ಗ್ರಾಹಕರು ಸಾಲದ ಸೌಲಭ್ಯ ಪಡೆದುಕೊಳ್ಳಿ: ಶಂಭುಕುಮಾರ

| Published : Feb 04 2024, 01:32 AM IST

ಸಾರಾಂಶ

ಬಾದಾಮಿ: ಎಸ್.ಬಿ.ಐ ಬ್ಯಾಂಕಿನಿಂದ ವಿವಿಧ ರೀತಿಯ ಸಾಲಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಸ್.ಬಿ.ಐ. ವ್ಯವಸ್ಥಾಪಕ ಶಂಭುಕುಮಾರ ಸಾಹು ಮನವಿ ಮಾಡಿದರು. ಶನಿವಾರ ನಗರದ ರಾಮದುರ್ಗ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ) ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಲ ಮೇಳ ಉದ್ದೇಶಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಎಸ್.ಬಿ.ಐ.ಬ್ಯಾಂಕಿನಿಂದ ವಿವಿಧ ರೀತಿಯ ಸಾಲಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಸ್.ಬಿ.ಐ. ವ್ಯವಸ್ಥಾಪಕ ಶಂಭುಕುಮಾರ ಸಾಹು ಮನವಿ ಮಾಡಿದರು.

ಅವರು ಶನಿವಾರ ನಗರದ ರಾಮದುರ್ಗ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ) ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಲ ಮೇಳ ಉದ್ದೇಶಿಸಿ ಮಾತನಾಡಿದರು. ಮುದ್ರಾ ಸಾಲ, ವಯಕ್ತಿಕ ಚಿನ್ನದ ಸಾಲ, ಕೃಷಿ ಸಾಲ, ಶೈಕ್ಷಣಿಕ ಸಾಲ, ಗೃಹಸಾಲ ಹೀಗೆ ಹಲವು ರೀತಿಯ ಸಾಲಗಳು ಲಭ್ಯವಿದ್ದು, ಎಲ್ಲ ಬ್ಯಾಂಕುಗಳಿಗಿಂತ ನಮ್ಮ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರ, ಸರಳೀಕರಣ ಸಾಲಸೌಲಭ್ಯ ಇದ್ದು, ಗ್ರಾಹಕರು, ನೌಕರಸ್ಥರು, ವ್ಯಾಪಾರಿಗಳು ನೂತನ ಮನೆ ನಿರ್ಮಾಣಕ್ಕಾಗಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದುಕೊಳ್ಳಬೇಕು ಎಂದು ಹೇಳಿದರು. ಎಸ್.ಬಿ.ಐ. ಕಾನೂನು ಸಲಹೆಗಾರ, ವಕೀಲ ಎಂ.ಎಸ್. ಹಿರೇಮಠ ಮಾತನಾಡಿ ಗ್ರಾಹಕರು ವಿವಿಧ ರೀತಿಯ ಸಾಲ ಪಡೆಯುವ ಕುರಿತು ಮಾಹಿತಿ ನೀಡಿದರು. ಕ್ಷೇತ್ರಾಧಿಕಾರಿ ಸಂಜಯ, ಸಿಬ್ಬಂದಿ ಧೂಳಪ್ಪ ಕಿತ್ತಲಿ ಉಪಸ್ಥಿತರಿದ್ದರು. ಗ್ರಾಹಕರು ಸಾಲ ಪಡೆಯುವ ಬಗ್ಗೆ ದಾಖಲೆಗಳ ಬಗ್ಗೆ, ಮಾಹಿತಿ ಪಡೆದರು. ಈಗಾಗಲೇ ಸಾಲ ಪಡೆದವರು ಬಡ್ಡಿದರ ಪ್ರಮಾಣಪತ್ರ ಪಡೆದುಕೊಂಡರು.