ಸಾರಾಂಶ
ಮುಂಜಾನೆ ಪತ್ರಿಕೆಗಳನ್ನ ವಿತರಿಸುವ ಸಂದರ್ಭದಲ್ಲಿ ಬೀದಿನಾಯಿಗಳು ಅಡ್ಡಿಪಡಿಸಿ ಕಚ್ಚಿರುವ ಘಟನೆಗಳು ನಡೆದಿದೆ. ಮಕ್ಕಳು ಓದಿನ ಜೊತೆಗೆ ಮುಂಜಾನೆ ಎದ್ದು ಪತ್ರಿಕೆಗಳನ್ನು ಹಾಕುವುದು ದೈನಂದಿನ ಕೆಲಸವಾಗಿದ್ದು ಸೈಕಲ್‌ನಲ್ಲಿ ಮನೆ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಬೀದಿ ನಾಯಿಗಳು ಓಡಿಸಿಕೊಂಡು ಹೋಗುವ ಪ್ರಸಂಗಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಆದ್ದರಿಂದ ಬೀದಿ ನಾಯಿಗಳ ಕಡಿವಾಣಕ್ಕೆ ತಕ್ಷಣ ಈ ಬಗ್ಗೆ ಗಮನಹರಿಸಿ ಬೀದಿ ನಾಯಿಗಳನ್ನು ಹಿಡಿಸಬೇಕು ಎಂದು ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಅವರಿಗೆ ಮನವಿ ಪತ್ರ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪತ್ರಿಕಾ ವಿತರಕರ ಒಕ್ಕೂಟದಿಂದ ಬೀದಿ ನಾಯಿಗಳ ಹಾವಳಿ ಕುರಿತಾಗಿ ಪುರಸಭೆ ಮುಖ್ಯ ಅಧಿಕಾರಿ ಹೇಮಂತ್ ಅವರಿಗೆ ಮನವಿ ಪತ್ರ ನೀಡಲಾಯಿತು.ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ಮಾತನಾಡಿ, ಹಲವು ವಾರ್ಡುಗಳಲ್ಲಿ ಮುಂಜಾನೆ ಪತ್ರಿಕೆಗಳನ್ನ ವಿತರಿಸುವ ಸಂದರ್ಭದಲ್ಲಿ ಬೀದಿನಾಯಿಗಳು ಅಡ್ಡಿಪಡಿಸಿ ಕಚ್ಚಿರುವ ಘಟನೆಗಳು ನಡೆದಿದೆ. ಮಕ್ಕಳು ಓದಿನ ಜೊತೆಗೆ ಮುಂಜಾನೆ ಎದ್ದು ಪತ್ರಿಕೆಗಳನ್ನು ಹಾಕುವುದು ದೈನಂದಿನ ಕೆಲಸವಾಗಿದ್ದು ಸೈಕಲ್‌ನಲ್ಲಿ ಮನೆ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಬೀದಿ ನಾಯಿಗಳು ಓಡಿಸಿಕೊಂಡು ಹೋಗುವ ಪ್ರಸಂಗಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಆದ್ದರಿಂದ ಬೀದಿ ನಾಯಿಗಳ ಕಡಿವಾಣಕ್ಕೆ ತಕ್ಷಣ ಈ ಬಗ್ಗೆ ಗಮನಹರಿಸಿ ಬೀದಿ ನಾಯಿಗಳನ್ನು ಹಿಡಿಸಬೇಕು. ಅವುಗಳ ಉಪಟಳ ತಪ್ಪಿಸಿ ಸಾರ್ವಜನಿಕರಿಂದಲೂ ಈ ಬಗ್ಗೆ ದೂರುಗಳಿದೆ, ಈ ಬಗ್ಗೆ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಯಿತು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಹೇಮಂತ್ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಂಘಕ್ಕೆ ಭರವಸೆ ನೀಡಿದರು.ವಿತರಕರ ಸಂಘದ ಕಾರ್ಯದರ್ಶಿ ಎ. ಎಂ. ಜಯರಾಮ್, ಖಜಾಂಚಿ ಸಿ. ಎಸ್. ವೆಂಕಟೇಶ್, ನಿರ್ದೇಶಕರಾದ ಮಂಜುನಾಥ್, ಚಂದ್ರಶೇಖರ್, ಪರಮೇಶ್ವರ್, ಅನಿಲ್, ಗುರುಪ್ರಸಾದ್ ಮುಂತಾದವರಿದ್ದರು.