ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ

| Published : Sep 26 2025, 01:00 AM IST

ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಸಾಲ ಪಡೆದ ರೈತರು ಸಕಾಲದಲ್ಲಿ ಮರುಪಾವತಿಸಬೇಕು. ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ ಎಂದು ಮರಿಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಜಿ ಕಾಂತರಾಜು ಹೇಳಿದರು.

ಕುದೂರು: ಸಾಲ ಪಡೆದ ರೈತರು ಸಕಾಲದಲ್ಲಿ ಮರುಪಾವತಿಸಬೇಕು. ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ ಎಂದು ಮರಿಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಜಿ ಕಾಂತರಾಜು ಹೇಳಿದರು.

ಮಾಗಡಿ ತಾಲೂಕು ಸೋಲೂರು ಹೋಬಳಿಯ ಮರಿಕುಪ್ಪೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024-25ನೇ ಸಾಲಿನ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಹಕಾರ ಸಂಘಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬ್ಯಾಂಕುಗಳು ಪೈಪೋಟಿ ನೀಡುತ್ತಿವೆ. ಆದರೂ ಸಹಕಾರ ಸಂಘಗಳನ್ನು ಹಿಂದಕ್ಕೆ ಹಾಕಲು ಸಾಧ್ಯವಾಗುತ್ತಿಲ್ಲ. ಸಹಕಾರ ಸಂಘಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದರಿಂದ ಸಹಕಾರ ಕ್ಷೇತ್ರದಲ್ಲಿನ ಸೇವೆಗಳು ಗಣನೀಯ ಬೆಳೆಯುತ್ತಿವೆ. ಸಹಕಾರ ಸಂಘಗಳ ಪ್ರತಿನಿಧಿಗಳು ವೃತ್ತಿಪರತೆ, ಶಿಸ್ತು ಹಾಗೂ ಬದ್ಧತೆ ಮೈಗೂಡಿಸಿಕೊಳ್ಳಬೇಕು ಎಂದರು.

ಸಂಘದ ಸಿಇಒ ಅಶ್ವಥ್ ಮಾತನಾಡಿ, ಸಂಘದಲ್ಲಿ 1050 ಸದಸ್ಯರಿದ್ದು, 04.5 ಕೋಟಿ ರು. ರೈತರಿಗೆ ಕೆಸಿಸಿ, ಸ್ತ್ರೀ ಶಕ್ತಿ ಸಂಘಗಳಿಗೆ 11 ಲಕ್ಷ ಸಾಲ ನೀಡಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಂಗನಾಥ್, ನಿರ್ದೇಶಕರಾದ ಎಂ.ಜಿ.ಪರಮೇಶ್, ಚಿಕ್ಕಣ್ಣ, ಹನಮೇಗೌಡ, ಗಂಗಬೈಲ್ಲಪ್ಪ, ಈರೇಗೌಡ, ನಾರಾಯಣಪ್ಪ, ಗೋಪಾಲ್, ದೊಡ್ಡಹನುಮಯ್ಯ, ಸುಜಾತ ಶ್ರೀನಿವಾಸ್, ಜಾನಕಮ್ಮ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಗೌತಮ್, ಸಿಬ್ಬಂದಿ ವರಮಹಾಲಕ್ಷ್ಮಿ ಹಾಜರಿದ್ದರು.

24ಕೆಆರ್ ಎಂಎನ್ 7.ಜೆಪಿಜಿ

ಸೋಲೂರು ಹೋಬಳಿಯ ಮರಿಕುಪ್ಪೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024-25ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಜಿ.ಕಾಂತರಾಜು ಮಾತನಾಡಿದರು.