ಸಾರಾಂಶ
ಪ್ರತಿಯೊಂದು ಕಾಮಗಾರಿಗೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯವಾಗಿದೆ. ಸಹಕಾರ ಇದ್ದಾಗ ಮಾತ್ರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಯರಗಟ್ಟಿಪ್ರತಿಯೊಂದು ಕಾಮಗಾರಿಗೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯವಾಗಿದೆ. ಸಹಕಾರ ಇದ್ದಾಗ ಮಾತ್ರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮೀಪದ ಜೀವಾಪೂರ ಗ್ರಾಮದಿಂದ ತೋರಣಗಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ₹2 ಕೋಟಿ ವೆಚ್ಚದಲ್ಲಿ ಕೈಗೊಂಡ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುತ್ತಿಗೆದಾರರು ಸರಿಯಾದ ವೇಳೆಗೆ ಗುಣಮಟ್ಟದ ಕೆಲಸ ಮಾಡಬೇಕು ಎಂದರು.ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸವದತ್ತಿ ಮತಕ್ಷೇತ್ರದ ಪ್ರತಿ ಗ್ರಾಮವು ಅಭಿವೃದ್ಧಿ ಹೊಂದಬೇಕು. ಮೂಲ ಸಮಸ್ಯೆಗಳು ನಿವಾರಣೆಯಾಗಬೇಕು. ಇದಕ್ಕಾಗಿ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇನೆ ಎಂದು ಹೇಳಿದರು.
ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದಬಸನ್ನವರ, ಮಬನೂರ ಜಿಪಂ ಮಾಜಿ ಸದಸ್ಯ ಪಕ್ಕೀರಪ್ಪ ಹದ್ದನ್ನವರ, ಮುಖಂಡ ವೆಂಕಪ್ಪ ಕಮಕೇರಿ, ಪಿಡಿಒ ಎಚ್.ಕೆ.ಚೌರಡ್ಡಿ, ವೆಂಕಪ್ಪ ಯರಡ್ಡಿ, ಕಲ್ಮೇಶ ಬಾಲರಡ್ಡಿ, ಜಗದೀಶ ಹೊಸಮಠ, ಮುತ್ತನಗೌಡ ನಾಯ್ಕರ, ಬಸವರಾಜ ತಳವಾರ, ವೀರಪ್ಪ ಬೆನಕಟ್ಟಿ, ಶಶಿಧರ ತಳವಾರ, ಮಹಾಂತೇಶ ಉಪ್ಪಿನ, ಶಿವಾನಂದ ಮಲಕನ್ನವರ, ಬಸು ಅರಳಿಕಟ್ಟಿ, ಸಚಿನ ಅಳಗುಡಿ, ಶಾಸಪ್ಪ ಗೋಪಾಳಿ, ವೀರಬದ್ರಪ್ಪ ನರಿ, ಶೇಟ್ಟೆಪ್ಪ ಮಾದರ, ಹನಮಂತ ತಳವಾರ, ಪಂಚಪ್ಪ ಶಿವಪೂಜಿ, ಸುರೇಶ ಅರಳಿಕಟ್ಟಿ ಸೇರಿದಂತೆ ಕಾರ್ಯಕರ್ತರು ಮುಖಂಡರು ಇದ್ದರು.