1ಕೋಟಿ ವೆಚ್ಚದಲ್ಲಿ ಶಿಲಾಮಯಿ ದೇಗುಲ ನಿರ್ಮಾಣ

| Published : Dec 22 2024, 01:30 AM IST

ಸಾರಾಂಶ

ಆನಂದಪುರದಲ್ಲಿ ಒಂದು ಕೋಟಿಗೂ ಅಧಿಕ ವೆಚ್ಚದ ಮಾರಿಕಾಂಬಾ ದೇವಿಯ ಶಿಲಾಮಯಿ ದೇವಾಲಯದ ನಿರ್ಮಾಣ ಮಾಡಲಾಗುವುದು ಎಂದು ಕಡ್ಲೆ ಹಂಕ್ಲು ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆನಂದಪುರದಲ್ಲಿ ಒಂದು ಕೋಟಿಗೂ ಅಧಿಕ ವೆಚ್ಚದ ಮಾರಿಕಾಂಬಾ ದೇವಿಯ ಶಿಲಾಮಯಿ ದೇವಾಲಯದ ನಿರ್ಮಾಣ ಮಾಡಲಾಗುವುದು ಎಂದು ಕಡ್ಲೆ ಹಂಕ್ಲು ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.

ಅವರು ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿಯ ತವರು ಮನೆಯಲ್ಲಿ ನೂತನ ಶಿಲಾಮಯಿ ದೇವಾಲಯಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ. ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಿಲಾಮಯಿ ದೇವಸ್ಥಾನಕ್ಕೆ ಸುತ್ತಮುತ್ತಲಿನ 16 ಗ್ರಾಮದ ಗ್ರಾಮಸ್ಥರು ಧನಸಹಾಯ ನೀಡುವಂತೆ ಕೋರಿದರು.

ಅಷ್ಟಮಂಗಳ ಪ್ರಶ್ನೆಯಂತೆ ಗ್ರಾಮಸ್ಥರಿಂದ ಮುಷ್ಟಿ ಕಾಣಿಕೆಯಿಂದ ಸಂಗ್ರಹಿಸಿದ ಹಣವನ್ನು ಧರ್ಮಸ್ಥಳ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ನೀಡಲಾಗಿದೆ. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಸಮಿತಿಯವರು ಪ್ರಾರ್ಥನೆ ಸಲ್ಲಿಸಿ ದೇವಿಯ ದೇವಸ್ಥಾನದ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

2026 ನೇ ಫೆಬ್ರುವರಿ ತಿಂಗಳಲ್ಲಿ ನಡೆಯಲಿರುವ ಮಾರಿಕಾಂಬಾ ದೇವಿಯ ಜಾತ್ರೆಯ ಒಳಗಾಗಿ ಈ ನೂತನ ದೇವಾಲಯವನ್ನು ನಿರ್ಮಾಣ ಮಾಡುವ ಉದ್ದೇಶ ನಮ್ಮದಾಗಿದೆ ಆದರಿಂದ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ಸಹಕರಿಸಬೇಕೆಂದರು.ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಗ್ರಾಮದ ಶಕ್ತಿ ದೇವತೆ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ತವರು ಮನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯಿ ದೇವಾಲಯದ ನಿರ್ಮಾಣಕ್ಕೆ ಗ್ರಾಮಸ್ಥರು ತನು ಮನ ಧನ ಸಹಕಾರ ನೀಡಬೇಕೆಂದರು. ಸಮಿತಿಯ ಸದಸ್ಯರಾದ ವೇಣಾಕ್ಷಪ್ಪ, ರಾಘವೇಂದ್ರ, ಸುಂದರೇಶ್, ಗಣಪತಿ, ದೇವರಾಜ್ ಯಡೇಹಳ್ಳಿ, ರಾಜೇಂದ್ರ ಗೌಡ, ಜಯಪ್ಪ, ಕಾರ್ತಿಕ್, ಜಯದೇವಪ್ಪ ಗೌಡ, ಹಾಗು ಅರ್ಚಕರಾದ ಮಧುಸೂದನ್ ಭಟ್ ಇತರರು ಉಪಸ್ಥಿತರಿದ್ದರು.