ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಆಹಾರೋತ್ಸವ ಕಾರ್ಯಕ್ರಮವನ್ನು ಭಟ್ ಆ್ಯಂಡ್ ಭಟ್ ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ ಉದ್ಘಾಟಿಸಿದರು.

ಮೂಡುಬಿದಿರೆ: ಅಡುಗೆ ಮಾಡುವುದು ಒಂದು ಅಪೂರ್ವಕಲೆ. ಭಾರತೀಯ ಆಹಾರ ಪದ್ಧತಿ ವಿದೇಶದಲ್ಲಿಯೂ ಮಾನ್ಯತೆ ಪಡೆದಿದೆ. ದೇಸಿ ಅಡುಗೆ ನಮ್ಮ ಆರೋಗ್ಯವನ್ನು ಸದೃಢವಾಗಿರುತ್ತದೆ ಎಂದು ಭಟ್ ಆ್ಯಂಡ್ ಭಟ್ ವಾಹಿನಿ ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ ಹೇಳಿದ್ದಾರೆ.

ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಆಹಾರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಡೆಯುವ ಕಲ್ಲಿನಲ್ಲಿ ವ್ಯಂಜನಗಳನ್ನು ಹಾಕಿ ಕಡಿಯುವುದರೊಂದಿಗೆ ವಿನೂತನವಾಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಮೂಡುಬಿದಿರೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಮಾತನಾಡಿ, ಅಡುಗೆ ಕೆಲಸಗಳಿಂದ ಕೌಶಲ್ಯ ವೃದ್ಧಿಸುತ್ತದೆ. ಪ್ರತಿಯೊಂದು ವ್ಯಂಜನಗಳಿಗೂ ಅದರ ವಿಶೇಷ ಗುಣವಿದೆ. ಅದನ್ನು ಅರಿತು ಸರಿಯಾಗಿ ಉಪಯೋಗಿಸುವುದರಿಂದ ದೇಹ ಮತ್ತು ಮನಸ್ಸು ಎರಡೂ ಬಲಿಷ್ಠವಾಗುತ್ತದೆ ಎಂದರು. ಮೂಡುಬಿದಿರೆ ಎಕ್ಸಲೆಂಟ್ ಮೂಡುಬಿದಿರೆ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಮಾನಸ ದ್ವಾರಕನಾಥ್, ಸುನಂದ ಪಿ ಜೈನ್, ವೀರಶ್ರೀ ಸಂಪತ್, ಸಚಿನ್, ಫುಡ್ ಕೋರ್ಟಿನ ರಾಘವೇಂದ್ರ, ವಿವೇಕ್ ಹಾಜರಿದ್ದರು.

ಸಂಸ್ಥೆಯ ವಾಣಿಜ್ಯ ವಿಭಾಗ ಮತ್ತು ಪ್ರೌಢಶಾಲಾ ವಿಭಾಗ ಆಹಾರೋತ್ಸವ ಆಯೋಜಿಸಿತ್ತು. ಕನ್ನಡ ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಸ್ವಾಗತಿಸಿದರು. ಆಂಗ್ಲ ಭಾಷೆ ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿದರು.