ಸಾರಾಂಶ
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 115ನೇ ಕೆಂಪೇಗೌಡ ಜಯಂತಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಕಡೂರು ಪಟ್ಟಣದಲ್ಲಿ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕನಾಗಿ ನನ್ನ ಸಹಕಾರ ನೀಡಲು ಸದಾ ಸಿದ್ಧ ನಿದ್ದೇನೆ ಎಂದು ಶಾಸಕ ಕೆ.ಎಸ್ ಆನಂದ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 115ನೇ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು. ಕೆಂಪೇಗೌಡರು ಮುಂದಿನ ಕಲ್ಪನೆ ಬೆಂಗಳೂರು ನಗರ ಕಟ್ಟಿದ್ದ ಅವರು ದೂರದೃಷ್ಟಿಯಿಂದ ಜಾತ್ಯತೀತವಾಗಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಮಾನ್ಯತೆ ನೀಡಿದ ಮಹಾನ್ ಆಡಳಿತಗಾರ. ಉಪ್ಪಾರಪೇಟೆ, ನಗರ್ತರಪೇಟೆ, ತರಗುಪೇಟೆ ಸೇರಿದಂತೆ ಸುಮಾರು 50 ಸಮುದಾಯಗಳ ಅಭಿವೃದ್ಧಿಗೆ ಅವರ ವ್ಯಾಪಾರಕ್ಕಾಗಿ ಎಲ್ಲರಿಗೂ ಆದ್ಯತೆ ನೀಡಿದರು.ಯಲಹಂಕವನ್ನು ಕೇಂದ್ರವಾಗಿಸಿ ಬೆಂಗಳೂರು ಕಟ್ಟಿದ ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ಅನೇಕ ಸಮಸ್ಯೆ ಎದುರಿಸಿದರು. ಬೆಂಗಳೂರು ನಿರ್ಮಾಣ ಸಮಯದಲ್ಲಿ ಆಗುತ್ತಿದ್ದ ಅಡ್ಡಿಗೆ ಪುರೋಹಿತರ ಸಲಹೆಯಂತೆ ಗರ್ಭಿಣಿ ಬಲಿ ನೀಡಲು ಯಾರೂ ಬಾರದಾಗ ನಾಡಿನ ಜನರಿಗಾಗಿ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಸ್ವತಹ ತಾನೇ ಬಲಿಯಾಗಿ ಬೆಂಗಳೂರು ನಿರ್ಮಾಣಕ್ಕೆ ಕಾರಣರಾದರು ಎಂದರು.ಈ ರಾಜ್ಯಕ್ಕೆ ವಕ್ಕಲಿಗ ಸಮಾಜ 70 ವರ್ಷಗಳ ರಾಜ್ಯ ರಾಜಕೀಯವಾಗಿ ಅನೇಕ ಕೊಡುಗೆ ನೀಡಿದೆ. ಒಕ್ಕಲಿಗ ಸಮಾಜದ ಮುಖಂಡರ ಕೊಡುಗೆ ಮರೆಯುವಂತಿಲ್ಲ ಎಂದರು.ಮೊದಲ ಬಾರಿ ಮುಖ್ಯಮಂತ್ರಿಗಳಾದಾಗ ಸಿದ್ದರಾಮಯ್ಯ ಕೆಂಪೇಗೌಡ ಜಯಂತಿಯನ್ನು ನಾಡ ಹಬ್ಬವಾಗಿ ಆಚರಿಸಲು ಆದೇಶಿಸಿದರು.