ಬಾಳೆಹೊನ್ನೂರುದೇವಾಲಯಗಳ ನಿರ್ಮಾಣ ಗ್ರಾಮದ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಪಟ್ಟಣದ ಬಂಡಿಮಠದಲ್ಲಿರುವ ಬಾಲಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಭದ್ರಾಸೇತುವೆ ಸಮೀಪದ ಬಂಡಿಮಠದಲ್ಲಿ 70 ವರ್ಷಗಳಿಗೂ ಹಿಂದೆ ನಿರ್ಮಾಣ ಗೊಂಡಿದ್ದ ಬಾಲಸುಬ್ರಮಣ್ಯ ದೇವಸ್ಥಾನ ರಸ್ತೆ ಸನಿಹದಲ್ಲಿದ್ದ ಪರಿಣಾಮ ಸ್ವಲ್ಪ ಭಾಗ ಶಿಥಿಲಗೊಂಡಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ನೂತನವಾಗಿ ದೇವಾಲಯ ಜೀರ್ಣೋದ್ಧಾರಗೊಳಿಸಿ ಪುನರ್ ಪ್ರತಿಷ್ಠಾಪನೆ ನಡೆಸಲು ಗ್ರಾಮಸ್ಥರು ಸಂಕಲ್ಪ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ದೇವಾಲಯಗಳ ನಿರ್ಮಾಣ ಗ್ರಾಮದ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಪಟ್ಟಣದ ಬಂಡಿಮಠದಲ್ಲಿರುವ ಬಾಲಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಭದ್ರಾಸೇತುವೆ ಸಮೀಪದ ಬಂಡಿಮಠದಲ್ಲಿ 70 ವರ್ಷಗಳಿಗೂ ಹಿಂದೆ ನಿರ್ಮಾಣ ಗೊಂಡಿದ್ದ ಬಾಲಸುಬ್ರಮಣ್ಯ ದೇವಸ್ಥಾನ ರಸ್ತೆ ಸನಿಹದಲ್ಲಿದ್ದ ಪರಿಣಾಮ ಸ್ವಲ್ಪ ಭಾಗ ಶಿಥಿಲಗೊಂಡಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿ ನೂತನವಾಗಿ ದೇವಾಲಯ ಜೀರ್ಣೋದ್ಧಾರಗೊಳಿಸಿ ಪುನರ್ ಪ್ರತಿಷ್ಠಾಪನೆ ನಡೆಸಲು ಗ್ರಾಮಸ್ಥರು ಸಂಕಲ್ಪ ನಡೆಸಿದ್ದಾರೆ.ದೇವಾಲಯ ನಿರ್ಮಾಣಕ್ಕೆ ₹2 ಕೋಟಿ ವೆಚ್ಚ ತಗುಲಲಿದ್ದು, ಸರ್ಕಾರದಿಂದ ಹಾಗೂ ವೈಯುಕ್ತಿಕವಾಗಿ ಧನ ಸಹಾಯ ನೀಡಿ ಸಹಕಾರ ನೀಡಲಾಗುವುದು. ಆದಷ್ಟು ಶೀಘ್ರ ದೇವಾಲಯ ನಿರ್ಮಾಣಗೊಳ್ಳಲಿ ಎಂಬ ಆಶಯ ವ್ಯಕ್ತಪಡಿಸುತ್ತೇನೆ. ಭದ್ರಾ ಎಸ್ಟೇಟ್‌ನವರು ದೇವಸ್ಥಾನ ನಿರ್ಮಾಣಕ್ಕೆ ಅಗತ್ಯವಿದ್ದ ಸ್ವಲ್ಪ ಪ್ರಮಾಣದ ಜಾಗ ನೀಡುವುದಾಗಿ ತಿಳಿಸಿ ಗಡಿ ಗುರುತಿಸಿ ಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು. ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ, ಎಲ್ಲಿ ದೇವಸ್ಥಾನ, ಮಂದಿರಗಳು ಸ್ಥಾಪನೆಯಾಗುತ್ತದೋ ಅಲ್ಲಿ ಧರ್ಮ ಸ್ಥಾಪನೆಯಾಗಿ ಸಮಾಜ ಸಂಸ್ಕಾರಯುತವಾಗಿ ನಡೆಯಲಿದೆ. ಇಡೀ ಮನುಕುಲವೇ ಪುನರುಜ್ಜೀವನಗೊಳ್ಳಬೇಕಿದ್ದು, ಇಂದಿನ ಸಂದರ್ಭ ಅಂತಹದ್ದಾಗಿದೆ. ಸಂಸ್ಕೃತಿ, ಸಂಸ್ಕಾರಗಳು ಎಲ್ಲಿ ಮಾಯವಾಗುತ್ತದೋ ಅಲ್ಲಿ ಕುಟುಂಬ ಇರುವುದಿಲ್ಲ.ನಮ್ಮ ಹಿರಿಯರಿಗೆ ದೇವರ ಮೇಲೆ ಭಯ, ಭಕ್ತಿ ಹೆಚ್ಚಾಗಿ ಇರುತಿತ್ತು. ಆದರೆ ಇಂದು ಕುಟುಂಬಗಳಲ್ಲಿ ನಂಬಿಕೆಗಳ ಕಡಿಮೆ ಯಾದ ಕಾರಣ ದೇವರು, ಧರ್ಮದ ಮೇಲೆಯೂ ನಂಬಿಕೆ ಕಡಿಮೆಯಾಗುತ್ತಿದೆ. ಆದರೆ ಬಂಡಿಮಠ ಗ್ರಾಮದಲ್ಲಿ ದೇವಾಲಯ ಜೀರ್ಣೋದ್ಧಾರದ ಮೂಲಕ ಧರ್ಮದ ಪುನರ್ ಸ್ಥಾಪನೆಯಾಗುತ್ತಿದೆ ಎಂದು ಹೇಳಿದರು.ದೇವಾಲಯ ಸಮಿತಿ ಅಧ್ಯಕ್ಷ ತಂಗರಾಜು, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಆಟೋ ತಂಬಿ, ಗೌರವಾಧ್ಯಕ್ಷ ಎಂ.ಕೆ.ಸುಂದರೇಶ್, ಬಿ.ಕೆ.ಮಧುಸೂದನ್, ಉಪಾಧ್ಯಕ್ಷ ಪರಮಶಿವ, ಗ್ರಾಪಂ ಮಾಜಿ ಅಧ್ಯಕ್ಷರಾದ ರವಿಚಂದ್ರ, ಎಂ.ಎಸ್. ಅರುಣೇಶ್, ಜಾನ್ ಡಿಸೋಜಾ, ಮಹಮ್ಮದ್ ಜುಹೇಬ್, ಪ್ರಮುಖರಾದ ಕೆ.ಎನ್.ಮರಿಗೌಡ, ಎಂ.ಎಸ್.ಚನ್ನಕೇಶವ, ಟಿ.ಎಂ.ನಾಗೇಶ್, ಮಂಜು ಹೊಳೆಬಾಗಿಲು, ಆರೈ, ಕಾಫಿ ಗಿರೀಶ್, ಆಚಾರಿ ಮಂಜು, ಮುರುಗನ್ ಮತ್ತಿತರರು ಹಾಜರಿದ್ದರು.೦೫ಬಿಹೆಚ್‌ಆರ್ ೫:
ಬಾಳೆಹೊನ್ನೂರಿನ ಬಂಡಿಮಠದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಬಾಲಸುಬ್ರಮಣ್ಯ ದೇವಸ್ಥಾನಕ್ಕೆ ಶಾಸಕ ಟಿ.ಡಿ. ರಾಜೇಗೌಡ, ಹಿರಿಯರಾದ ಆರೈ ಶಂಕುಸ್ಥಾಪನೆ ನೆರವೇರಿಸಿದರು. ಸುಧಾಕರ್ ಶೆಟ್ಟಿ, ತಂಗರಾಜು, ಎಂ.ಕೆ.ಸುಂದರೇಶ್, ಮಧುಸೂದನ್, ರವಿಚಂದ್ರ, ಎಂ.ಎಸ್.ಚನ್ನಕೇಶವ, ಕೆ.ಎನ್.ಮರಿಗೌಡ ಇದ್ದರು.