ಸುತ್ತೂರು ಶ್ರೀಕ್ಷೇತ್ರವು ರಾಜ್ಯದಲ್ಲಿ ತುಳಿತಕ್ಕೆ ಒಳಗಾದ, ನೊಂದವರಿಗೆ ಅನ್ನ, ಅಕ್ಷರ, ಆರೋಗ್ಯ ಮತ್ತು ಅಶ್ರಯ ನೀಡುತ್ತಾ ನೆರವಿಗೆ ನಿಂತಿದೆ. ಯಾವುದೇ ಸದ್ದು ಗದ್ದಲವಿಲ್ಲದೇ, ನಿರಂತರವಾಗಿ ಸೇವಾ ಕಾರ್ಯಕ್ರಮಗಳು ಮಾಡುತ್ತಾ ಬರುತ್ತಿದೆ. ಇದು ಹೀಗೆ ಮುಂದುರೆಯಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸುತ್ತೂರು ಮಠದ ನಿಸ್ವಾರ್ಥ ಸೇವಾ ಮನೋಭಾವದಿಂದ ಹಲವಾರು ಜನರು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಲೋಕ್ ಪಾಲ್ ಸದಸ್ಯ ಎಲ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದಲ್ಲಿ ಆಯೋಜಿಸಿರುವ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವದಲ್ಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಸುತ್ತೂರು ಶ್ರೀಕ್ಷೇತ್ರವು ರಾಜ್ಯದಲ್ಲಿ ತುಳಿತಕ್ಕೆ ಒಳಗಾದ, ನೊಂದವರಿಗೆ ಅನ್ನ, ಅಕ್ಷರ, ಆರೋಗ್ಯ ಮತ್ತು ಅಶ್ರಯ ನೀಡುತ್ತಾ ನೆರವಿಗೆ ನಿಂತಿದೆ. ಯಾವುದೇ ಸದ್ದು ಗದ್ದಲವಿಲ್ಲದೇ, ನಿರಂತರವಾಗಿ ಸೇವಾ ಕಾರ್ಯಕ್ರಮಗಳು ಮಾಡುತ್ತಾ ಬರುತ್ತಿದೆ. ಇದು ಹೀಗೆ ಮುಂದುರೆಯಬೇಕು ಎಂದು ಅಶಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಮ್ಮ ನಾಯಕ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ರವರು ದೇಶಿಕೇಂದ್ರ ಸ್ವಾಮೀಜಿ ಅವರ ಬಳಿ ನಮ್ಮ ಜಿಲ್ಲೆಯಲ್ಲಿ 1066 ನೇ ಶಿವರಾತ್ರೀಶ್ವರ ಜಯಂತ್ಯೋತ್ಸವದ ಆತಿಥ್ಯ ನೀಡಬೇಕೆಂದು ವಿನಂತಿ ಮಾಡಿಕೊಂಡಾಗ ತುಂಬಿ ಹೃದಯದಿಂದ ಒಪ್ಪಿದರು ಎಂದರು.ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಸಾರ್ವಜನಿಕರು ಪಕ್ಷಾತೀತವಾಗಿ ಸಹಕಾರ ನೀಡಿದ ಪರಿಣಾಮ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಅರ್ಥಪೂರ್ಣವಾಗಿ ಜಯಂತ್ಯೋತ್ಸವ ನಡೆಯುತ್ತಿದೆ. ಇದರಿಂದ ಸಾರ್ಥಕ ಕ್ಷಣದಿಂದ ಮನಸ್ಸು ತುಂಬಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, 10ನೇ ಶತಮಾನದಲ್ಲೇ ಹಲವಾರು ಸೇವಾ ಕಾರ್ಯಗಳನ್ನು ಶಿವಯೋಗಿ ಶರಣರು ಆರಂಭಿಸಿದರು. ಅದು ನಿರಂತರವಾಗಿ ಇಂದಿಗೂ ನಡೆಯುತ್ತಾ ಬರುತ್ತಿದೆ. ಶ್ರೀ 7ೇತ್ರ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಸರ್ಕಾರ ಮಾಡಲು ಆಗದ ಅಭಿವೃದ್ಧಿ ಪರ ಕೆಲಸಗಳನ್ನು ಮಠವು ನಡೆಸುತ್ತಿದೆ ಎಂದರು.ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮಿಜೀ ಮಾತನಾಡಿ, ನಾವು ಆಕಾರದಲ್ಲಿ ಮನುಷ್ಯರಾಗುವುದಕ್ಕಿಂತ ಆಚಾರದಲ್ಲಿ ಮನುಷ್ಯ ಆಗಬೇಕಿದೆ. ಮನುಷ್ಯನಲ್ಲಿರುವ ಅಸೂಯೆ, ದ್ವೇಷ, ಕಿಚ್ಚು, ಮತ್ಸರ ತೊರೆಯಬೇಕು ಎಂದರು.
ಮನಸ್ಸು ನಿಲ್ಲಿಸುವ ಸಂಸ್ಕಾರವನ್ನು ಮಠ ಸಾರುತ್ತಿದೆ. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸರ್ವ ಧರ್ಮ ಸಾರುವ ಪ್ರಾರ್ಥನೆಯನ್ನು ಸುತ್ತೂರು ಮಠ ಸಾರುತ್ತಿದೆ ಎಂದು ಶ್ಲಾಘಿಸಿದರು.