ಸಾರಾಂಶ
ಭಾನುವಾರ ಸಂಜೆಯ ತನಕ ಬಿಡುವು ನೀಡಿ ಮಳೆಯಾಗಿದ್ದು, ರಾತ್ರಿಯಾದಂತೆ ಭಾರಿ ಗಾಳಿಯೊಂದಿಗೆ ಮುಂಗಾರು ಆರ್ಭಟ ಹೆಚ್ಚಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಭಾನುವಾರ ಸಂಜೆಯ ತನಕ ಬಿಡುವು ನೀಡಿ ಮಳೆಯಾಗಿದ್ದು, ರಾತ್ರಿಯಾದಂತೆ ಭಾರಿ ಗಾಳಿಯೊಂದಿಗೆ ಮುಂಗಾರು ಆರ್ಭಟ ಹೆಚ್ಚಾಯಿತು.ನಿರಂತರವಾಗಿ ಸುರಿದ ಗಾಳಿ ಮಳೆಗೆ ಜನರು ತತ್ತರಿಸಿದರು. ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಹಾನಿಯಾದ ವರದಿಯಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ಪಂಚಾಯಿತಿ ಪಿಡಿಒಗಳು ಭೇಟಿ ನೀಡಿ ಮಾಹಿತಿ ಪಡೆದರು.ಸಮೀಪದ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ಲಕ್ಷ್ಮೀ ಅವರ ವಾಸದ ಮನೆ ಮಳೆ ಹಾಗೂ ಗಾಳಿಯಿಂದಾಗಿ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಯಾವುದೇ ಅಪಾಯ ಎದುರಾಗಿಲ್ಲ. ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಬೆಟ್ಟ ಗ್ರಾಮದ ಪ್ರಮೀಳ ಅವರ ಮನೆಯ ಒಳಗಡೆ ಮಳೆ ನೀರು ಬರುತ್ತಿದ್ದು ತಾತ್ಕಾಲಿಕವಾಗಿ ಪಂಚಾಯಿತಿ ವತಿಯಿಂದ ಟಾರ್ಪಲನ್ನು ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ ವಿತರಿಸಿದರು.ಬೆಟ್ಟದಳ್ಳಿ ಗ್ರಾ ಪಂ. ವ್ಯಾಪ್ತಿಯ ಬೇಕನಳ್ಳಿ ಗ್ರಾಮದ ಮುತ್ತಣ್ಣ ಅವರ ಮನೆಯ ಹಿಂಭಾಗ ಭಾರೀ ಮಳೆಯಿಂದ ಕುಸಿದು ಹೋಗಿದ್ದು, ಪಂಚಾಯಿತಿ ವತಿಯಿಂದ ಪಿಡಿಒ ರವಿ ಅವರು ತಾತ್ಕಾಲಿಕವಾಗಿ ಟಾರ್ಪಲ್ ವಿತರಿಸಿದರು.-----------------------------
ಕೊಡಗಿನಲ್ಲಿ ಸಾಧಾರಣ ಮಳೆಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಾದ್ಯಂತ ಸೋಮವಾರ ಸಾಧಾರಣ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೆಲ ಕಾಲ ಬಿಸಿಲಿನ ವಾತಾವರಣದೊಂದಿಗೆ ಸಾಧಾರಣ ಮಳೆ ಸುರಿಯಿತು.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 27.18 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.09 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1598.65 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 980.83 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 44.90 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 15.20 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 27.80 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 37.80 ಮಿ.ಮೀ. ಮಳೆಯಾಗಿದೆ. ಕುಶಾಲನಗರ ತಾಲೂಕಿನಲ್ಲಿ10.20 ಮಿ.ಮೀ. ಮಳೆಯಾಗಿದೆ.ಮಡಿಕೇರಿ ಕಸಬಾ 42, ನಾಪೋಕ್ಲು 19.60, ಸಂಪಾಜೆ 35, ಭಾಗಮಂಡಲ 83, ವಿರಾಜಪೇಟೆ 16.40, ಅಮ್ಮತ್ತಿ 14, ಹುದಿಕೇರಿ 43.20, ಶ್ರೀಮಂಗಲ 21, ಪೊನ್ನಂಪೇಟೆ 35, ಬಾಳೆಲೆ 12, ಸೋಮವಾರಪೇಟೆ 32.40, ಶನಿವಾರಸಂತೆ 29, ಶಾಂತಳ್ಳಿ 67, ಕೊಡ್ಲಿಪೇಟೆ 22.80, ಕುಶಾಲನಗರ 2.40, ಸುಂಟಿಕೊಪ್ಪ 18 ಮಿ.ಮೀ.ಮಳೆಯಾಗಿದೆ.