ಫೈನಲ್ ಪ್ರವೇಶಿಸಿದ ಕೂರ್ಗ್ ಯುನೈಟೆಡ್

| Published : May 12 2024, 01:22 AM IST

ಸಾರಾಂಶ

ಕೂರ್ಗ್‌ ಯುನೈಟೆಡ್‌ ತಂಡ ಕೂರ್ಗ್‌ ಬ್ಲಾಸ್ಟರ್ಸ್‌ ವಿರುದ್ಧ 89 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಕೂರ್ಗ್‌ ಯುನೈಟೆಡ್‌ ಫೈನಲ್‌ ಪ್ರವೇಶಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಪಂದ್ಯಾವಳಿಯ ಶನಿವಾರದ ಮೊದಲ ಪಂದ್ಯದಲ್ಲಿ ಕೂರ್ಗ್ ಯುನೈಟೆಡ್ ತಂಡ ಕೂರ್ಗ್ ಬ್ಲಾಸ್ಟರ್ಸ್ ವಿರುದ್ಧ 89 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಕೂರ್ಗ್ ಯುನೈಟೆಡ್ ಫೈನಲ್ ಪ್ರವೇಶಿಸಿತು.

ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೂರ್ಗ್ ಯುನೈಟೆಡ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 12.3 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 90 ರನ್ ಗಳನ್ನಷ್ಟೇ ಗಳಿಸಿ ಸೋಲು ಒಪ್ಪಿಕೊಂಡಿತು.

ಕೂರ್ಗ್ ಯುನೈಟೆಡ್ ತಂಡದ ಅಯ್ಯಪ್ಪ ಸಿ.ಆರ್ 52 ಬಾಲ್ ಗಳಲ್ಲಿ ಭರ್ಜರಿ 93 ರನ್ ಗಳನ್ನು ದಾಖಲಿಸಿ, 12 ಬಾಲ್ ಗಳಲ್ಲಿ 4 ವಿಕೆಟ್ ಗಳನ್ನು ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಇಂದಿನ ಪಂದ್ಯ : ಮಳೆಯಿಂದಾಗಿ ರದ್ದಾದ ಕೊಡವ ಟ್ರೈಬ್ಸ್ ಮತ್ತು ಕೊಡವ ವಾರಿಯರ್ಸ್ ನಡುವಿನ ಪಂದ್ಯ ಮೇ 12 ರಂದು ಬೆಳಗ್ಗೆ 7.30 ಗಂಟೆಗೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಕೂರ್ಗ್ ಬ್ಲಾಸ್ಟರ್ಸ್ ಮತ್ತು ಕೂರ್ಗ್ ಎಲಿಮಿನೇಟರ್, ಮಧ್ಯಾಹ್ನ 12:30 ಗಂಟೆಗೆ ಫೈನಲ್ಸ್ :: ಕೂರ್ಗ್ ಯುನೈಟೆಡ್ ಮತ್ತು ವಿಜೇತ ತಂಡದೊಂದಿಗೆ.