ಸಾರಾಂಶ
ಹಾನಗಲ್ಲ:ಸದಸ್ಯರು ಮತ್ತು ಠೇವಣಿದಾರರಿಗೆ ಆಡಳಿತ ಮಂಡಳಿ ನಿಷ್ಠೆ ಹೊಂದಿದ್ದಾಗ ಮಾತ್ರ ಸೌಹಾರ್ದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ಅಭಿಪ್ರಾಯಪಟ್ಟರು.ಇಲ್ಲಿನ ಕುಮಾರೇಶ್ವರ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೌಹಾರ್ದ ಸಹಕಾರಿ ಕ್ಷೇತ್ರ ನಂಬಿಕೆಯನ್ನು ಬೇಡುತ್ತದೆ. ಜನರ ವಿಶ್ವಾಸಕ್ಕೆ ದ್ರೋಹ ಆಗದಂತೆ ಆಡಳಿತ ಮಂಡಳಿ ಬದ್ಧತೆ ತೋರಬೇಕು. ಛತ್ರಪತಿ ಶಿವಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಕೇವಲ 12 ವರ್ಷಗಳಲ್ಲಿ ಸ್ವಂತ ಕಟ್ಟಡ ಹೊಂದಿರುವುದು ಜನಮನ್ನಣೆಗೆ ಸಾಕ್ಷಿಯಾಗಿದೆ ಎಂದರು.ಸ್ವಾಯತ್ತತೆ, ಸ್ವಯಂ ನಿಯಂತ್ರಣದ ಧ್ಯೇಯದಿಂದ ಬೆಳೆದು ಬಂದಿರುವ ಸಹಕಾರಿ ಕ್ಷೇತ್ರಕ್ಕೆ ಈಗೀಗ ಹೊಸ ನೀತಿಗಳ ಅಳವಡಿಕೆಗಾಗಿ ತಿದ್ದುಪಡಿ ತರಲಾಗುತ್ತಿದೆ. ಹಲವು ಕಾಯ್ದೆಗಳ ತಿದ್ದುಪಡಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದೇವೆ. ಸಹಕಾರಿ ಕಾಯ್ದೆಗೆ ಕೆಲವೊಂದು ಸ್ವಾಗತಾರ್ಹ ವಿಚಾರಗಳು ಸೇರ್ಪಡೆಗೊಳ್ಳುತ್ತಿವೆ ಎಂದರು.ರಾಜ್ಯದಲ್ಲಿ 6600 ಸೌಹಾರ್ದ ಸಹಕಾರಿ ಸಂಸ್ಥೆಗಳು ನೊಂದಣಿಯಾಗಿವೆ. ಈ ಪೈಕಿ ಸುಮಾರು 5 ಸಾವಿರ ಸಂಸ್ಥೆಗಳು ಉತ್ತಮವಾಗಿ ಬೆಳೆದಿವೆ. ಸಹಕಾರಿ ಕ್ಷೇತ್ರವು ಸಾಮಾಜಿಕ ಬದ್ಧತೆಯಾಗಿದೆ. ಸೇವಾ ಮನೋಭಾವದ ಜನರಿಂದ ಸಹಕಾರಿ ಸಂಘಗಳ ಹುಟ್ಟು ಮತ್ತು ಬೆಳವಣಿಗೆ ಸಾಧ್ಯವಿದೆ ಎಂದರು.ಸಂಘದ ಸಂಸ್ಥಾಪಕ ಅಧ್ಯಕ್ಷ ರಾಜು ಗೌಳಿ ಮಾತನಾಡಿ, ಸಮಾನ ಮನಸ್ಕರು ಸೇರಿಕೊಂಡು ಕಟ್ಟಿದ ಸಂಘಕ್ಕೆ ಸ್ವಂತ ಕಟ್ಟಡದ ಕನಸು ಇಂದು ಈಡೇರಿದೆ. ನಮ್ಮ ಸಂಘದಿಂದ ಕೊಟ್ಟ ಸಾಲಕ್ಕೆ ಶೇ 90 ರಷ್ಟು ವಸೂಲಾತಿ ಸಾದ್ಯವಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡುವ ವ್ಯವಹಾರದಲ್ಲಿನ ನಂಬಿಕೆ ಸಹಕಾರಿ ಸಂಘದಲ್ಲಿ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಗ್ರಾಹಕರ ನಂಬಿಕೆ ಉಳಿಸಿಕೊಂಡು ಸಂಘ ಅಭಿವೃದ್ಧಿಯ ಹಾದಿಯಲ್ಲಿದೆ ಎಂದರು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಕೆ.ಶಿವಲಿಂಗಪ್ಪ, ಸಹಕಾರಿ ಕ್ಷೇತ್ರದ ಧುರೀಣರಾದ ಎ.ಎಸ್. ಬಳ್ಳಾರಿ, ಎಂ.ಬಿ. ಕಲಾಲ, ಬಿ.ಎಸ್. ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ, ಭೋಜರಾಜ ಕರೂದಿ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ ಇದ್ದರು.ಸಂಘದ ಉಪಾಧ್ಯಕ್ಷ ರಾಮಚಂದ್ರ ಬಮ್ಮನಹಳ್ಳಿ, ನಿರ್ದೇಶಕರಾದ ಗಣೇಶಪ್ಪ ಕೋಡಿಹಳ್ಳಿ, ಶೇಖರ ಜೀವಾಜಿ, ದೀಪಕ ಕಿತ್ತೂರ, ಅರುಣ ಕಿತ್ತೂರ, ಸಂತೋಷ ಟಿಕೋಜಿ, ವಸಂತ ಕಂಕಾಳೆ, ಲಕ್ಷ್ಮಿ ಬಂಕಾಪೂರ, ಆಶಾ ಗೌಳಿ, ಮಂಜುನಾಥ ಕೂಸನೂರ, ಸುನಿಲ ಅರ್ಕಸಾಲಿ, ಮಾರುತಿ ಕಂಚಿಗೊಲ್ಲರ ಇದ್ದರು.
;Resize=(128,128))
;Resize=(128,128))