ಸಾರಾಂಶ
ಪತಿ, ಪತ್ನಿ ತಮ್ಮ 1 ವರ್ಷದ ಗಂಡು ಮಗುವಿನ ಸಮೇತ ನಾಪತ್ತೆಯಾದ ಘಟನೆ ದಾವಣಗೆರೆ ನಗರದ ವಿನೋಬ ನಗರದಲ್ಲಿ ವರದಿಯಾಗಿದೆ. ವಿನೋಬ ನಗರ 1ನೇ ಮೇನ್, 7ನೇ ಕ್ರಾಸ್ ನಿವಾಸಿಯಾದ ಅಂಜನ್ ಬಾಬು (34), ಪತ್ನಿ ನಾಗವೇಣಿ (24) ಹಾಗೂ ನಕ್ಷತ್ರ (1) ಮನೆಯಿಂದ ನಾಪತ್ತೆಯಾಗಿರುವ ಕುಟುಂಬವಾಗಿದೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ ಪತಿ, ಪತ್ನಿ ತಮ್ಮ 1 ವರ್ಷದ ಗಂಡು ಮಗುವಿನ ಸಮೇತ ನಾಪತ್ತೆಯಾದ ಘಟನೆ ನಗರದ ವಿನೋಬ ನಗರದಲ್ಲಿ ವರದಿಯಾಗಿದೆ.
ವಿನೋಬ ನಗರ 1ನೇ ಮೇನ್, 7ನೇ ಕ್ರಾಸ್ ನಿವಾಸಿಯಾದ ಅಂಜನ್ ಬಾಬು (34), ಪತ್ನಿ ನಾಗವೇಣಿ (24) ಹಾಗೂ ನಕ್ಷತ್ರ (1) ಮನೆಯಿಂದ ನಾಪತ್ತೆಯಾಗಿರುವ ಕುಟುಂಬವಾಗಿದೆ.ಏ.12ರಂದು ಅಂಜನ್ ಬಾಬು, ನಾಗವೇಣಿ ದಂಪತಿ ತಮ್ಮ ಮಗುವಿನ ಸಮೇತ ಹೊರಹೋಗಿದ್ದರು. ಆದರೆ, ಈವರೆಗೆ ಮನೆಗೆ ವಾಪಸ್ ಬಂದಿಲ್ಲ. ಮೂವರನ್ನೂ ಹುಡುಕಿಕೊಡುವಂತೆ ಕುಟುಂಬವು ಬಡಾವಣೆ ಪೊಲೀಸ್ ಠಾಣೆಗೆ ದೂರು ದಾಖಲಿಸಿವೆ.
ನಾಪತ್ತೆಯಾದ ಅಂಜನಬಾಬು 5.6 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಮಾತನಾಡುತ್ತಾರೆ. ನಾಗವೇಣಿ 5 ಅಡಿ ಎತ್ತರವಿದ್ದು, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡುತ್ತಾರೆ ಎಂದು ದೂರಿನಲ್ಲಿ ಮಾಹಿತಿ ನೀಡಲಾಗಿದೆ.ಅಂಜನಬಾಬು, ಪತ್ನಿ, ಮಗುವಿನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಅಥವಾ ಸುಳಿವು ಸಿಕ್ಕರೆ ತಕ್ಷಣವೇ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆ, ದೂ: 08192-272012, 259213, 253400, 253100ಗೆ ಇಲ್ಲಿಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
- - - -21ಕೆಡಿವಿಜಿ4: ಅಂಜನಬಾಬು.-21ಕೆಡಿವಿಜಿ5: ನಾಗವೇಣಿ
-21ಕೆಡಿವಿಜಿ6: ನಕ್ಷತ್ರ