ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ತಾಲೂಕು ಘಟಕದ ಕಚೇರಿಯಲ್ಲಿ ಡಿ.30 ಹಾಗೂ 31ರಂದು ಜರುಗುವ ಜಿಲ್ಲಾಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆ
ಕನ್ನಡಪ್ರಭ ವಾರ್ತೆ ಇಂಡಿ
ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ತಾಲೂಕು ಘಟಕದ ಕಚೇರಿಯಲ್ಲಿ ಡಿ.30 ಹಾಗೂ 31ರಂದು ಜರುಗುವ ಜಿಲ್ಲಾಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಅನೇಕ ಜನ ಮಹಿಳಾ ಕವಿಯತ್ರಿಯರು, ಸಾಹಿತಿಗಳು ಕೆಲಸ ಮಾಡುತ್ತಿದ್ದಾರೆ ಹಾಗೂ ಅನೇಕ ಜನ ಯುವ ಕವಿಯತ್ರಿಯರಿದ್ದಾರೆ. ಅವರೆಲ್ಲರಿಗೂ ಈ ಸಮ್ಮೇಳನದಲ್ಲಿ ಅವಕಾಶ ನೀಡಿ ನಮ್ಮ ತಾಯಂದಿರಿಗೆ, ಸಹೋದರಿಯರಿಗೆ ಗೌರವಿಸೋಣ. ಇದಕ್ಕೆ ತಾವೆಲ್ಲರೂ ಸಹಕರಿಸಲು ಮನವಿ ಮಾಡಿದರು.
ವೇದಿಕೆಯಲ್ಲಿದ್ದ ಇಂಡಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಅದರಲ್ಲಿ ವಿಶೇಷವಾಗಿ ಇಂಡಿ ತಾಲೂಕಿನಲ್ಲಿ ಸುಮಾರು ಜನ ಕವಿಯತ್ರಿಯರು, ಸಾಹಿತಿಗಳು ಇದ್ದಾರೆ. ಅವರೆಲ್ಲರಿಗೂ ಇದೊಂದು ಸುವರ್ಣ ಅವಕಾಶ ಒದಗಿ ಬಂದಿದೆ. ಇದಕ್ಕೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದೆಯೆಂದರು.ಸಭೆಯಲ್ಲಿ ಅಹಮ್ಮದ ವಾಲೀಕಾರ, ಪಾರ್ವತಿ ಸೊನ್ನದ, ಹಿರಿಯ ಸಾಹಿತಿ ಡಿ.ಎನ್.ಅಕ್ಕಿ, ಎಸ್.ಎಮ್.ಕಡಕೋಳ, ಆರ್.ವ್ಹಿ.ಪಾಟೀಲ, ಕಪಾಲಿ, ಬಿ.ಎಸ್.ಪಾಟೀಲ, ಅವಿನಾಶ ಬಗಲಿ, ಶ್ರೀಮತಿ ತೆಲಗ, ಶ್ರೀಮತಿ ಹಿರೇಮಾಳ ಹಾಗೂ ಅನೇಕ ಜನ ಕವಿಯತ್ರಿಯರು, ಸಾಹಿತಿಗಳು, ಶಿಕ್ಷಕಿಯರು ಭಾಗವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ ಖಜಾಂಚಿ ವಾಯ್.ಟಿ.ಪಾಟೀಲ ಸ್ವಾಗತಿಸಿ, ನಿರೂಪಿಸಿದರು.