ಸಾರಾಂಶ
ರಸ್ತೆಯಲ್ಲಿ ಚಲಿಸುತ್ತಿದ್ದ ಕಂಟೇನರ್ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾದ ಘಟನೆ ಶನಿವಾರ ತಡರಾತ್ರಿ ತಾಲೂಕಿನ ಮಂಡಿಹಾಳ ಹತ್ತಿರ ಧಾರವಾಡ-ಗೋವಾ ರಸ್ತೆಯಲ್ಲಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಧಾರವಾಡ
ರಸ್ತೆಯಲ್ಲಿ ಚಲಿಸುತ್ತಿದ್ದ ಕಂಟೇನರ್ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾದ ಘಟನೆ ಶನಿವಾರ ತಡರಾತ್ರಿ ತಾಲೂಕಿನ ಮಂಡಿಹಾಳ ಹತ್ತಿರ ಧಾರವಾಡ-ಗೋವಾ ರಸ್ತೆಯಲ್ಲಿ ಸಂಭವಿಸಿದೆ.ಹುಬ್ಬಳ್ಳಿಯಿಂದ ಬೈಪಾಸ್ ಮೂಲಕ ಕೆಲಗೇರಿ ಬಳಿ ಗೋವಾ ಕಡೆ ಸಿಗರೇಟು ಹಾಗೂ ಇನ್ನಿತರ ವಸ್ತುಗಳನ್ನು ಸಾಗಿಸುತ್ತಿದ್ದ ಕಂಟೇನರ್(ಸಿಎನ್-47 ಬಿಬಿ-8860 ) ಸೇಫ್ ಎಕ್ಸಪ್ರೆಸ್‌ಗೆ ಸಂಸ್ಥೆಗೆ ಸೇರಿದೆ. ಗೋವಾದತ್ತ ತೆರಳುತ್ತಿದ್ದ ಸಮಯದಲ್ಲಿ ಕಂಟೇನರ್‌ಗೆ ಏಕಾಏಕಿ ಕಾಣಿಸಿಕೊಂಡ ಬೆಂಕಿ ಕೆಲ ಹೊತ್ತಲ್ಲೆ ಧಗಧಗಿಸಿದೆ. ಈ ಸಂದರ್ಭದಲ್ಲಿ ಲಾರಿಯಿಂದ ಕೆಳಗಿಳಿದ ಚಾಲಕ ಮತ್ತು ಕ್ಲಿನರ್ ಬಚಾವ್ ಆಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಧಾರವಾಡ ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಮತ್ತು ಸಿಬ್ಬಂದಿ ಅಗ್ನಿಶಾಮಕ ದಳ ಸಮೇತ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.