ಕಡೂರು ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಈ ಸಮಾಜ ತಮ್ಮ ಗೆಲುವಿಗೆ ಹೆಚ್ಚಿನ ಮತ ನೀಡಿರುವುದನ್ನುಮರೆಯುವುದಿಲ್ಲ. ಇನ್ನು ಕೆಂಪೇಗೌಡರ ಪುತ್ಥಳಿ ಸ್ಥಾಪನೆಗೆ ತಾವು ಶಾಸಕರಾದ ಮೇಲೆ ಸಮಾಜ ಮುಖಂಡರ ಕೋರಿಕೆಯಂತೆ ಅರಣ್ಯ ಇಲಾಖೆ, ಜಿಲ್ಲಾಧಿಕಾರಿಗೆ ವಿಶಾಲ ಜಾಗ ಸೂಚಿಸಲಾಗಿದೆ. ಪುತ್ಥಳಿ ಉದ್ಘಾಟನೆಗೆ ಸಚಿವರನ್ನು ಕರೆಸಿ ಕಾರ್ಯಕ್ರಮ ಅದ್ಧೂರಿಯಾಗಿ ಮಾಡಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ರಾಜ ಕಾರಣದಿಂದ ಹೊರತಾಗಿಯೂ ಈ ಸಮಾಜದೊಂದಿಗೆ ನನ್ನ ಸಂಬಂಧ ಉತ್ತಮವಾಗಿದ್ದು, ಯಾವಾಗಲೂ ನಿಮ್ಮಜೊತೆ ಇರುತ್ತೇನೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸಾಮಾಜಿಕ ನ್ಯಾಯಾಲಯದ ಪರಿಕಲ್ಪನೆಯಲ್ಲಿ, 50 ವಿವಿಧ ವರ್ಗದ ಸಮುದಾಯಕ್ಕಾಗಿ ನಗರ ನಿರ್ಮಾಣ ಮಾಡಿದ ಕೀರ್ತಿ, ವಿಜಯನಗರ ಅರಸರ ಕಾಲದಲ್ಲಿ ಸಮರ್ಥ ಆಡಳಿತ ನಿಭಾಯಿಸಿದ ಕೆಂಪೇಗೌಡರದು. ನೂರಾರು ಕೆರೆಗಳನ್ನು ಕಟ್ಟಿದ್ದಾರೆ. ಈ ನಿಟ್ಟಲ್ಲಿ ನಮ್ಮ ಶಾಸಕ ಆನಂದ್ ರವರು ಕಡೂರು- ಬೀರೂರು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಎಲ್ಲ ಸಮುದಾಯಗಳ ಅಭಿವೃದ್ಧಿ ಮಾಡಿ ಎಲ್ಲರ ಪ್ರೀತಿ ಗಳಿಸಲಿ ಎಂದರು.ಕಾರ್ಯಕ್ರಮದಲ್ಲಿ ನಿ. ಉಪನ್ಯಾಸಕ ಟಿ. ಆರ್ ಲಕ್ಕಪ್ಪ ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ವಕ್ಕಲಿಗ ಸಮಾಜದ ಪದಾಧಿಕಾರಿ ಗೋಪಿಕುಮಾರ್, ತಾಪ ಇಒ ಸಿ.ಆರ್. ಪ್ರವೀಣ್, ಉಪ ತಹಸೀಲ್ದಾರ್ ಮಂಜುನಾಥ ಸ್ವಾಮಿ, ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ತಿಮ್ಮಯ್ಯ ಮುಖಂಡರಾದ ರುದ್ರೇಗೌಡ, ದಾಸಯ್ಯನಗುತ್ತಿ ಚಂದ್ರಪ್ಪ, ತವರಾಜ್, ಕೆ.ಎಚ್. ಶಂಕರ್, ನಂದೀಶ್, ಹೊ.ರಾ. ಕೃಷ್ಣಮೂರ್ತಿ, ಶಶಿ, ರಾಜಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
27ಕೆಕೆಡಿಯು1,ಕಡೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 115ನೇ ಕೆಂಪೇಗೌಡರ ಜಯಂತಿಯನ್ನು ಶಾಸಕ ಕೆ.ಎಸ್ ಆನಂದ್ ಉದ್ಘಾಟಿಸಿದರು.