ಕೋರ್ ಶಿಕ್ಷಕರ ಸಮಾಲೋಚನಾ ಸಭೆ, ಉಪನ್ಯಾಸ

| Published : Oct 27 2024, 02:30 AM IST / Updated: Oct 27 2024, 02:31 AM IST

ಸಾರಾಂಶ

ನಮ್ಮ ಸುತ್ತ ಮುತ್ತಲಿರುವ ಸಸ್ಯಗಳ ಪರಿಚಯ ಹಾಗೂ ಅವುಗಳಲ್ಲಿರುವ ಔಷಧೀಯ ಗುಣಗಳನ್ನು ತಿಳಿಸಿ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದು ಎಂದು ವೈದ್ಯ ಡಾ.ಟಿ.ಎನ್‌. ಅಂಚನ್‌ ಹೇಳಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಹಳೆಯಂಗಡಿಯ ನಾರಾಯಣ ಸನಿಲ್ ಸರ್ಕಾರಿ ಪದವಿಪೂರ್ವ ಕಾಲೇಜುನ ಪ್ರೌಢಶಾಲಾ ವಿಭಾಗದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ ಸ್ಪಾಯರ್‌ ನ ಪ್ರಾಯೋಜಕತ್ವದಲ್ಲಿ ಜರುಗಿದ ಮಂಗಳೂರು ಉತ್ತರ ವಲಯ ಪ್ರೌಢಶಾಲಾ ಕೋರ್ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಪಡುಬಿದ್ರೆ ಅಂಚನ್ ಕ್ಲಿನಿಕ್ ನ ವೈದ್ಯ ಡಾ. ಎನ್.ಟಿ. ಅಂಚನ್‌ ರವರು “ನಮ್ಮೂರ ಸಸ್ಯಗಳು ನಮಗಾಗಿ ‘ ವಿಷಯದ ಕುರಿತು ಉಪನ್ಯಾಸ ನೀಡಿದರು.

ನಮ್ಮ ಸುತ್ತ ಮುತ್ತಲಿರುವ ಸಸ್ಯಗಳ ಪರಿಚಯ ಹಾಗೂ ಅವುಗಳಲ್ಲಿರುವ ಔಷಧೀಯ ಗುಣಗಳನ್ನು ತಿಳಿಸಿ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದು ಹೇಳಿದರು.

ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಮುಖ್ಯ ಶಿಕ್ಷಕ ಮೈಕಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ ಸ್ಪಾಯರ್‌ ನ ಅಧ್ಯಕ್ಷ ಕೆ .ಶಿವಪ್ರಸಾದ್, ಪ್ರಾಂತ್ಯಾಧ್ಯಕ್ಷ ವೆಂಕಟೇಶ ಹೆಬ್ಬಾರ್, ಲಯನ್ಸ್‌ ಕ್ಲಬ್ ಕರ್ನಿರೆ- ಬಲಕುಂಜೆಯ ಕಾರ್ಯದರ್ಶಿ ಸತೀಶ್ , ಬಿ ಆರ್ .ಪಿ ರೋಸ್ ಲೀನ್ ಲೋಬೋ ಹಾಗೂ ಸಂಪನ್ಮೂಲ ಶಿಕ್ಷಕರು, ಭಾಸ್ಕರ್ ಕಾಂಚನ್, ಕಾರ್ಯದರ್ಶಿ ಪ್ರತಿಬಾ ಹೆಬ್ಬಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಮೈಕಲ್‌ ಸ್ವಾಗತಿಸಿದರು. ಸಹ ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೂಲಿಯೆಟ್ ವಂದಿಸಿದರು.