ನಾಳೆಗೆ............ಕೂಲಿ ಕಾರ್ಮಿಕರಿಗೆ ಕೂಸಿನ ಮನೆ ಸಹಕಾರಿ: ಶಾಸಕ ಶರತ್ ಬಚ್ಚೇಗೌಡ

| Published : Aug 15 2024, 01:56 AM IST

ನಾಳೆಗೆ............ಕೂಲಿ ಕಾರ್ಮಿಕರಿಗೆ ಕೂಸಿನ ಮನೆ ಸಹಕಾರಿ: ಶಾಸಕ ಶರತ್ ಬಚ್ಚೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದುಡಿಯುವ, ಕೂಲಿ ಕಾರ್ಮಿಕ ವರ್ಗಕ್ಕೆ ಕೂಸಿನ ಮನೆ ಸಹಕಾರಿಯಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಹೊಸಕೋಟೆಯಲ್ಲಿ ನೂತನ ಕೂಸುಮನೆ ಕೇಂದ್ರವನ್ನು ಉದ್ಗಾಟಿಸಿ ಮಾತನಾಡಿದರು.

-ತಾಲೂಕಿನ ನಕ್ಕನಹಳ್ಳಿಯಲ್ಲಿ ಪ್ರಥಮ ಕೂಸಿನ ಮನೆ ಉದ್ಘಾಟನೆ ಕನ್ನಡಪ್ರಭವಾರ್ತೆ ಹೊಸಕೋಟೆ

ದುಡಿಯುವ, ಕೂಲಿ ಕಾರ್ಮಿಕ ವರ್ಗಕ್ಕೆ ಕೂಸಿನ ಮನೆ ಸಹಕಾರಿಯಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ತಾಲೂಕಿನ ಮುಗಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಕ್ಕನಹಳ್ಳಿ ಗ್ರಾಮದಲ್ಲಿ ನರೇಗಾ ಉಳಿಕೆ ಹಣದಲ್ಲಿ ನೂತನ ಕೂಸುಮನೆ ಕೇಂದ್ರವನ್ನು ಉದ್ಗಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಮೊಟ್ಟ ಮೊದಲ ಕೂಸಿನ ಮನೆಯನ್ನು ನಕ್ಕನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದ್ದು, 6 ತಿಂಗಳ ಮಗುವಿನಿಂದ 3 ವರ್ಷದ ಮಕ್ಕಳನ್ನು ಈ ಕೂಸುಮನೆ ಕೇಂದ್ರದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಪೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೂಸ ಮನೆ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ನಮ್ಮ ತಾಲೂಕಿಗೂ ಇದರ ಅವಶ್ಯಕತೆ ಇರುವ ಕಾರಣ ಈ ಭಾಗದಲ್ಲಿ ಸ್ಥಾಪನೆ ಮಾಡಲಾಗಿದೆ. ಈ ಕೇಂದ್ರ ಸ್ಥಾಪನೆಯಿಂದ ಈ ಭಾಗದ ದುಡಿಯುವ ವರ್ಗದವರಿಗೆ ಅನುಕೂಲವಾಗಲಿದೆ. ಇದಕ್ಕೂ ಮೊದಲು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ದೃಷ್ಟಿಯಿಂದ ಮನೆಯಲ್ಲಿ ಬಿಟ್ಟು ಕೆಲಸಗಳಿಗೆ ಹೋಗುತ್ತಿರಲಿಲ್ಲ. ಆದರೆ ಈಗ ಕೂಸಿನ ಮನೆ ಕೇಂದ್ರ ಸ್ಥಾಪನೆಯಿಂದ ನಿರ್ಭೀತಿಯಿಂದ ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ತಮ್ಮ ಕೆಲಸಗಳಿಗೆ ಹೋಗಬಹುದಾಗಿದೆ. ಅದೇ ರೀತಿ ಈ ಪ್ರಯೋಜನವನ್ನು ರೈತರೂ ಸಹ ಪಡೆಯಬಹುದಾಗಿದ್ದು, ನುರಿತ ಮುಖ್ಯಸ್ಥರನ್ನು ಈ ಕೇಂದ್ರಕ್ಕೆ ನೇಮಕ ಮಾಡಲಾಗಿದೆ ಎಂದರು.

ಈ ಸಂಧರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಬಮುಲ್ ನಿರ್ದೇಶಕ ಎಲ್‌ಅಂಡ್ ಟಿ.ಮಂಜುನಾಥ್, ಗ್ರಾಪಂ ಸದಸ್ಯೆ ಮಂಜುಳ ವೈಕೆ, ಪಿಡಿಓ ಲೋಕೇಶ್, ಕಾರ್ಯದರ್ಶಿ ಮೆಹಬೂಬ್, ಮುಖಂಡರಾದ ಪ್ರವೀಣ್ ಹಳ್ಳಿಗೌಡ, ಗುರುಬಸಪ್ಪ, ನಂಜಪ್ಪ ಇತರರಿದ್ದರು.