ರಾಜ್ಯದ ಖ್ಯಾತ ಗುತ್ತಿಗೆದಾರ, ಉದ್ಯಮಿ ಡಿ.ವೈ.ಉಪ್ಪಾರ (81) ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ರಾಜ್ಯದ ಖ್ಯಾತ ಗುತ್ತಿಗೆದಾರ, ಉದ್ಯಮಿ ಡಿ.ವೈ.ಉಪ್ಪಾರ (81) ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.ಮೂಲತಃ ತಾಲೂಕಿನ ಯಾಳವಾರ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ಅವರು, ಗುತ್ತಿಗೆ ಕಾಮಗಾರಿಗಳ ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳ ಮೂಲಕ ಹೆಸರು ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನಾಡಿನಲ್ಲಿ ಹೆಸರಾಂತ ಕಾಮಗಾರಿಗಳನ್ನು ಮಾಡಿ ಅವರು ಯುವ ಗುತ್ತಿಗೆದಾರರಿಗೆ ಮಾದರಿಯಾಗಿದ್ದರು.
ಬಡತನ ಕುಟುಂಬದಲ್ಲಿ ಜನಿಸಿದ ಇವರು ನಾಲ್ಕು ಜನ ಅಣ್ಣ ತಮ್ಮಂದಿರು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಗ್ರಾಮ ತೊರೆದರು. ಡಿ.ವೈ.ಉಪ್ಪಾರ ಅವರು ಓದಿದ್ದು ನಾಲ್ಕನೇ ತರಗತಿ ಕೆಲಸ ಮಾಡಬೇಕೆಂಬ ಛಲದಿಂದ ಬೆಳಗಾವಿಯಲ್ಲಿ ಯಾಳವಾರ ಗ್ರಾಮದ ಪಿಡಬ್ಲ್ಯೂಡಿ ಅಧಿಕಾರಿಗಳ ಹತ್ತಿರ ಉಗ್ರಾಣದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕೆಲಸ ಮಾಡಬೇಕೆಂಬ ಛಲದಿಂದ ಸಣ್ಣಮಟ್ಟದ ಗುತ್ತಿಗೆ ಕಾಮಗಾರಿಗಳಾದ ಚರಂಡಿ, ರಸ್ತೆ ಹೀಗೆ ಹತ್ತು, ಹಲವಾರು ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಇವರ ಕೆಲಸಕ್ಕೆ ಹಲವಾರು ಮುಖಂಡರು ಭೇಷ್ ಎಂದಿದ್ದರು. ತಾಯಿಯನ್ನು ಕಳೆದುಕೊಂಡ ಮೇಲೆ ಹುಟ್ಟಿದ ಊರನ್ನು ಇಂತಿರುಗಿ ನೋಡಲಿ ಇಲ್ಲ. ರಾಜ್ಯದ ತೊಂದೆಲ್ಲ ಸಾವಿರಾರು ಕೋಟಿ ರುಪಾಯಿ ವೆಚ್ಚದ ನೀರಾವರಿ, ರಾಷ್ಟ್ರೀಯ ಹೆದ್ದಾರಿ ಹೀಗೆ ಹತ್ತು ಹಲವಾರು ಕಾಮಗಾರಿಗಳು ಮಾಡುವ ಮೂಲಕ ಎಲ್ಲರೂ ಜೊತೆ ಒಳ್ಳೆಯ ಸಂಬಂಧದಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ವಿವಿಧ ರಾಜ್ಯಗಳಿಂದ ಪ್ರಖ್ಯಾತ ಗುತ್ತಿಗೆದಾರರು ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಅವರ ಮಧ್ಯೆ ಬೆಳೆದು ಸಮಾಜಮುಖಿ ಕೆಲಸ ಮಾಡುತ್ತಾ ಇತರ ಯುವ ಗುತ್ತಿಗೆದಾರರಿಗೆ ಮಾದರಿಯಾಗಿದ್ದಾರೆ.ಶೂನ್ಯದಿಂದ ಸಾಮ್ರಾಜ್ಯ ನಿರ್ಮಾಣ:
ಶ್ರೀ ಡಿ.ವೈ. ಉಪ್ಪಾರ ಎಜುಕೇಷನಲ್ ಆ್ಯಂಡ್ ಸೋಶಿಯಲ್ ಫೌಂಡೇಷನ್’ ಮೂಲಕ ಅವರು ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಪಾರ ಕೊಡುಗೆ ನೀಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದರು. ಬಡವರಿಗೂ ಸಾಕಷ್ಟು ನೆರವು ನೀಡಿದ್ದರು. ತಮ್ಮ ಜನಪರ ಕೆಲಸಗಳು ಶೂನ್ಯದಿಂದ ಸಾಮ್ರಾಜ್ಯ ಮಾಡುವ ಮೂಲಕ ಹೆಸರು ಮಾಡಿದ್ದರು.ಯಂಕಂಚಿ ದಾವಲ್ ಮಲಿಕ್ ದೇವರ ಭಕ್ತ ಉಪ್ಪಾರ:
