ್ಡಪ್ಪಗೋಳ, ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ, ರಾಜಶೇಖರಯ್ಯ ಹಿರೇಮಠ, ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಶ್ರೀಶೈಲ ನಾಗಪ್ಪ ಗಿಡ್ಡಪ್ಪಗೋಳ, ಮಲ್ಲಿಕಾರ್ಜುನ ಗರಸಂಗಿ, ಪಪಂ ಸದಸ್ಯರಾದ ಶ್ರೀಶೈಲ ಮುಳವಾಡ, ತೌಶೀಪ ಗಿರಗಾಂವಿ, ಬಾಬು ಭಜಂತ್ರಿ, ಅಶೋಕ ಜಿಡ್ಡಿಬಾಗಿಲ, ದಶರಥ ಈಟಿ, ಶೇಖಪ್ಪ ಗಾಣಿಗೇರ, ಪುಂಡಲೀಕ ಬಾಟಿ, ಗುರುಸಿದ್ದಯ್ಯ ಪರಡಿಮಠ, ಸಿದ್ದಪ್ಪ ಗಣಿ ಇತರರು ಇದ್ದರು.