ಭಾರತದಲ್ಲಿ ಸಹಕಾರ ಚಳವಳಿಗೆ ಸುದೀರ್ಘ ಇತಿಹಾಸವಿದ್ದು, ಗ್ರಾಮೀಣ ಆರ್ಥಿಕ ಪ್ರಗತಿಯಲ್ಲಿ ಅವುಗಳ ಪಾತ್ರ ಗಣನೀಯವಾದುದು ಎಂದು ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು.

ಹಾನಗಲ್ಲ: ಭಾರತದಲ್ಲಿ ಸಹಕಾರ ಚಳವಳಿಗೆ ಸುದೀರ್ಘ ಇತಿಹಾಸವಿದ್ದು, ಗ್ರಾಮೀಣ ಆರ್ಥಿಕ ಪ್ರಗತಿಯಲ್ಲಿ ಅವುಗಳ ಪಾತ್ರ ಗಣನೀಯವಾದುದು ಎಂದು ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾನಗಲ್ಲ ತಾಲೂಕಿನ ಶಿರಗೋಡ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಕಾಂಗ್ರೆಸ್ ಬೆಂಬಲಿತ ನೂತನ ಅಧ್ಯಕ್ಷ ಬಸವರಾಜ ಹುರಳೀಕುಪ್ಪಿ, ಉಪಾಧ್ಯಕ್ಷೆ ಗುಲ್ಜಾರಬೇಗಂ ಕೂಸನೂರ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಭಾರತದಲ್ಲಿ ಸಹಕಾರ ಚಳವಳಿಗೆ ದೀರ್ಘ ಇತಿಹಾಸವಿದೆ. ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ಸಂಘಗಳು ಪ್ರಮುಖ ಪಾತ್ರ ವಹಿಸಿವೆ. ಪ್ರಮುಖವಾಗಿ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳಿಗೆ ಇವು ಆಸರೆಯಾಗಿವೆ. ಇಂಥ ಸಂಘಗಳನ್ನು ಉಳಿಸಿ, ಬೆಳೆಸುವ ಮಹತ್ವದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಈ ಸಂದರ್ಭದಲ್ಲಿ ಶಾಸಕ ಮಾನೆ ಹೇಳಿದರು.

ಹಾನಗಲ್ಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ, ಸಂಘದ ನೂತನ ನಿರ್ದೇಶಕರಾದ ಗಣೇಶಪ್ಪ ಲಾಂಡಗೇರ, ಯಮುನಪ್ಪ ಲಮಾಣಿ, ರಾಮನಗೌಡ ಬಸನಗೌಡ್ರ, ಶಿವಮೂರ್ತೆಪ್ಪ, ನಿಂಗಪ್ಪ ಕೊಪ್ಪರಸಿಕೊಪ್ಪ, ಶಿವಪುತ್ರಪ್ಪ ಶಕನವಳ್ಳಿ, ಗಿರೀಶಗೌಡ ಪಾಟೀಲ, ಶಿವಣ್ಣ ಚೌಟಿ, ಮುಖಂಡರಾದ ಇಕ್ಬಾಲ್‌ಸಾಬ ಮುಲ್ಲಾ, ಬಷೀರ್‌ಅಹ್ಮದ್ ನಾಲಬಂದ, ಜಮೀರ್ ಹುಣಸಿ, ಖಾಜಾ ಬನವಾಸಿ, ಸಂದೀಪ ಪಾಟೀಲ, ಜಿಕ್ರಿಯಾ ಗೊಂದಿ, ಶಫಿ ಹಂಚಿನಮನಿ, ಎಂ.ಕೆ. ಪಾಟೀಲ, ನಾಗರಾಜ ಬಕ್ಕಣ್ಣನವರ, ಮಂಜನಗೌಡ ಪಾಟೀಲ, ಪ್ರಭು ಬಿದರಕೊಪ್ಪ, ರಾಮಣ್ಣ ಪೂಜಾರ, ಹನುಮಂತಪ್ಪ ತಳವಾರ ಇದ್ದರು.