ಸಾರಾಂಶ
ಮುಂದಿನ ಉಡುಪಿ , ಚಿಕ್ಕಮಗಳೂರು ಕ್ಷೇತ್ರದ ಲೊಕ ಸಭಾಚುನಾವಣೆಯಲ್ಲೂ ಸ್ಪರ್ಧಿಸುವ ಇಂಗಿತವನ್ನು ಸಂಸದೆ ಶೋಭಾ ಕರಂದ್ಲಾಜೆ ವ್ಯಕ್ತ ಪಡಿಸಿದ್ದಾರೆ.
-ಉಡುಪಿ, ಚಿಕ್ಕಮಗಳೂರು ಕ್ಷೇತ್ರ ಚುನಾವಣೆ ಬಗ್ಗೆ ಇಂಗಿತ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಈ ಬಾರಿ ಮತ್ತೊಮ್ಮೆ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇಂಗಿತ ವ್ಯಕ್ತ ಪಡಿಸಿದರು.
ಶನಿವಾರ ದತ್ತ ಜಯಂತಿಯ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ ಅನೇಕ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಮೋದಿಯವರು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳಿ ಎಂದಿದ್ದು ಇದಕ್ಕಾಗಿ ಭಾರತ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಚಿಕ್ಕಮಗಳೂರು- ಉಡುಪಿ ಎರಡೂ ಜಿಲ್ಲೆಗಳಲ್ಲೂ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಲಾಗಿದೆ ಎಂದರು.ಮೆಡಿಕಲ್ ಕಾಲೇಜುಗಳನ್ನು ಮಂಜೂರು, ಕಾಲೇಜುಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ಅನುದಾನ ನೀಡಿದ್ದು, ಎಲ್ಲಾ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಭಾರತವನ್ನು ಎಲ್ಲಾ ಕ್ಷೇತ್ರದಲ್ಲೂ ನಂ.1 ಆಗಿಸುವುದೇ ಮೋದಿಯವರ ಧೃಢ ಸಂಕಲ್ಪ. ದೇಶ ರಕ್ಷಣೆ, ಸೈನಿಕರಿಗೆ ಅತ್ಯಾಧುನಿಕ ಶಸ್ತಾಸ್ತ್ರಗಳು, ದೇಶದ ಭದ್ರತೆಗೆ ಅನೇಕ ರೀತಿ ಶ್ರಮಿಸುತ್ತಿದ್ದಾರೆ.
ಇಡೀ ಪ್ರಪಂಚವೇ ದೇಶ ಗುರುತಿಸುವಂತೆ ಮಾಡಿದ್ದಾರೆ. ಎಲ್ಲಾ ದೇಶಗಳಿಗಿಂತ ನಮ್ಮ ದೇಶದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಜಿಲ್ಲೆಗಳಲ್ಲಿ ಹಲವಾರು ರಸ್ತೆ, ರೈಲ್ವೆ , ಡಿಯುವ ನೀರಿನ ಯೋಜನೆ ಅಭಿವೃದ್ಧಿ ಪಡಿಸಿ. ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೆಲವೊಮ್ಮೆ ಕೃಷಿಕರು ಬೆಳೆದ ಬೆಲೆಯಲ್ಲಿ ಏರು ಪೇರಾಗುತ್ತವೆ. ಹವಾಮಾನ ವ್ಯತ್ಯಾಸದಿಂದಲೂ ತೊಂದರೆಗಳಾಗುತ್ತವೆ. ರೈತರಿಗೆ ಬೇರೆ, ಬೇರೆ ಯೋಜನೆ ಮೂಲಕ ಸಾಕಷ್ಟು ಅನುಕೂಲಗಳನ್ನು ಕೇಂದ್ರದಿಂದ ಮಾಡಲಾಗಿದೆ. ಮುಂದೆಯೂಮೋದಿಯವರೇ ಈ ದೇಶದ ಪ್ರಧಾನಿ ಯಾಗುವುದರಲ್ಲಿ ಯಾವುದೇ ಸಂಶಯ ಬೇಡ ಎಂದರು.