ಹೊಸಕೋಟೆ: ರಸ್ತೆ ಅಭಿವೃದ್ಧಿಯ ವೇಳೆ ಗುತ್ತಿಗೆದಾರರ ಜೊತೆ ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ರಸ್ತೆ ಅಭಿವೃದ್ಧಿಯ ವೇಳೆ ಗುತ್ತಿಗೆದಾರರ ಜೊತೆ ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಬೆಳ್ಳಿಕೆರೆ ಗ್ರಾಮದಲ್ಲಿ ಸುಮಾರು 7 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಆನೇಕಲ್ ಗಡಿಯಿಂದ ಬೆಳ್ಳಿಕೆರೆ ಮೂಲಕ ಮುತ್ಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಾಕಷ್ಟು ಹದಗೆಟ್ಟ ಹಿನ್ನೆಲೆ 5.5 ಮೀಟರ್ ಅಗಲದ ರಸ್ತೆಗೆ ಸುಮಾರು 7ಕೋಟಿ ರು. ವೆಚ್ಚದಲ್ಲಿ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೂ ಮೊದಲು ಮುತ್ಕೂರು ಗ್ರಾಮದಿಂದ ಭೋದನಹೊಸಹಳ್ಳಿ ಗ್ರಾಮದವರೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಮುಂದುವರಿದ ಭಾಗವಾಗಿ ಬೆಳ್ಳಿಕೆರೆ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಮುಂದಾಗಬೇಕು. ಕೆಲವೇ ದಿನಗಳಲ್ಲಿ ಬೆಳ್ಳಿಕೆರೆ ಗ್ರಾಮದಲ್ಲಿ ಜಾತ್ರೆ ಇರುವ ಕಾರಣ ಜಾತ್ರೆ ಮುಗಿದ ನಂತರ ಕೆಲಸ ಪ್ರಾರಂಭ ಮಾಡಿ. ಇಲ್ಲವಾದರೆ ಜಾತ್ರೆ ವೇಳೆಗೆ ರಸ್ತೆ ಕಾಮಗಾರಿಗೆ ಮುಗಿಯದೆ ಜಾತ್ರೆಗೆ ತೊಂದರೆ ಉಂಟಾಗುತ್ತದೆ ಎಂದು ಶಾಸಕರು ತಿಳಿಸಿದರು.

ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು ಮಾತನಾಡಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಅಗತ್ಯವಾದ ಮೂಲಭೂತ ಸೌಕರ್ಯಗಳ ಜೊತೆಗೆ ಶೈಕ್ಷಣಿಕವಾಗಿ ಅಗತ್ಯ ಎಲ್ಲಾ ಸವಲತ್ತುಗಳನ್ನು ಶಾಸಕ ಶರತ್ ಬಚ್ಚೇಗೌಡರು ಒದಗಿಸಿಕೊಟ್ಟಿದ್ದಾರೆ. ಖಾಸಗಿ ವಲಯಗಳಿಂದಲೂ ಅನುದಾನ ಪಡೆದು ಅಭಿವೃದ್ದಿಗೆ ಮುಂದಾಗಿದ್ದಾರೆ. ಆದ್ದರಿಂದ ಗ್ರಾಮಗಳಲ್ಲಿ ಪಕ್ಷಾತೀತವಾಗಿ ಮುಖಂಡರು ಒಂದಾಗಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಅನಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಭೋದನಹೊಸಹಳ್ಳಿ ಪ್ರಕಾಶ್, ಬಿಎಂಆರ್‌ಡಿಎ ಮಾಜಿ ಆಧ್ಯಕ್ಷ ಟಿಕೆಆರ್ ಕೃಷ್ಣಾರೆಡ್ಡಿ, ಟಿಎಪಿಸಿಎಂಸ್ ಮಾಜಿ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ, ಮುತ್ಸಂದ್ರ ವಿಎಸ್‌ಎಸ್‌ಎನ್ ಅಧ್ಯಕ್ಷ ರಾಜಬಾಬು ಸೇರಿ ಹಲವಾರು ಗಣ್ಯರು ಹಾಜರಿದ್ದರು.

--------------------

ಫೋಟೋ: 22 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಬೆಳ್ಳಿಕೆರೆ ಗ್ರಾಮದಲ್ಲಿ ಸುಮಾರು 7 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.