ಸಾರಾಂಶ
ಹದಡಿಯ ಚಂದ್ರಗಿರಿ ಮಠದ ಸಮುದಾಯ ಭವನ ಪೂರ್ಣಗೊಳ್ಳಲು ಸಚಿವ, ಶಾಸಕ, ಸಂಸದರು ಇಚ್ಛಾಶಕ್ತಿ ಮೆರೆಯುವಂತೆ ಚಂದ್ರಗಿರಿ ಮಠದ ಶ್ರೀ ಸದ್ಗುರು ಪರಮಹಂಸ ಮುರುಳಿಧರ ಶ್ರೀ ನುಡಿದರು.
- ಗುರುಪೂರ್ಣಿಮೆ ಅಂಗವಾಗಿ ಹದಡಿ ಚಂದ್ರಗಿರಿ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹದಡಿಯ ಚಂದ್ರಗಿರಿ ಮಠದ ಸಮುದಾಯ ಭವನ ಪೂರ್ಣಗೊಳ್ಳಲು ಸಚಿವ, ಶಾಸಕ, ಸಂಸದರು ಇಚ್ಛಾಶಕ್ತಿ ಮೆರೆಯುವಂತೆ ಚಂದ್ರಗಿರಿ ಮಠದ ಶ್ರೀ ಸದ್ಗುರು ಪರಮಹಂಸ ಮುರುಳಿಧರ ಶ್ರೀ ನುಡಿದರು.
ನಗರಕ್ಕೆ ಸಮೀಪದ ಹದಡಿ ಹೊಸ ನಾಯಕನಹಳ್ಳಿ ಶ್ರೀ ಚಂದ್ರಗಿರಿ ಮಠದಲ್ಲಿ ಭಾನುವಾರ ನಡೆದ ಗುರುಪೂರ್ಣಿಮೆ, ಭಗವದ್ಗೀತಾ ಪಾರಾಯಣ, ಯಜ್ಞಕಾರ್ಯ, ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.ಈ ಭಾಗದ ಸುತ್ತಮುತ್ತಲ ನೂರಾರು ಹಳ್ಳಿಗಳ ಭಕ್ತರು ರೈತರು, ಜನಕಲ್ಯಾಣಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ಆಪೂರ್ಣ, ನನೆಗುದಿಗೆ ಬಿದ್ದಿದೆ. ಸ್ಥಳೀಯ ಶಾಸಕರು ಸಚಿವರು, ನೂತನ ಸಂಸದರು ಇಚ್ಛಾಶಕ್ತಿ ಮೆರೆದು ಸಮುದಾಯ ಭವನ ಪೂರ್ಣಗೊಳ್ಳಲು ಶ್ರಮಿಸುವಂತೆ ಹೇಳಿದರು.
ಶ್ರೀ ಶಿವಾನಂದ ಸ್ವಾಮಿಗಳು, ಕೊಪ್ಪೇಲೂರು ಶ್ರೀ ಪ್ರಿಯಾನಂದ ಶ್ರೀಗಳು, ಮಣಕೂರಿನ ಮಾತೋಶ್ರೀ ಚನ್ನಬಸಮ್ಮ ತಾಯಿ, ಹಲಿಗೇರಿಯ ಶ್ರೀ ಅನ್ನಪೂರ್ಣ ನಂದಗಿರಿ ಮಾತಾಶ್ರೀ, ಶಾಗಲೆಯ ಶ್ರೀ ಕೃಷ್ಣಪಾದ ಆರ್ಯ ಸ್ವಾಮೀಜಿ, ಶ್ರೀ ಕೃಷ್ಣಾನಂದ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಜೆ.ಸಿ. ನಿಂಗಪ್ಪ, ಮಠದ ಕಾರ್ಯದರ್ಶಿ ಟಿ.ಬಿ. ಮಹಾಂತೇಶ್, ಕುಂಟೋಜಿ ಬಸಣ್ಣ, ಕುಂಟಪ್ನ ನಿಂಗಪ್ಪ, ಬಸವರಾಜಪ್ಪ ಕನಗಗೊಂಡನಹಳ್ಳಿಯ ಶಿವಣ್ಣ, ಹದಡಿಯ ಎಂ.ಡಿ.ನಿಂಗಪ್ಪ, ಪಿ.ಟಿ.ಸಿದ್ದಾರೂಢಪ್ಪ ನಿಟ್ಟುವಳ್ಳಿ, ಶ್ರೀ ಮಠದ ಭಕ್ತರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ನೂತನ ವಧು-ವರರ ಸಾಮೂಹಿಕ ಉಚಿತ ಕಲ್ಯಾಣ ಕಾರ್ಯ ನಡೆಯಿತು.
- - --21ಕೆಡಿವಿಜಿ44ಃ:
ಹದಡಿಯ ಚಂದ್ರಗಿರಿ ಮಠದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ಪರಮಹಂಸ ಮುರಳಿಧರ ಶ್ರೀ ಆಶೀರ್ವಚನ ನೀಡಿದರು.