ಆರ್ಥಿಕ ಸಬಲೀಕರಣಕ್ಕೆ ಸಹಕಾರಿಗಳ ಯತ್ನ

| Published : Aug 25 2024, 01:57 AM IST / Updated: Aug 25 2024, 01:58 AM IST

ಸಾರಾಂಶ

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ ಸಮಾಜದಲ್ಲಿನ ನೇಕಾರ-ಕಾರ್ಮಿಕ ಸೇರಿ ಸಂಕಷ್ಟದಲ್ಲಿರುವ ಕಟ್ಟಕಡೆಯ ಶ್ರಮಿಕ ವ್ಯಕ್ತಿಯ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರವು ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಬಡತನದ ಭೂತವನ್ನು ಸಮಾಜ ಮತ್ತು ದೇಶದಿಂದ ಶಾಶ್ವತವಾಗಿ ಓಡಿಸಿ ಬಲಾಢ್ಯ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಉದ್ಯಮಿ ರಾಜು ಭದ್ರನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಸಮಾಜದಲ್ಲಿನ ನೇಕಾರ-ಕಾರ್ಮಿಕ ಸೇರಿ ಸಂಕಷ್ಟದಲ್ಲಿರುವ ಕಟ್ಟಕಡೆಯ ಶ್ರಮಿಕ ವ್ಯಕ್ತಿಯ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರವು ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಬಡತನದ ಭೂತವನ್ನು ಸಮಾಜ ಮತ್ತು ದೇಶದಿಂದ ಶಾಶ್ವತವಾಗಿ ಓಡಿಸಿ ಬಲಾಢ್ಯ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಉದ್ಯಮಿ ರಾಜು ಭದ್ರನ್ನವರ ಹೇಳಿದರು.ಬನಹಟ್ಟಿಯ ಕಾಡಸಿದ್ಧೇಶ್ವರ ಸಮುದಾಯ ಭವನದಲ್ಲಿ ನಡೆದ ಸರ್ವಸಾಧಾರಣ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಏಳ್ಗೆಗೆ ಸದಾ ಹಾತೊರೆಯುವ ಸಂಘಗಳಾಗಬೇಕು. ಸಂಘದ ಅಭಿವೃದ್ಧಿಯ ಜೊತೆಗೆ ಸಮಾಜವನ್ನೂ ಅಭಿವೃದ್ಧಿಗೊಳಿಸುವ ಮೂಲಕ ಜನರ ಆರ್ಥಿಕ ಸಬಲೀಕರಣಕ್ಕೆ ಮುಂದಾಗಬೇಕಿದ್ದು, ಸಹಕಾರಿ ಕ್ಷೇತ್ರದ ಮೊದಲ ಆದ್ಯತೆಯಾಗಿದೆ ಎಂದರು.ಸಂಘದ ಅಧ್ಯಕ್ಷ ಶಂಕ್ರಯ್ಯ ಕಾಡದೇವರ ಮಾತನಾಡಿ, ಸಂಘದ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಪಡಿಸಿದಾಗ ಮಾತ್ರ ಸಹಕಾರಿ ಕ್ಷೇತ್ರ ಬಲಿಷ್ಠವಾಗಲು ಸಾಧ್ಯ. ಯಾರ ಸ್ವಹಿತಕ್ಕಾಗಿ ಮಣೆ ಹಾಕದೆ ನಿಯಮಾನುಸಾರ ಸಂಘಗಳ ಬೆಳವಣಿಗೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಬಾಣಕಾರ, ಬ್ರಿಜ್‌ಮೋಹನ ಡಾಗಾ, ಕುಮಾರ ಕದಂ, ಮಲ್ಲಿಕಾರ್ಜುನ ತುಂಗಳ, ಪ್ರಶಾಂತ ಕೊಳಕಿ, ಮಹಾದೇವ ಬಾಣಕಾರ, ಈರಪ್ಪ ಬರಗಲ, ಉಪಾಧ್ಯಕ್ಷೆ ಮಂಜುಳಾ ರಮೇಶ ಮಂಡಿ, ಶಂಕರ ಕೆಸರಗೊಪ್ಪ, ಚನಮಲ್ಲಪ್ಪ ಬೀಳಗಿ, ಶಶಿಧರ ಬೀಳಗಿ, ಶೇಖರ ಹಕ್ಕಲದಡ್ಡಿ, ಮೋಹನ ಬೀಳಗಿ, ಆನಂದಯ್ಯ ರೇವಣಸಿದ್ದಯ್ಯಗೋಳ, ಅಶ್ವಿನಿ ಈಶ್ವರ ಅಂಬಲಿ, ರವಿಚಂದ್ರ ನಾಗರಾಳ, ಹೈದರಲಿ ಝಾರೆ, ಸಿದ್ದಪ್ಪ ದೊಡಮನಿ, ಆನಂದ ಹಲ್ಯಾಳ ಸೇರಿ ಅನೇಕರಿದ್ದರು.