ಭಗವಾನ ಮಹಾವೀರ ತೊಟ್ಟಿಲೋತ್ಸವ

| Published : Apr 22 2024, 02:18 AM IST

ಸಾರಾಂಶ

ಬಸವನಬಾಗೇವಾಡಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಾವೀರರ ಜಯಂತಿ ಅಂಗವಾಗಿ ಮಹಾವೀರರ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು. ತೊಟ್ಟಿಲೋತ್ಸವಕ್ಕೂ ಮುನ್ನ ಬಾಹುಬಲಿ ದಂಡಾವತಿ ಅವರ ಮನೆಯಿಂದ ಭಗವಾನ್ ಮಹಾವೀರರ ಮೂರ್ತಿಯನ್ನು ವಾದ್ಯಮೇಳ, ವೇದ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಕಾಳಿಕಾದೇವಿ ದೇವಸ್ಥಾನಕ್ಕೆ ತರಲಾಯಿತು. ಮೂರ್ತಿಯನ್ನು ತೊಟ್ಟಿಲಲ್ಲಿ ಸಮಾಜದ ಮಹಿಳೆಯರು ಸಂಪ್ರದಾಯದಂತೆ ಹಾಕಿ ನಾಮಕರಣ ಮಾಡಿ ಭಕ್ತಿ ಗೀತೆಗಳನ್ನು ಹಾಡಿದರು.

ಬಸವನಬಾಗೇವಾಡಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಾವೀರರ ಜಯಂತಿ ಅಂಗವಾಗಿ ಮಹಾವೀರರ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು.

ತೊಟ್ಟಿಲೋತ್ಸವಕ್ಕೂ ಮುನ್ನ ಬಾಹುಬಲಿ ದಂಡಾವತಿ ಅವರ ಮನೆಯಿಂದ ಭಗವಾನ್ ಮಹಾವೀರರ ಮೂರ್ತಿಯನ್ನು ವಾದ್ಯಮೇಳ, ವೇದ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಕಾಳಿಕಾದೇವಿ ದೇವಸ್ಥಾನಕ್ಕೆ ತರಲಾಯಿತು. ಮೂರ್ತಿಯನ್ನು ತೊಟ್ಟಿಲಲ್ಲಿ ಸಮಾಜದ ಮಹಿಳೆಯರು ಸಂಪ್ರದಾಯದಂತೆ ಹಾಕಿ ನಾಮಕರಣ ಮಾಡಿ ಭಕ್ತಿ ಗೀತೆಗಳನ್ನು ಹಾಡಿದರು. ತೊಟ್ಟಿಲೋತ್ಸವದಲ್ಲಿ ಸುರೇಖಾ ಉಪಾಧ್ಯೆ, ಸುನಂದಾ ದಂಡಾವತಿ, ಕಸ್ತೂರಿ ಪಾಕಿ, ಸುಮತಿ ಹೊಸಮನಿ, ಸುನೀತಾ ದಂಡಾವತಿ, ವಿನುತಾ ಪಾಕಿ, ಅರ್ಚನಾ ದಂಡಾವತಿ, ಜನೇಶ್ವರಿ ಉಪಾಧ್ಯೆ, ಲಕ್ಷ್ಮೀ ಹೊಸಮನಿ, ಶೃತಿ ದಂಡಾವತಿ, ರಚನಾ ಹೊಸಮನಿ, ಅರ್ಚನಾ ನೇಜಕರ, ಆರಾಧ್ಯ ಕವಟೇಕರ, ಪ್ರಮೋದಿನಿ ಉಪಾಧ್ಯೆ, ದಿಂಡವಾರ, ಮನಗೂಳಿ, ವಡವಡಗಿ, ಕೂಡಗಿ, ಬೊಮನಳ್ಳಿ ಗ್ರಾಮದ ಜೈನ ಸಮಾಜ ಬಾಂಧವರು ಇದ್ದರು. ಇದೇ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸೃಷ್ಠಿ ಉಪಾಧ್ಯೆ, ಶಿಖರ ಗೊಂಗಡಿ ಸನ್ಮಾನಿಸಿ ಗೌರವಿಸಲಾಯಿತು.