ಅಂಬೇಡ್ಕರ್ ಅವರು 32 ದೇಶ, ವಿದೇಶಿ ಪದವಿಗಳನ್ನು ಪಡೆದಿದ್ದಾರೆ. 9 ಭಾಷೆಗಳ ಪಾಂಡಿತ್ಯ ಹೊಂದಿ ಪ್ರತಿದಿನ 21 ಗಂಟೆ ಅಧ್ಯಯನ ಮಾಡುತ್ತಿದ್ದರು. ಅವರಿಗೆ ಅಷ್ಟು ಆಸಕ್ತಿ, ಶ್ರದ್ಧೆ, ಏಕಾಗ್ರತೆ ಇತ್ತು. 140ಕ್ಕೂ ಹೆಚ್ಚು ವಿದೇಶಿ ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಸ್ಮರಿಸುತ್ತಾರೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಕುರಿತು ಓದಿದರೆ ಜ್ಞಾನವಿಕಾಶಗೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಿಕ್ಷಣದಿಂದಲೂ ಸಾಧನೆ ಸಾಧ್ಯ ಎಂಬುದನ್ನು ತೊರಿಸಿಕೊಟ್ಟ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಹಿಮಾಲಯ ಪರ್ವತವಿದ್ದಂತೆ. ಏಂದೆಂದಿಗೂ ಕರಗದ ಜ್ಞಾನಶಿಖರ ಎಂದು ನಂಜಮ್ಮ ಮೋಟೆಗೌಡ ಚಾರಿಟಬಲ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಬಣ್ಣಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ ಮಲ್ಯಮಾಪನ ಸಭಾಂಗಣದಲ್ಲಿ ನಂಜಮ್ಮ ಮೋಟೆಗೌಡ ಚಾರಿಟಬಲ್ ಮತ್ತು ಎಜುಕೇಶನ್ ಟ್ರಸ್ಟ್ ಕೊಪ್ಪ, ಮಹಿಳಾ ಸರ್ಕಾರಿ ಕಾಲೇಜು ಆಂಗ್ಲ ಭಾಷಾ ವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು 32 ದೇಶ, ವಿದೇಶಿ ಪದವಿಗಳನ್ನು ಪಡೆದಿದ್ದಾರೆ. 9 ಭಾಷೆಗಳ ಪಾಂಡಿತ್ಯ ಹೊಂದಿ ಪ್ರತಿದಿನ 21 ಗಂಟೆ ಅಧ್ಯಯನ ಮಾಡುತ್ತಿದ್ದರು. ಅವರಿಗೆ ಅಷ್ಟು ಆಸಕ್ತಿ, ಶ್ರದ್ಧೆ, ಏಕಾಗ್ರತೆ ಇತ್ತು. 140ಕ್ಕೂ ಹೆಚ್ಚು ವಿದೇಶಿ ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಸ್ಮರಿಸುತ್ತಾರೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಕುರಿತು ಓದಿದರೆ ಜ್ಞಾನವಿಕಾಶಗೊಳ್ಳುತ್ತದೆ ಎಂದು ಸಲಹೆ ನೀಡಿದರು.

ಕಳೆದ 16ವರ್ಷಗಳಿಂದ ಟ್ರಸ್ಟ್ ವತಿಯಿಂದ ಹತ್ತಾರು ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಪ್ರಮುಖವಾಗಿ ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವರಿಗೆ ನೀಡುತ್ತಿದ್ದೇವೆ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ನವೀನ್ ಮಾತನಾಡಿ, ಅಂಬೇಡ್ಕರ್ ಅವರು ವ್ಯಕ್ತಿಯಲ್ಲ ಜಗತ್ತಿನ ಸಿದ್ಧಾಂತ ಮತ್ತು ವಿಶ್ವಜ್ಞಾನ. ಅವರನ್ನು ಕುರಿತು ಈ ಜಗತ್ತೇ ಓದುತ್ತಿದೆ. ಇತ್ತೀಚೆಗೆ ಅಂಬೇಡ್ಕರ್ ಜಯಂತಿಯನ್ನು ಏ.14ರಂದು ಒಂದು ದಿನ ಆಚರಿಸಿ ಉಳಿದ 364 ದಿನಗಳು ಮರೆಯುತ್ತಿದ್ದೇವೆ ಎಂದು ವಿಷಾಸಿದರು.

ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಕುವೆಂಪು ಸೇರಿದಂತೆ ಹಲವರನ್ನು ಒಂದೊಂದು ವರ್ಗಗಳಿಗೆ ಸೀಮಿತ ಪಡಿಸಿದ್ದೇವೆ.

ಅಂಬೇಡ್ಕರ್ ಕೊಟ್ಟ ಮೀಸಲಾತಿಯಿಂದ ಎಲ್ಲಾ ಜನಾಂಗವು ಪ್ರಗತಿ ಕಾಣುತ್ತಿವೆ. ಸಂವಿಧಾನದಿಂದ ಎಲ್ಲವೂ ಸೌಲಭ್ಯ-ಸೌಕರ್ಯಗಳು ಲಭ್ಯವಾಗುತ್ತಿವೆ ಎಂದರು.

ಇದೇ ವೇಳೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕಿ ವೈ.ಎಂ.ಸುಮಿತ್ರ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಗುರುರಾಜ ಪ್ರಭು, ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಟಿ.ಆರ್.ದೀಪಕ್, ಕಾಲೇಜು ವ್ಯವಸ್ಥಾಪಕ ಕೆ.ಪಿ. ರವಿಕಿರಣ್, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ 1ನೇ ಜಿಲ್ಲಾ ರಾಜ್ಯಪಾಲ ಕೆ.ಎಸ್. ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.