ಸಿಂದಗಿ ತಾಲೂಕು ಸುಕ್ಷೇತ್ರ ಯಂಕಂಚಿ ಗ್ರಾಮದ ದಾವಲ್ ಮಲಿಕ್ ದೇವಸ್ಥಾನದ ಭಕ್ತರಾಗಿದ್ದರು. ಈ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡಿದ್ದಾರೆ. ದೇವಸ್ಥಾನದ ಸುತ್ತಲಿನ ಹತ್ತಾರು ಎಕರೆ ಜಮೀನು ಖರೀದಿಸಿ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ. ವಿನಮ್ರತೆ, ಶಿಸ್ತು, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ದೂರದೃಷ್ಠಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ದಾನ ಧರ್ಮದಲ್ಲಿ ಮುಂಚೂಣಿಯಲ್ಲಿ ಉಪ್ಪಾರ:ರಾಜ್ಯದಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದುಬಂದಿರುವ ಅವರು ದಾನ ಧರ್ಮದಲ್ಲಿ ಮುಂಚೂಣಿಯಲ್ಲಿದ್ದರು. ಉತ್ತರ ಕರ್ನಾಟಕ ಭಾಗದ ಬಡ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿನ ಆಶ್ರಯದಾತ ಹಾಗೂ ಹಲವಾರು ಜನರಿಗೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ. ಹಲವಾರು ಸಮಸ್ಯೆಗಳಿಗೆ ಸಹಾಯ ಸಹಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ,ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ಜಾತಿಯ ಧರ್ಮದ ಪ್ರಮುಖರು ಹಾಗೂ ರಾಜಕೀಯ ಮುಖಂಡರ ಜೊತೆ ಒಳ್ಳೆಯ ಸಂಬಂಧದಿಂದ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ ಕುಟುಂಬ ಮೂಲಗಳು.ಬೆಂಗಳೂರಿನಲ್ಲಿ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಟ್ಟು ನಂತರ ಹುಟ್ಟೂರು ಆಯ್ಕೆ ಮಾಡಿಕೊಳ್ಳದೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಗುರುವಾರ ಸಂಜೆ 5ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ, ಕುಟುಂಬದವರು ತಿಳಿಸಿದ್ದಾರೆ.ಉದ್ಯಮಿ ಡಿ.ವೈ.ಉಪ್ಪಾರ ನಿಧನಕ್ಕೆ ಸಚಿವ ಎಂಬಿಪಾ ಸಂತಾಪವಿಜಯಪುರ: ಖ್ಯಾತ ಉದ್ಯಮಿ ಡಿ.ವೈ.ಉಪ್ಪಾರ ನಿಧನಕ್ಕೆಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಂಬನಿ ಮಿಡಿದಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಯಾಳವಾರ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ಅವರು, ಗುತ್ತಿಗೆ ಕಾಮಗಾರಿಗಳ ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳ ಮೂಲಕ ಹೆಸರು ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನಾಡಿನಲ್ಲಿ ಹೆಸರಾಂತ ಕಾಮಗಾರಿಗಳನ್ನು ಮಾಡಿ ಅವರು ಯುವ ಗುತ್ತಿಗೆದಾರರಿಗೆ ಮಾದರಿಯಾಗಿದ್ದರು. ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಪಾರ ಕೊಡುಗೆ ನೀಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದ ಅವರು, ಬಡವರಿಗೂ ಸಾಕಷ್ಟು ನೆರವು ನೀಡಿದ್ದರು. ತಮ್ಮ ಜನಪರ ಕೆಲಸಗಳ ಮೂಲಕ ಹೆಸರು ಮಾಡಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.