ಸಾರಾಂಶ
ಮಾಗಡಿ: ಸಹಕಾರ ಸಂಘಗಳು ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎಂ.ಕೆ. ಧನಂಜಯ್ಯ ಹೇಳಿದರು.
ಮಾಗಡಿ: ಸಹಕಾರ ಸಂಘಗಳು ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಎಂ.ಕೆ. ಧನಂಜಯ್ಯ ಹೇಳಿದರು.
ತಾಲೂಕಿನ ಕಲ್ಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಬ್ಯಾಂಕ್ 2024- 25ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಸಹಕಾರ ಸಂಗಮ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 16 79 ಲಕ್ಷ ನಿವಳ ಲಾಭ ಗಳಿಸಿದೆ. ಇದಕ್ಕೆ ಆಡಳಿತ ಮಂಡಳಿ, ಸಂಘದ ಸದಸ್ಯರು, ನಿರ್ದೇಶಕರು ಸಹಕಾರವೇ ಮುಖ್ಯ ಕಾರಣ. ರೈತರಿಗೆ ಬೆಳೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ನೀಡುವ ಮೂಲಕ ರೈತರ ಪರವಾಗಿ ಸಹಕಾರ ಸಂಘ ನಿಂತಿದೆ ಎಂದರು.ಸಂಘದ ಅಧ್ಯಕ್ಷ ಕೆ.ಹನುಮಂತಗೌಡ ಮಾತನಾಡಿ, ಕಲ್ಯ ಸಹಕಾರ ಸಂಘ ರೈತರಿಗೆ ಕೆಸಿಸಿ ಬೆಳೆ ಸಾಲ 10.88 ಕೋಟಿ, ಸ್ವಸಹಾಯ ಸಂಘಗಳಿಗೆ 50.32 ಲಕ್ಷ, ಚಿನಾಭರಣ ಸಾಲ 1.05 ಕೋಟಿ ಸಾಲ ವಿತರಿಸಿದೆ ಎಂದರು. ಸಂಘದ ಸದಸ್ಯರಿಗೆ ಸಹಕಾರ ಸಂಘದಿಂದ ಹಾಲಿನ ಕ್ಯಾನ್ ವಿತರಿಸಲಾಯಿತು. ಈ ವೇಳೆ ಸಂಘದ ನಿರ್ದೇಶಕರಾದ ಎಚ್.ಸಿ.ಪುಟ್ಟಹೊನ್ನಯ್ಯ, ನಾರಾಯಣಪ್ಪ, ಚಿಕ್ಕೇಗೌಡ, ಕೆ.ಎನ್.ವಿಶ್ವನಾಥ್, ಎಚ್.ಜೆ. ನೀಲಾಂಬಿಕೆ, ಚಿಕ್ಕಣ್ಣ, ಎಚ್.ಆರ್.ಗಂಗಾಧರಯ್ಯ, ಶಾರದಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿ, ಮುಖಂಡರಾದ ಜಯಶಂಕರ್, ಮಲ್ಲಿಕಾರ್ಜುನ್, ಕುಮಾರ್, ಶಶಿಧರ್, ಕಲ್ಯ ಗುರು, ಶಿಕ್ಷಕ ಮಂಜುನಾಥ್ ಇತರರಿದ್ದರು.