ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸೊಳ್ಳೆಗಳಿಂದ ಹಲವು ಕಾಯಿಲೆಗಳು ಬರುತ್ತಿವೆ. ಸೊಳ್ಳೆಗಳ ಸಂತತಿ ಹೆಚ್ಚಾಗದಂತೆ ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಅಕ್ಕಿಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪ್ತಿಶೆಟ್ಟಿ ತಿಳಿಸಿದರು.ತಾಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಗ್ರಾಪಂ ಸದಸ್ಯರಿಗೆ ಮಲೇರಿಯಾ ನಿಯಂತ್ರಣದ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಲೇರಿಯಾ ಹರಡುವ ಅನಾಪಿಲಿ ಸೊಳ್ಳೆಯ ಸಂತತಿಯನ್ನು ನಿಯಂತ್ರಿಸುವುದು ಹಾಗೂ ಸೊಳ್ಳೆಗಳು ಮೊಟ್ಟೆ ಇಟ್ಟು ಮರಿ ಮಾಡುವ ಸ್ಥಳಗಳನ್ನು ಗುರುತಿಸಿ ನೀರು ಹೆಚ್ಚು ದನಿಗಳು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.ಈ ಬಗ್ಗೆ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಜನಸಾಮಾನ್ಯರಿಗೆ ಮನೆಮನೆಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಮಲೇರಿಯಾ ರೋಗ ಹರಡುವ ಮತ್ತು ರೋಗ ನಿಯಂತ್ರಣದ ಬಗ್ಗೆ ಮಲೇರಿಯಾ ಕಾಯಿಲೆ ನಿರ್ಮೂಲನೆ ಮಾಡಲು ಗ್ರಾಮ ಪಂಚಾಯಿತಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ರೋಗ ನಿಯಂತ್ರಣದ ಬಗ್ಗೆ ಸಹಕಾರ ನೀಡಬೇಕು. ಗ್ರಾಪಂ ಸದಸ್ಯರು ಜನರಿಂದ ಚುನಾಯಿತರಾಗಿರುವುದರಿಂದ ನಿಮ್ಮ ಮಾತುಗಳನ್ನು ಜನರು ಹೆಚ್ಚಾಗಿ ಕೇಳುತ್ತಾರೆ. ಸಾರ್ವಜನಿಕರಿಗೆ ಮಾಹಿತಿ ನೀಡಲು ನಿಮಗೆ ಈ ತರಬೇತಿ ನೀಡುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಹರೀಶ್, ಆರೋಗ್ಯ ನಿರಕ್ಷಣಾಧಿಕಾರಿ ಮಂಚೇಗೌಡ, ಧಮೇಂದ್ರ, ಸತೀಶ್, ಅಶ್ವಿನಿ ಸುಗುಣ ಸೇರಿದಂತೆ ಸದಸ್ಯರುಗಳು, ಪಿಡಿಒಗಳು, ಸಾರ್ವಜನಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ಮಾದಕ ವ್ಯಸನ, ಮದ್ಯಪಾನದಿಂದ ದೂರವಿರಿ: ಇನ್ಸ್ ಪೆಕ್ಟರ್ ಆನಂದ್ಕನ್ನಡಪ್ರಭ ವಾರ್ತೆ ಭಾರತೀನಗರಮಾದಕ ವ್ಯಸನ, ಮದ್ಯಪಾನದಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ಇನ್ಸ್‌ಪೆಕ್ಟರ್ ಆನಂದ್ ಕಿವಿಮಾತು ಹೇಳಿದರು. ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಾದಕ ವ್ಯಸನ ಮತ್ತು ಮದ್ಯಪಾನದ ಬಗ್ಗೆ ಭಾರತೀನಗರದ ಪೊಲೀಸ್‌ಠಾಣೆ ವತಿಯಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಮಾತನಾಡಿ, ಮದ್ಯಪಾನ ಮತ್ತು ದುಶ್ಚಟಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಜೊತೆಗೆ ವಿದ್ಯಾಭ್ಯಾಸ ಮೊಟಕುಗೊಂಡು ಜೀವನ ಹಾಳಾಗುತ್ತಿದೆ ಎಂದರು.
ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಬಾರದು. ದುಶ್ಚಟಗಳಿಂದ ಅನೇಕ ಅಪರಾಧಗಳು ಹೆಚ್ಚಾಗುತ್ತಿವೆ. ಮಾದಕ ವಸ್ತುವನ್ನು ಹಣದ ಆಸೆಗಾಗಿ ನೀಡುತ್ತಾರೆ. ಅದನ್ನು ತಡೆಯಲು ಕಾನೂನು ಕ್ರಮಕೈಗೊಂಡಿದ್ದೇವೆ. ಗಾಂಜಾ, ಡ್ರಗ್ಸ್‌ಗಳನ್ನು ಮಾರಾಟ ಮಾಡುವವರ ಹೆಸರನ್ನು ಪೊಲೀಸರಿಗೆ ತಿಳಿಸಿದರೆ ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.ಈ ವೇಳೆ ಸಂಚಾರಿ ಇನ್ಸ್‌ಪೆಕ್ಟರ್ ಸ್ವಾತಿ, ಆನಂದ್, ಸಂಚಾರಿ ನಿಯಂತ್ರಣ ಪಿಎಸ್‌ಐ ಬಸವರಾಜು, ವಾಣಿ ಅವರನ್ನು ಭಾರತೀ ವಿದ್ಯಾಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಿದರು. ವೇದಿಕೆಯಲ್ಲಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಜಿ.ಕೆ.ಕೃಷ್ಣ, ಉಪನ್ಯಾಸಕರು ಉಪಸ್ಥಿತರಿದ್ದರು.