ಜಮೀನು ವಿವಾದಕ್ಕೆ ಜೋಳದ ಬೆಳೆ ನಾಶ

| Published : Aug 15 2024, 02:03 AM IST

ಸಾರಾಂಶ

ಜಮೀನಿನ ಆಸುಪಾಸಿನ ಜಮೀನಿನವರಿಗೆ ಓಡಾಡಲು ಜಾಗ ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಕೆಲವರು ಬೆಳೆದುನಿಂತಿದ್ದ ಜೋಳವನ್ನು ನಾಶಪಡಿಸಿರುವ ಘಟನೆ ಹಾಸನ ತಾಲೂಕಿನ ದುದ್ದ ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪಕ್ಕದ ಜಮೀನಿನ ಛಾಯಾ ಎಂಬುವವರ ಮೇಲೆ ಗೌಡೇಗೌಡರು ಪೊಲೀಸರಿಗೆ ದೂರು ನೀಡಿದ್ದಾರೆ. ದುದ್ದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಜಮೀನು ವಿವಾದದ ಹಿನ್ನೆಲೆಯಲ್ಲಿ ಬೆಳೆದುನಿಂತಿದ್ದ ಜೋಳವನ್ನು ನಾಶಪಡಿಸಿರುವ ಘಟನೆ ಹಾಸನ ತಾಲೂಕಿನ ದುದ್ದ ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಗೌಡೇಗೌಡ ಎಂಬುವವರ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳವನ್ನು ಕಡಿದು ನಾಶ ಮಾಡಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಗೌಡೇಗೌಡ ಎಂಬುವವರು ತಮಗೆ ಸೇರಿದ ಜಾಗವನ್ನು ಅಳತೆ ಮಾಡಿಸಿ ಜೋಳ ಬಿತ್ತನೆ ಮಾಡಿದ್ದರು. ಆದರೆ, ಈ ಜಮೀನಿನ ಆಸುಪಾಸಿನ ಜಮೀನಿನವರಿಗೆ ಓಡಾಡಲು ಜಾಗ ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಕೆಲವರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಪಕ್ಕದ ಜಮೀನಿನ ಛಾಯಾ ಎಂಬುವವರ ಮೇಲೆ ಗೌಡೇಗೌಡರು ಪೊಲೀಸರಿಗೆ ದೂರು ನೀಡಿದ್ದಾರೆ. ದುದ್ದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.