ಸಾರಾಂಶ
ವಿಜಯಪುರ: ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಿಪಿಐ ಪ್ರಶಾಂತ್ ನಾಯಕ್ ಹೇಳಿದರು.
ವಿಜಯಪುರ: ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಿಪಿಐ ಪ್ರಶಾಂತ್ ನಾಯಕ್ ಹೇಳಿದರು.
ಪಟ್ಟಣದ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವ ಕುರಿತು ಯುವಜನರಲ್ಲಿ ಜಾಗ್ರತೆ ಮೂಡಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ, ಓದುವುದರ ಕಡೆಗೆ ಹೆಚ್ಚು ಗಮನಹರಿಸಬೇಕು. ಶರಣರ ವಚನಗಳನ್ನು ಪಾಲಿಸಬೇಕು. ಇಂಡಿಯನ್ ಪೀನಲ್ ಕೋಡ್ ಬದಲಿಗೆ ೨೦೨೪ ರಲ್ಲಿ ಬದಲಾಗಿರುವ ಭಾರತೀಯ ನ್ಯಾಯಸಂಹಿತೆ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಪರಿಚಿತ ಕರೆಗಳು ಬಂದರೆ ಕೂಡಲೇ ೧೯೩೦ ಹೆಲ್ಪ್ ಲೈನ್‌ಗೆ ಕರೆ ಮಾಡಬೇಕು. ರಸ್ತೆಗಳಲ್ಲಿ ವ್ಹೀಲಿಂಗ್ ಮಾಡಬೇಡಿ, ಕಂಡು ಬಂದರೆ ೧೧೨ಗೆ ಕರೆ ಮಾಡಿ ಎಂದರು.ಎಎಸ್‌ಐ ಎಚ್.ಎಸ್.ಆಜಾದ್ ಮಾತನಾಡಿ, ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಅಪ್ರಾಪ್ತರು ವಾಹನಗಳು ಚಾಲನೆ ಮಾಡುವುದು ಅಪರಾಧ. ವಾಟ್ಸಪ್ ಕಾಲ್ ಗಳ ಮೂಲಕ ಪೊಲೀಸರ ವೇಷದಲ್ಲಿ ಕರೆ ಮಾಡಿ ಬೆದರಿಕೆ ಹಾಕುತ್ತಾರೆ. ಡಿಜಿಟಲ್ ಅರೆಸ್ಟ್ ಮಾಡುತ್ತಾರೆ. ಅದಕ್ಕೆ ಹೆದರದೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿ, ಅಂತಹ ನಂಬರ್ ಗಳನ್ನು ಬ್ಲಾಕ್ ಮಾಡಿಕೊಳ್ಳಿ ಎಂದರು.
ಪ್ರಾಂಶುಪಾಲ ಡಾ.ಎನ್.ನಾಗರಾಜ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಪ್ರೇಮಾ, ಆಶಾ, ಭಾರತಿ, ವೀಣಾ, ಸುಷ್ಮಾ ಅಶೋಕ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಅರ್.ಶೆಟ್ಟಿನಾಯಕ್ ಹಾಜರಿದ್ದರು.