ರೈಲಿಗೆ ಬಿದ್ದು ಪಾಲಿಕೆ ವರ್ಕ್ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ

| Published : Nov 20 2024, 12:32 AM IST

ರೈಲಿಗೆ ಬಿದ್ದು ಪಾಲಿಕೆ ವರ್ಕ್ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಸೇವೆಯಿಂದ ಅಮಾನತುಗೊಂಡಿದ್ದ ಮಹಾನಗರ ಪಾಲಿಕೆಯ ವರ್ಕ್ ಇನ್‌ಸ್ಪೆಕ್ಟರ್‌ ಜೀವನ ನಿರ್ವಹಣೆ ಕಷ್ಟವಾಗಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ತಿ ನಗರ ಸಮೀಪದ ರೈಲ್ವೆ ಹಳಿಯಲ್ಲಿ ಮಂಗಳವಾರ ನಡೆದಿದೆ.

ದಾವಣಗೆರೆ: ಸೇವೆಯಿಂದ ಅಮಾನತುಗೊಂಡಿದ್ದ ಮಹಾನಗರ ಪಾಲಿಕೆಯ ವರ್ಕ್ ಇನ್‌ಸ್ಪೆಕ್ಟರ್‌ ಜೀವನ ನಿರ್ವಹಣೆ ಕಷ್ಟವಾಗಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ತಿ ನಗರ ಸಮೀಪದ ರೈಲ್ವೆ ಹಳಿಯಲ್ಲಿ ಮಂಗಳವಾರ ನಡೆದಿದೆ.

ನಗರದ ನಿಟುವಳ್ಳಿಯ 60 ಅಡಿ ರಸ್ತೆಯ ವಾಸಿ, ಪಾಲಿಕೆಯ ತಾಂತ್ರಿಕ ಶಾಖೆ ವರ್ಕ್‌ ಇನ್‌ಸ್ಪೆಕ್ಟರ್‌ ಟಿ.ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡ ನೌಕರ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಮಗ ಖಾಸಗಿಯವರ ಬಳಿ ಎಲೆಕ್ಟ್ರೀಷಿಯನ್‌ ಕೆಲಸ ಮಾಡುತ್ತಿದ್ದರೆ, ಮದುವೆ ಆಗಿರುವ ಮಗಳು ಹೈದ್ರಾಬಾದ್‌ನಲ್ಲಿ ಪತಿ ಮನೆಯಲ್ಲಿದ್ದಾರೆ.

ಪಿ.ಲಕ್ಷ್ಮಣ್‌ ಬಾಷಾ ನಗರ, ಅಹಮ್ಮದ್ ನಗರ ಭಾಗದಲ್ಲೇ ಪಾಲಿಕೆ ತಾಂತ್ರಿಕ ಶಾಖೆಯ ವರ್ಕ್ ಇನ್‌ಸ್ಪೆಕ್ಟರ್ ಆಗಿದ್ದರು. 8-10 ತಿಂಗಳ ಹಿಂದೆ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಕೆಲ ವಾರಗಳ ಹಿಂದೆ ಟಿ.ಲಕ್ಷ್ಮಣ್‌ ಅವರಿಗೆ ಪಾಲಿಕೆ ವೇತನ ಸಹ ಬಿಡುಗಡೆ ಆಗಿರಲಿಲ್ಲ ಎನ್ನಲಾಗಿದೆ. ಇದರಿಂದ ಖರ್ಚು-ವೆಚ್ಚಕ್ಕೆ ತೀವ್ರ ತೊಂದರೆಯಾಗಿತ್ತು. ಪಾಲಿಕೆ ಅಧಿಕಾರಿಗಳ ಬಳಿ ಪಿ.ಲಕ್ಷ್ಮಣ್‌ ಎಡತಾಕುತ್ತಿದ್ದರೂ ವೇತನ ನೀಡಿರಲಿಲ್ಲ. ಇದರಿಂದ ತೀವ್ರ ನೊಂದ ಲಕ್ಷ್ಮಣ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೂಲಗಳು ತಿಳಿಸಿವೆ.

ಲಕ್ಷ್ಮಣ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

- - - -19ಕೆಡಿವಿಜಿ64: ಟಿ.ಲಕ್ಷ್ಮಣ

-19ಕೆಡಿವಿಜಿ65: ಘಟನೆ ಸ್ಥಳದ ಬಳಿ ಟಿ.ಲಕ್ಷ್ಮಣ ಗುರುತಿನ ಪತ್ರ ಬಿದ್ದಿರುವುದು.