ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರತಿ ಗ್ರಾಮಗಳಲ್ಲಿ ಜನಗಣತಿ ಮಾಡಲು ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ತಿಳಿಸಿದರು.

ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ 3 ಕೋಟಿ ರು. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಹಲವು ಬಾರಿ ಜನಗಣತಿ ಕಾರ್ಯಕ್ರಮಗಳಿಗೆ ಬಂದಾಗ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದಿಸದ ಕಾರಣ ಈ ಬಾರಿ ಮತ್ತೆ ಜನಗಣತಿ ಮಾಡಲಾಗುತ್ತಿದೆ ಎಂದರು.

ಇಂದಿನಿಂದ ಪ್ರಾರಂಭವಾಗುವ ಜನಗಣತಿಯಲ್ಲಿ ಪ್ರತಿ ಮನೆಗಳಿಗೆ ಅಧಿಕಾರಿಗಳು ಬಂದ ವೇಳೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಮನೆಯ ಕುಟುಂಬ ಸದಸ್ಯರ ಮಾಹಿತಿ ನೀಡಬೇಕು. ಆ ಸಮಯದಲ್ಲಿ ನೀವು ನೀಡುವ ಜನಗಣತಿ ಮಾಹಿತಿಗಳು ಗಣನೆಗೆ ಬರುತ್ತದೆ ಎಂದರು.

ನಿಮ್ಮ ಕುಟುಂಬಸ್ಥರು ಹೆಸರು ಅವರ ವಿವರಗಳ ಮಾಹಿತಿಗಳು ನೀಡದಿದ್ದರೆ ಹೆಸರು ನೋಂದಾವಣೆಯಾಗುವುದಿಲ್ಲ. ತಪ್ಪು ಮಾಹಿತಿ ಕೊಡದೆ ಸರಿಯಾದ ಮಾಹಿತಿ ತಿಳಿಸಿ. ಒಂದು ವೇಳೆ ಗಣತಿ ಸಮಯದಲ್ಲಿ ನೀಡದಿದ್ದರೆ ಮುಂದೆ ಅವರಿಗೂ ಸಮಸ್ಯೆಗಳು ಆಗುತ್ತವೆ. ಹೆಸರು ಕೈ ಬಿಡದಂತೆ ಜನಗಣತಿ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ತಿಳಿಸಿದರು.18,19ರಂದು ರಾಜ್ಯ ಮಟ್ಟದ ಜೋಡಿ ಹಸುಗಳ ಚಕ್ಕಡಿ ಓಟ ಸ್ಪರ್ಧೆ


ಮಳವಳ್ಳಿ: ಪಟ್ಟಣದ ಉಗ್ರಾಣಪುರದದೊಡ್ಡಿ ಮತ್ತು ಕೋಟೆ ನಾಡಪ್ರಭು ಕೆಂಪೇಗೌಡ ಯುವಕರ ಬಳಗದಿಂದ ಏ.18 ಮತ್ತು 19 ರಂದು 6ನೇ ವರ್ಷದ ರಾಜ್ಯ ಮಟ್ಟದ ಜೋಡಿ ಹಸುಗಳ ಮತ್ತು 1ನೇ ವರ್ಷದ ಚಕ್ಕಡಿ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ನಡೆಯುವ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ನೂರಾರು ರಾಸುಗಳ ಪಾಲ್ಗೊಳ್ಳಲಿವೆ. ಏ.18ರಂದು ಹಾಲು ಹಲ್ಲು ಮತ್ತು ಎರಡು ಹಲ್ಲುಗಳ ಹಸುಗಳು ಓಟದ ಸ್ಪರ್ಧೆ ಅವಕಾಶ ಇರಲಿದೆ. ಹಾಗೂ ಏ.19ರಂದು ಹಸುಗಳ ಓಟದ ಸ್ಪರ್ಧೆ ಆಯೋಜಿಸಲಾಗಿದೆ.

ಎರಡು ವಿಭಾಗಗಳಲ್ಲೂ ಮೊದಲನೇ ಬಹುಮಾನ 40 ಸಾವಿರ, ದ್ವಿತೀಯ ಬಹುಮಾನ 30 ಸಾವಿರ, ತೃತೀಯ ಬಹುಮಾನ 20 ಸಾವಿರ ಹಾಗೂ ನಾಲ್ಕನೇ ಬಹುಮಾನ 15 ಸಾವಿರದ ಜೊತೆಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಮಂಜು-8749020403, ಲೋಕೇಶ್-9945460198, ಗೌತಮ್-8088837179, ಶಂಕರ್-9535516151, ಪ್ರಜ್ವಲ್-7483930343 ಹಾಗೂ ದೇವರಾಜು-9620837530 ಸಂಪರ್ಕಿಸಲು ಯುವಕರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.