ಸಾರಾಂಶ
ಎಸ್ಐಟಿ ರಚನೆ ಮಾಡಿದಾಗ ಇವರೇ ಸ್ವಾಗತ ಮಾಡಿದ್ದರು. ಧರ್ಮಸ್ಥಳದ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಎಸ್ಐಟಿ ಮಾಡಲಾಯಿತು. ಆಗ ಸ್ವಾಗತ ಮಾಡಿದ ನಾಯಕರು ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ವಿಜಯಪುರ : ಎಸ್ಐಟಿ ರಚನೆ ಮಾಡಿದಾಗ ಇವರೇ ಸ್ವಾಗತ ಮಾಡಿದ್ದರು. ಧರ್ಮಸ್ಥಳದ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂದು ಎಸ್ಐಟಿ ಮಾಡಲಾಯಿತು. ಆಗ ಸ್ವಾಗತ ಮಾಡಿದ ನಾಯಕರು ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ರಾಜಕೀಯಕ್ಕಾಗಿ ಧರ್ಮಸ್ಥಳ ಚಲೋ ಮಾಡುತ್ತಿದ್ದಾರೆ. ಬಿಜೆಪಿಯವರು ಮೊದಲು ತಮ್ಮಲ್ಲಿರುವುದನ್ನು ಸರಿ ಮಾಡಿಕೊಳ್ಳಲಿ. ಬಿಜೆಪಿಯಲ್ಲೇ ಹತ್ತಾರು ಬಣಗಳಿವೆ, ಅದನ್ನು ನೋಡಲಿ ಎಂದು ಸಲಹೆ ನೀಡಿದರು.
ಭಾನು ಮುಷ್ಕಾಕ್ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದನ್ನು ಸಮರ್ಥಿಸಿಕೊಂಡ ಸಚಿವರು, ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಭಾನು ಮುಸ್ತಾಕ್ ಹೇಳಿದ್ದಾರೆ. ಅವರೇ ಚಾಮುಂಡಿಯನ್ನು ತಾಯಿ ಎಂದಿದ್ದಾರೆ, ಇದಕ್ಕಿಂತ ಬೇರೆ ಇನ್ನೇನಿದೆ. ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸರ್ಕಾರಿ ಮೆಡಿಕಲ್ ಕಾಲೇಜು ತರಲು ಜಿಲ್ಲೆಯ ಸಚಿವರು ಸಾಥ್ ನೀಡುತ್ತಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಚಿವರಿಗೆ ಮೆಡಿಕಲ್ ಕಾಲೇಜು ವಿಚಾರದಲ್ಲಿ ಅಸಮಾಧಾನವಿದ್ದರೆ ಸಿಎಂ ಬಳಿ, ಡಿಸಿಎಂ ಬಳಿ ಮಾತನಾಡಬೇಕಿತ್ತು. ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಬಾರದು. ನಾನು ನೀರಾವರಿ ಸಚಿವನಾಗಿದ್ದಾಗ ಯಾರು ಸಹಕಾರ ನೀಡಿದ್ದಾರೆ ಎಂಬುದು ಗೊತ್ತಿದೆ. ಅದೆಲ್ಲ ಹೇಳುತ್ತಾ ಹೋದರೆ ಬಳಹ ಇದೆ ಎಂದು ಪರೋಕ್ಷವಾಗಿ ಸಚಿವ ಶಿವಾನಂದ ಪಾಟೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.