ಪಾಲಕರು ನಿರಂತರ ಸಹಕಾರ, ವಿದ್ಯಾರ್ಥಿಗಳ ಸತತಾಭ್ಯಾಸ ಶಿಕ್ಷಣ ಸಂಸ್ಥೆ ಪ್ರಗತಿಗೆ ಪೂರಕವಾಗಿವೆ. ವಿದ್ಯಾರ್ಥಿಗಳು ಶ್ರಮವಹಿಸಿ ತಮ್ಮ ಗುರಿಯತ್ತ ಮುನ್ನುಗ್ಗಬೇಕು.

ನರಗುಂದ: ಶಿಕ್ಷಣ ಸಂಸ್ಥೆಗಳು ಬೆಳೆಯಬೇಕಾದರೆ ಶಿಕ್ಷಕರ ಪಾತ್ರ ಅಪಾರ. ಆದ್ದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಜತೆಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಬಾಬಾಸಾಹೇಬರ ಅರಮನೆ ಆವರಣದಲ್ಲಿ ನಡೆದ ಲಯನ್ಸ್ ಶಿಕ್ಷಣ ಸಂಸ್ಥೆ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಪಾಲಕರು ನಿರಂತರ ಸಹಕಾರ, ವಿದ್ಯಾರ್ಥಿಗಳ ಸತತಾಭ್ಯಾಸ ಶಿಕ್ಷಣ ಸಂಸ್ಥೆ ಪ್ರಗತಿಗೆ ಪೂರಕವಾಗಿವೆ. ವಿದ್ಯಾರ್ಥಿಗಳು ಶ್ರಮವಹಿಸಿ ತಮ್ಮ ಗುರಿಯತ್ತ ಮುನ್ನುಗ್ಗಬೇಕು ಎಂದರು.

ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಪ್ರಭು ನಂದಿ ಮಾತನಾಡಿ, ವಾರ್ಷಿಕ ಸ್ನೇಹ ಸಮ್ಮೆಳನಗಳು ವಿದ್ಯಾರ್ಥಿಗಳ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸೂಕ್ತ ವೇದಿಕೆಯಾಗಿದೆ. ಸಾಂಸ್ಕೃತಿಕ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಇಲ್ಲಿ ಅವಕಾಶವಿದೆ. ಪಾಲಕರು, ಶಿಕ್ಷಕರು ಇದನ್ನು ಗುರುತಿಸಿ ಅವರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಸ್ತಪ್ರತಿಗಳಾದ ಲಯನ್ಸ್ ಹಾಗೂ ಭಾವಸಿಂಧು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಆದರ್ಶ ವಿದ್ಯಾರ್ಥಿಗಳಾಗಿ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಿತಂ ಪಟ್ಟಣಶೆಟ್ಟಿ, ಚಂದನಾ ಕವಲೂರ, ಲಯನ್ಸ್ ಪಿಯು ಕಾಲೇಜಿನ ಶಿಫಾ ಅಲ್ಲಿಬಾಯಿ, ಬಸವರಾಜ ಬಟಕುರ್ಕಿ, ಲಯನ್ಸ್ ಕನ್ನಡ ಮಾಧ್ಯಮ ಶಾಲೆಯ ವೀರೇಶ ಜವಳಿ, ಕವನಾ ಪಿಡನಾಯ್ಕರ ಅವರನ್ನು ಆಯ್ಕೆ ಮಾಡಲಾಯಿತು.

ಸಮಾರಂಭದಲ್ಲಿ ವೈಸ್ ಚೇರ್ಮನ್ ಉಮೇಶಗೌಡ ಪಾಟೀಲ, ಜಂಟಿ ಕಾರ್ಯದರ್ಶಿ ವಿ.ಬಿ. ಬೆಲೇರಿ, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಮಂಜುಳಾ ಗುಜಮಾಗಡಿ, ಉಪಾಧ್ಯಕ್ಷೆ ಸುಕನ್ಯಾ ಸಾಲಿ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ ಮಾದನೂರ, ನಿರ್ದೇಶಕರಾದ ಜಿ.ಬಿ. ಕುಲಕರ್ಣಿ, ಜಿ.ಟಿ. ಗುಡಿಸಾಗರ, ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ಬಿ.ಕೆ. ಗುಜಮಾಗಡಿ, ಎಸ್.ಎಸ್. ಪಾಟೀಲ, ಜೆ.ವಿ. ಕಂಠಿ, ಟಿ.ಎಸ್. ರೋಖಡೆ, ರಾಘವೇಂದ್ರ ಆನೇಗುಂದಿ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಇದ್ದರು. ಮುಖ್ಯ ಶಿಕ್ಷಕ ಜಿ.ಬಿ. ಹಿರೇಮಠ ಸ್ವಾಗತಿಸಿದರು. ಸ್ನೇಹಾ ಶಿವಪುರ ನಿರೂಪಿಸಿ, ವಂದಿಸಿದರು.