ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ ಜನಸೇವೆ ಮತ್ತು ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದು, ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ಅನೇಕ ಮಹನೀಯರ ಶ್ರಮದಿಂದ ಇಂದು ಕೋಟ್ಯಂತರ ರೂಪಾಯಿಗಳ ದುಡಿವ ಬಂಡವಾಳ ಹೊಂದಿದೆ. ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದು ಅಥಣಿ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಭಸ್ಮೆ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಜನಸೇವೆ ಮತ್ತು ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದು, ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ಅನೇಕ ಮಹನೀಯರ ಶ್ರಮದಿಂದ ಇಂದು ಕೋಟ್ಯಂತರ ರೂಪಾಯಿಗಳ ದುಡಿವ ಬಂಡವಾಳ ಹೊಂದಿದೆ. ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದು ಅಥಣಿ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಭಸ್ಮೆ ಹೇಳಿದರು.ಪಟ್ಟಣದ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ 39ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ನಮ್ಮ ಸಂಘವು 38 ವರ್ಷಗಳಲ್ಲಿ ಸುಮಾರು ₹ 11 ಕೋಟಿ ಬಂಡವಾಳ ಹೊಂದಿದ್ದು, ಸದಸ್ಯರ ಅವಶ್ಯಕತೆಗಳಾದ ಸ್ಥಿರಾಸ್ತಿ ಖರೀದಿ, ನೌಕರರ ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ₹ 17 ಲಕ್ಷ ವರೆಗೆ ಸಾಲ ಒದಗಿಸಲಾಗಿದೆ. ಅಲ್ಲದೆ ಅಥಣಿ, ಕಾಗವಾಡ ತಾಲೂಕು ವ್ಯಾಪ್ತಿಯನ್ನು ಒಳಗೊಂಡು ಠೇವಣಿದಾರರಿಗೆ ಭದ್ರತೆ ಒದಗಿಸಿದ್ಧಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸಹಕಾರಿ ಸಂಘದ ವ್ಯವಸ್ಥಾಪಕ ಜಿ.ಎಸ್.ತೊಡಕರ ವರದಿ ವಾಚನ ಮಂಡಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಐ.ಪರನಾಕರ, ನಿರ್ದೇಶಕ ಮೋಹನ ದೇವಮಾನಿ, ಎಸ್.ಎಂ.ಪಾಲಭಾವಿ ಸೇರಿ ಆಡಳಿತ ಮಂಡಳಿ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))