ಸಹಕಾರ ಸಂಘಗಳು ಬಲಿಷ್ಠವಾಗಲು ಸದಸ್ಯರ ಸಹಕಾರ ಅಗತ್ಯ

| Published : Sep 26 2025, 01:00 AM IST

ಸಹಕಾರ ಸಂಘಗಳು ಬಲಿಷ್ಠವಾಗಲು ಸದಸ್ಯರ ಸಹಕಾರ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರಿ ಸಂಘದ ಬೆಳವಣಿಗೆಗೆ ಸರ್ವ ಸದಸ್ಯರ ಸಹಕಾರ ಬಹುಮುಖ್ಯವಾಗಿದ್ದು, ಸಂಘವು ಸಾಮಾನ್ಯವರ್ಗದ ಆರ್ಥಿಕ ಸೇವಾ ಮನೋಭಾವನೆಯನ್ನಿಟ್ಟುಕೊಂಡು ಬೆಳೆಯುತ್ತಿದ್ದು ಸಹಕಾರ ಪಡೆದವರು ಅಭಿವೃದ್ದಿಪಥದತ್ತ ಹೆಜ್ಜೆ ಹಾಕಿದ್ದು ಇದು ಸಂಘದ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದು ಶ್ರೀ ವಿನಾಯಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಆರ್. ಅರುಣ್‌ಕುಮಾರ್ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಸಹಕಾರಿ ಸಂಘದ ಬೆಳವಣಿಗೆಗೆ ಸರ್ವ ಸದಸ್ಯರ ಸಹಕಾರ ಬಹುಮುಖ್ಯವಾಗಿದ್ದು, ಸಂಘವು ಸಾಮಾನ್ಯವರ್ಗದ ಆರ್ಥಿಕ ಸೇವಾ ಮನೋಭಾವನೆಯನ್ನಿಟ್ಟುಕೊಂಡು ಬೆಳೆಯುತ್ತಿದ್ದು ಸಹಕಾರ ಪಡೆದವರು ಅಭಿವೃದ್ದಿಪಥದತ್ತ ಹೆಜ್ಜೆ ಹಾಕಿದ್ದು ಇದು ಸಂಘದ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದು ಶ್ರೀ ವಿನಾಯಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಆರ್. ಅರುಣ್‌ಕುಮಾರ್ ತಿಳಿಸಿದರು. ನಗರದ ಪೇಟೆ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರೀ ವಿನಾಯಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಹಕಾರಿಯು ಕಳೆದ 60 ವರ್ಷಗಳಿಂದಲೂ ಸಾರ್ವಜನಿಕರ, ಸದಸ್ಯರ ಸುಧೀರ್ಘ ಸೇವೆ ಸಲ್ಲಿಸುತ್ತಾ ಬಂದಿದೆ. ಸಂಘವು ಪ್ರಸ್ತುತ ಸಾಲಿನಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡೆಸಿ ೩ಲಕ್ಷದ ೩೨ಸಾವಿರ ಲಾಭಗಳಿಸಿದೆ. ಪ್ರತಿವರ್ಷವೂ ಸದಸ್ಯರಿಗೆ ಡಿವಿಡೆಂಟ್ ನೀಡುತ್ತಾ ಬಂದಿದ್ದು, ಶೇ.೧೫ರಷ್ಟು ಡೆವಿಡೆಂಟ್ ನೀಡುತ್ತಿದೆ. ನಮ್ಮ ಸಂಘವು ಪ್ರತಿಷ್ಠಿತ ಟೈಟಾನ್, ಸೊನಾಟ, ಫಾಸ್ಟ್ರಾಕ್ ಮತ್ತು ಟೈಮೆಕ್ಸ್ ಕಂಪನಿಯ ಕೈ ಗಡಿಯಾರಗಳನ್ನು ಮಾರಾಟ ಮಾಡುತ್ತಾ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಸಹಕಾರಿಯ ಅಭಿವೃದ್ದಿಗೆ ಶ್ರಮಿಸುತ್ತಿರುವ ಆಡಳಿತ ಮಂಡಳಿಗೆ, ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ ಅವರು ಸಾಲ ಸೌಲಭ್ಯ ನೀಡುವ ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ, ಮತ್ತಿತರ ಸಾಮಾಜಿಕ ಕಾಳಜಿಯುಳ್ಳ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮುಂದೆಯೂ ಸಹ ಸಂಘವು ಸೇವಾ ಮನೋಭಾವವಿಟ್ಟುಕೊಂಡು ಕೆಲಸ ಮಾಡಲಿದೆ ಎಂದರು. ಈ ಸಂದರ್ಭದಲ್ಲಿ ಸಹಕಾರಿಯ ಪ್ರಭಾರ ಕಾರ್ಯದರ್ಶಿ ಟಿ.ಎಸ್. ನವೀನ್ ವಾರ್ಷಿಕ ವರದಿ ಓದಿದರು. ಸಂಘದಲ್ಲಿ ಕಳೆದ ೬೦ವರ್ಷಗಳಿಂದಲೂ ಕಾರ್ಯದರ್ಶಿಯಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಸಂಘದ ಕಾರ್ಯದರ್ಶಿ ದಕ್ಷಿಣಮೂರ್ತಿರವರನ್ನು ಸಂಘದಿಂದ ಗೌರವಿಸಲಾಯಿತು. ಸಭೆಯಲ್ಲಿ ಶ್ರೀ ವಿನಾಯಕ ಸಹಕಾರಿಯ ಉಪಾಧ್ಯಕ್ಷ ಪಿ.ವಿ.ವಿಶಾಲ್, ನಿರ್ದೇಶಕರುಗಳಾದ ಜಿ.ಎನ್. ಅನೂಪ್‌ಭೂಷಣ್, ಬಿ.ಸಿ.ರವಿಶಂಕರ್, ವರುಣ್‌ಮಲ್ಲಿಕಾರ್ಜುನ್, ಬಿ.ಎನ್. ಅಜಯ್, ಟಿ.ಎಸ್. ಜ್ಯೋತಿಪ್ರಕಾಶ್, ದೀಪ್ತಿ ಅಮಿತ್, ಎ.ಎಸ್. ಸ್ವರ್ಣಲತಾ ಮತ್ತಿತರರಿದ್ದರು.