ಸಾರಾಂಶ
ಮಾಗಡಿ: ಪಟ್ಟಣದ ಹೊಸಪೇಟೆ ವೃತ್ತದ ಬಳಿ ಟಿಎಪಿಸಿಎಂಎಸ್ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೋದಾಮು ನಿರ್ಮಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು
ಮಾಗಡಿ: ಪಟ್ಟಣದ ಹೊಸಪೇಟೆ ವೃತ್ತದ ಬಳಿ ಟಿಎಪಿಸಿಎಂಎಸ್ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೋದಾಮು ನಿರ್ಮಿಸಲಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು.
ಪಟ್ಟಣದ ಸಿದ್ಧಾರೂಢ ಭವನದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ಗೋದಾಮಿಗೆ ಬಾಡಿಗೆ ಕಟ್ಟಲು 8.82 ಲಕ್ಷ ರು. ವ್ಯಯಿಸಲಾಗುತ್ತಿದೆ. ಲಾಭದ ಶೇ.30ರಷ್ಟು ಹಣ ಬಾಡಿಗೆಗೆ ನೀಡುತ್ತಿದ್ದು, ಕಳೆದ ವರ್ಷವೇ ಗೋದಾಮು ನಿರ್ಮಾಣಕ್ಕೆ ಮಾಗಡಿ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರ ಅನುಮತಿಸಿದ ಕೂಡಲೇ ಕಾಮಗಾರಿ ಆರಂಭಿಸಿ ಬಾಡಿಗೆ ಹಣ ಉಳಿಸಲಾಗುತ್ತದೆ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ 700 ಷೇರುದಾರರಿಗೆ ಮಾತ್ರ ಮತದಾನ ಮಾಡುವ ಹಕ್ಕು ಪಡೆದಿದ್ದರು. ಸಹಕಾರ ಕ್ಷೇತ್ರದ ನಿಯಮಗಳನ್ನು ಪ್ರತಿಯೊಬ್ಬ ಷೇರುದಾರರು ಪಾಲನೆ ಮಾಡಿದಾಗ ಮಾತ್ರ ಮತದಾನದ ಹಕ್ಕು ಪಡೆಯಲು ಸಾಧ್ಯ. ಮತದಾನದ ಹಕ್ಕಿನಿಂದ ವಂಚನೆ ಮಾಡುವ ಉದ್ದೇಶ ನಮ್ಮ ಆಡಳಿತ ಮಂಡಳಿಗೆ ಇರುವುದಿಲ್ಲ ನಿಯಮಗಳನ್ನು ಪಾಲನೆ ಮಾಡಿದ್ದ ಪ್ರತಿಯೊಬ್ಬ ಷೇರುದಾರರಿಗೂ ಮುಂಬರುವ ಚುನಾವಣೆಯಲ್ಲಿ ಮತದಾನದ ಹಕ್ಕು ಸಿಗಲಿದೆ ಮತದಾನ ಹಕ್ಕು ಪಡೆಯುವ ಷೇರುದಾರರು 500 ರೂಪಾಯಿ ಹಾಗೂ 1 ಸಾವಿರದ ಷೇರುದಾರ ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಹೇಳಿದರು.ಸಹಕಾರ ಸಂಘದ ಅಧ್ಯಕ್ಷ ನಂಜುಂಡಯ್ಯ ಮಾತನಾಡಿ, ನಿರ್ದೇಶಕರೆಲ್ಲರ ಸಹಕಾರದಿಂದ ಸಂಘ ಲಾಭಾಂಶದಲ್ಲಿ ನಡೆಯುತ್ತಿದ್ದು ಈ ವರ್ಷ 24.72 ಲಕ್ಷದ ನಿವ್ವಳ ಲಾಭ ಬಂದಿದ್ದು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದ್ದು ರೈತರ ಸಲಹೆಗಳನ್ನು ಪಡೆದು ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಹಿರಿಯ ಮುಖಂಡ ಯೋಗನರಸಿಂಹಯ್ಯ ಮಾತನಾಡಿ, ಕಳೆದ 25 ವರ್ಷಗಳಿಂದಲೂ ನಮ್ಮ ಸಹಕಾರಿ ಸಂಘದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ ರವರು ಹಗರಣ ಮಾಡಿ ಸಂಘಕ್ಕೆ ಲಕ್ಷಗಟ್ಟಲೆ ಹಣ ಕಟ್ಟಬೇಕು 25 ವರ್ಷಗಳಿಂದಲೂ ಅವರಿಂದ ಹಣ ವಸೂಲಿ ಮಾಡಲು ಆಗುತ್ತಿಲ್ಲ ಜೊತೆಗೆ ಕೋರ್ಟ್ ವೆಚ್ಚವನ್ನು ಪ್ರತಿ ವರ್ಷವೂ ಬರಿಸುತ್ತಿದ್ದು ಕೂಡಲೇ ಈ ಪ್ರಕರಣವನ್ನು ಇತ್ಯರ್ಥಪಡಿಸಿ ಅವರಿಂದ ಕಟ್ಟಬೇಕಾದ ಹಣವನ್ನು ಕೂಡಲೇ ಕಟ್ಟಿಸಿಕೊಳ್ಳಲು ಆಡಳಿತ ಮಂಡಳಿ ಮುಂದಾಗಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ 16ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಸೋಮಶೇಖರ್, ಎಚ್.ಆರ್. ಶಿವಪ್ರಸಾದ್, ಎನ್.ನಂಜುಂಡಯ್ಯ ಎಂ.ರವಿ, ರಾಜು, ಶಿಲ್ಪಶ್ರೀ ವಿಜಯಕುಮಾರ್, ಡಿ.ಗೀತಾ ರಂಗನಾಥ್, ಮಹಾದೇವಯ್ಯ, ರಮೇಶ್, ಪ್ರಭಾರ ಕಾರ್ಯದಶರ್ಿ ಎಂ.ಜಿ.ನಾರಾಯಣ್, ಕಚೇರಿಯ ಸಿಬ್ಬಂದಿಗಳಾದ ಹೆಚ್.ಜೆ.ಪ್ರವೀಣ್, ಕೆ.ಪಿ.ಸವಿತಾ, ಆರ್. ಶ್ರೀನಿವಾಸ್ ಇತರರಿದ್ದರು.11ಮಾಗಡಿ2 :
ಮಾಗಡಿಯ ಸಿದ್ಧಾರೂಢ ಭವನದಲ್ಲಿ ಮಾಗಡಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್.ಅಶೋಕ್ ಮಾತನಾಡಿದರು.