ದೇಶಕ್ಕೆ ಮೋದಿ ನೇತೃತ್ವ ಅಗತ್ಯವಿದೆ: ಅಣ್ಣಾಸಾಹೇಬ ಜೊಲ್ಲೆ

| Published : Mar 22 2024, 01:00 AM IST

ದೇಶಕ್ಕೆ ಮೋದಿ ನೇತೃತ್ವ ಅಗತ್ಯವಿದೆ: ಅಣ್ಣಾಸಾಹೇಬ ಜೊಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಗುರುವಾರ ಯಮಕನಮರಡಿ ಕ್ಷೇತ್ರದ ಕೆಲಗ್ರಾಮಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿ, ಯಮಕನಮರಡಿ ಮತ್ತೊಮ್ಮೆ ದೇಶಕ್ಕೆ ನರೇದ್ರ ಮೋದಿ ನೇತೃತ್ವ ಅಗತ್ಯವಾಗಿದ್ದು, ಕಾಶ್ಮೀರದ 370 ಆರ್ಟಿಕಲ್ ರದ್ದು ಹಾಗೂ ರಾಮಮಂದಿರ ನಿರ್ಮಾಣ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಹಲವಾರು ಉತ್ತಮ ಕಾರ್ಯ ಕೈಗೊಂಡಿದ್ದು, ಮತ್ತೆ ಮೋದಿಯವರು ಪ್ರಧಾನಿ ಮಾಡಲು ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಮತ್ತೊಮ್ಮೆ ದೇಶಕ್ಕೆ ನರೇದ್ರ ಮೋದಿ ನೇತೃತ್ವ ಅಗತ್ಯವಾಗಿದ್ದು, ಕಾಶ್ಮೀರದ 370 ಆರ್ಟಿಕಲ್ ರದ್ದು ಹಾಗೂ ರಾಮಮಂದಿರ ನಿರ್ಮಾಣ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಹಲವಾರು ಉತ್ತಮ ಕಾರ್ಯ ಕೈಗೊಂಡಿದ್ದು, ಮತ್ತೆ ಮೋದಿಯವರು ಪ್ರಧಾನಿ ಮಾಡಲು ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಗುರುವಾರ ಯಮಕನಮರಡಿ ಕ್ಷೇತ್ರದ ಕೆಲಗ್ರಾಮಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿ, ಸಾಧ್ಯವಿದ್ದಷ್ಟು ಯಮಕನಮರಡಿ ಕ್ಷೇತ್ರದ ಗ್ರಾಮಗಳ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು,

ಸತ್ಕಾರ: ಹತ್ತರಗಿಯ ಹರಿ ಮಂದಿರದ ಡಾ.ಆನಂದ ಮಹಾರಾಜ ಗೋಸಾವಿ, ಹತ್ತರಗಿಯ ಕಾರಿಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಜಾರಕಿಹೊಳಿಯ ಕೃಪಾನಂದ ಸ್ವಾಮೀಜಿಯನ್ನು ಭೇಟಿ ಮಾಡಿ ಉಭಯ ಶ್ರೀಗಳು ಸತ್ಕರಿಸಿದರು,

ಯಮಕನಮರಡಿ ಮತಕ್ಷೇತ್ರದ ಗೋಟೂರ, ಹೆಬ್ಬಾಳ, ಹಂಚಿನಾಳ, ಕರಗುಪ್ಪಿ ಸೇರಿದಂತೆ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಡಾ.ಆನಂದ ಮಹಾರಾಜ ಗೋಸಾವಿ ಅಣ್ಣಾಸಾಹೇಬ ಜೋಲ್ಲೆ ಅವರನ್ನು ಶಾಲು ಹೊಂದಿಸಿ ಸತ್ಕರಿಸಿದರು. ರಾಜ್ಯ ಬಿಜೆಪಿ, ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಬಿಜೆಪಿ, ಮುಖಂಡರಾದ ರವಿಂದ್ರ ಹಂಜಿ, ಯಮಕನಮರಡಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಳದ ಅಧ್ಯಕ್ಷ ಅಪ್ಪಯ್ಯಾ ಜಾಜರಿ, ಹಣಮಂತ ಇನಾಮದಾರ, ಮಹಾವೀರ ನಾಶಿಪುಡಿ, ಚಂದ್ರಕಾಂತ ಕಾಪಸಿ, ಚೇತನಗೌಡ ಪಾಟೀಲ, ಬಸವರಾಜ ಉದೋಶಿ, ಬಾಳಯ್ಯಾ ತವಗಮಠ, ಕೆಂಪಣ್ಣ ಕೋಚರಿ, ವಿನಯ ಪಾಟೀಲ, ಆನಂದ ಕಂಕಣವಾಡಿ ಇತರರು ಉಪಸ್ಥಿತರಿದ್ದರು.